Puneeth Rajkumar: ಅಪ್ಪು ಜೊತೆಗಿನ ನೆನಪನ್ನು ಹಂಚಿಕೊಂಡು ಕಣ್ಣೀರಾದ ಹರ್ಷಿಕಾ ಪೂಣಚ್ಚ

Suvarna News   | Asianet News
Published : Nov 27, 2021, 10:39 PM ISTUpdated : Nov 27, 2021, 10:46 PM IST
Puneeth Rajkumar: ಅಪ್ಪು ಜೊತೆಗಿನ ನೆನಪನ್ನು ಹಂಚಿಕೊಂಡು ಕಣ್ಣೀರಾದ ಹರ್ಷಿಕಾ ಪೂಣಚ್ಚ

ಸಾರಾಂಶ

ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀನಿ ಅಂತಾನೇ ನನಗೆ ಈಗಲೂ ಅನಿಸ್ತಿದೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಗಲಿ ದಿನಗಳೇ ಕಳೆದರೂ ಅಭಿಮಾನಿಗಳಿಗೆ ಇಂದಿಗೂ ಪುನೀತ್ ಇಲ್ಲ ಎಂಬುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಚಿತ್ರರಂಗದ ತಾರೆಯರು ಕೂಡ ಪುನೀತ್‌ರನ್ನು ನೆನೆದು ಭಾವುಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ  ಸ್ಯಾಂಡಲ್‌ವುಡ್‌ನ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರು ಪುನೀತ್ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಹೌದು! ಹರ್ಷಿಕಾ ಪೂಣಚ್ಚ ಚಿತ್ರರಂಗದ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡ, ಭೋಜ್‌ಪುರಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

ಇತ್ತೀಚೆಗೆ ಹರ್ಷಿಕಾ ಚಿತ್ರೀಕರಣಕ್ಕೆ ಬೇಲೂರಿಗೆ ಭೇಟಿ ನೀಡಿದ್ದು, ಅಲ್ಲಿಂದಲೇ ಇನ್‌ಸ್ಟಾಗ್ರಾಮ್ ಲೈವ್‌ಗೆ (Instagram Live) ಬಂದು ಪುನೀತ್ ಬಗೆಗಿನ ನೆನಪನ್ನು ಹಂಚಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಸರ್ ಅವರು ಮನೆಯಲ್ಲಿ ಇದ್ದಾರೆ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀನಿ ಅಂತಾನೇ ನನಗೆ ಈಗಲೂ ಅನಿಸ್ತಿದೆ. ಅಪ್ಪು ಸರ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬದವರ ಜೊತೆ ಇದ್ದಾರೆ. ಅವರು ಸಿಕ್ಕಾಗ ಮಾತಾಡಿಸಬೇಕು ಅಂತೆಲ್ಲ ಅನಿಸ್ತಿದೆ. 

Raghavendra Rajkumar on Appu: ನಿನ್ನಿಂದಲೇ ನನಗೆ ಚೈತನ್ಯ ಸಿಕ್ಕಿದ್ದು!

ಸದ್ಯ ನಾನು ಬೇಲೂರಿನಲ್ಲಿ ಶೂಟಿಂಗ್‌ನಲ್ಲಿ ಇದ್ದೇನೆ. ಕ್ಯಾರವಾನ್ (Caravan) ಅನ್ನು ಮೊದಲು ಪರಿಚಯಿಸಿದ್ದು ಅಪ್ಪು ಸರ್. 15-16ನೇ ವಯಸ್ಸಿನಲ್ಲಿ ನನ್ನ ಎರಡನೇಯ ಸಿನಿಮಾ ಜಾಕಿ (Jackie) ಶೂಟಿಂಗ್ ಸಮಯದಲ್ಲಿ ಸೆಟ್‌ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಅಪ್ಪು ಸರ್ ಅವರು. ಯಾಕಮ್ಮಾ ಹರ್ಷಿಕಾ ನನ್ನ ಕ್ಯಾರವನ್‌ನಲ್ಲಿ ಹೋಗಿ ಕುಳಿತುಕೊಳ್ಳಬಹುದಲ್ವಾ? ಎಂದು ಹೇಳಿದ್ದರು. ಯಾಕಂದರೆ ಆ ಸಮಯದಲ್ಲಿ ಸ್ಟಂಟ್, ಫೈಟ್ ನಡೀತಾ ಇತ್ತು. ಧೂಳು ತುಂಬಿತ್ತು. ಹೀಗಾಗಿ ಅಪ್ಪು ಸರ್ ನನ್ನ ಅಲ್ಲಿಂದ ಹೋಗುವಂತೆ ಹೇಳಿದ್ದರು. ಆಗ ನಾನು ಇಲ್ಲ ಸರ್ ಪರವಾಗಿಲ್ಲ ನಾನು ಇಲ್ಲೇ ಕುಳಿತಿರುತ್ತೇನೆ ಅಂತ ಹೇಳಿದೆ. 

Puneeth Rajkumar: ಅಪ್ಪು ಫೋಟೋ ಹಿಡಿದು ಶಬರಿಮಲೆಗೆ ಬಂದ ಭಕ್ತ

ಇಲ್ಲ ನೀನು ಹೋಗು ಅಲ್ಲಿ ಡ್ರೈಫ್ರೂಟ್ಸ್, ಹಣ್ಣುಗಳಿವೆ. ನಿಂಗೆ ಏನು ಬೇಕು ತಿನ್ನು, ರೆಸ್ಟ್ ಮಾಡು ಅಂತೆಲ್ಲ ಹೇಳಿದರು. ಇದೇ ಮಾತನ್ನು ನನ್ನ ತಾಯಿಗೂ ಹೇಳಿದರು. ಹೀಗಾಗಿ ನನಗೆ ಹಾಗೂ ನನ್ನ ಅಮ್ಮನಿಗೆ ಅಪ್ಪು ಸರ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ ಎಂದು ಭಾವುಕರಾದರು. ಎಷ್ಟು ದೊಡ್ಡ ಮನುಷ್ಯ. ಎಷ್ಟು ಒಳ್ಳೆಯ ಮನೆತನದಿಂದ ಬಂದಿದ್ದಾರೆ. ಆಗಿನ್ನು ನಾನು ಇಂಡಸ್ಟಿಗೆ ಹೊಸಬಳು. ಆದರೆ ನನಗೆ ಅವರ ಜೊತೆ ನಟಿಸಲು ಅವಕಾಶ ಮಾಡಿಕೊಟ್ಟರು. ದೇವರು ಯಾಕೆ ಇಷ್ಟೊಂದು ಕಟುಕ ಆದರು. ಯಾವ ಕಾರಣಕ್ಕೆ ಅವರನ್ನು ಕರೆದುಕೊಂಡರು. ಅವರು ಮಾಡಿರುವ ಒಳ್ಳೆಯ ವಿಚಾರಗಳು ಈಗ ಬಯಲಾಗುತ್ತಿವೆ ಎಂದು ಅಪ್ಪು ನೆನಪಿಸಿಕೊಂಡು ಹರ್ಷಿಕಾ ಕಣ್ಣೀರಾದರು.



ಇನ್ನು, ಜಾಕಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ನನ್ನ ಹಾಗೂ ಅಪ್ಪು ಸರ್‌ನ ಒಂದು ಗುಂಡಿ ತೋಡಿ ಒಳಗೆ ಹಾಕಿರುತ್ತಾರೆ. ಆ ಬಳಿಕ ನಮ್ಮ ಮೇಲೆ ಮಣ್ಣು ಹಾಕಿರುತ್ತಾರೆ. ಅದರ ಮೇಲೆ ಒಂದು ಕಲ್ಲು ಹಾಕಿ ಕ್ಲೋಸ್ ಮಾಡಿ ಬಿಡುತ್ತಾರೆ. ಆ ಸಂದರ್ಭದಲ್ಲಿ ಒಂದಷ್ಟು ಸೆಕೆಂಡ್ ನಲ್ಲಿ ಅದರೊಳಗಡೆಯೇ ಉಸಿರಾಡದೆ ನಾವು ಇರಬೇಕಿತ್ತು. ಇದಾದ ಬಳಿಕ ನಮ್ಮನ್ನ ಆ ಗುಂಡಿಯಿಂದ ನಮ್ಮನ್ನು ಹೊರಗೆ ತೆಗೆಯುತ್ತಾರೆ. ಈ ವೇಳೆ ಅಪ್ಪು ಸರ್ ಮೈ, ಮುಖದಲ್ಲೆಲ್ಲ ಪೂರ್ತಿ ಮಣ್ಣಾಗಿತ್ತು. ಆದರೆ ಮೊದಲು ನನ್ನ ಮುಖ ಒರೆಸಿ ನೀರು ಹಾಕಿ ಹರ್ಷಿಕಾ ಆರ್ ಯು ಓಕೆ ಅಂತೆಲ್ಲ ಕೇಳಿದರು. ಆದರೆ ಇಂದು ಇಂತಹ ಒಂದು ಒಬ್ಬ ದೇವತಾ ಮನುಷ್ಯನನ್ನು ಕರೆದುಕೊಳ್ಳುವಷ್ಟು ದೇವರು ಕಟುಕ ಯಾಕಾದ ಎಂದು ಹೇಳಿದರು.

ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ

ಅನೇಕ ಮಂದಿ ಕಟುಕರು ಈ ಭೂಮಿ ಮೇಲೆ ಇದ್ದಾರೆ. ಆದರೆ ಇಂತಹ ಒಳ್ಳೆಯ ಮನುಷ್ಯನನ್ನು ದೇವರು ಯಾಕೆ ಕರೆದುಕೊಂಡು ಹೋದರು ಅಂತ ದೇವರ ಮೇಲೆ ಕೋಪ ಬರುತ್ತಿದೆ. ಅಪ್ಪು ಸರ್ ತುಂಬಾ ಜನರನ್ನು ತಮ್ಮದೇ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಸಿಕ್ಕಾಗಲ್ಲೆಲ್ಲಾ ಆರೋಗ್ಯದ ಬಗ್ಗೆಯೇ ಮಾತನಾಡುತ್ತಾರೆ. ಹೇಗೆ ಸಣ್ಣ ಆಗಿದ್ದೀಯಾ. ಏನು ಡಯೆಟ್ ಮಾಡ್ತೀಯಾ ಅಂತೆಲ್ಲ ಕೇಳುತ್ತಿದ್ದರು. ಹಾಗೆಯೇ ಅವರನ್ನು ಕೊನೆಯ ಬಾರಿ ಆಸ್ಪತ್ರೆಗೆ ನೋಡಲು ಹೋದಾಗಲೂ ಎದ್ದು ಮಾತನಾಡಿಸುತ್ತಾರೆಂದು ಅಂದುಕೊಂಡೆ ಆದರೆ ಅವರು ಎದ್ದು ಮಾತನಾಡಲೇ ಇಲ್ಲ ಎಂದು ಹರ್ಷಿಕಾ ಬಿಕ್ಕಿ ಬಿಕ್ಕಿ ಅತ್ತರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?