ಹೊಂದಿಸಿ ಬರೆಯಿರಿ ಎಂದ ರಾಕೆಟ್ ಹುಡುಗಿ!

By Kannadaprabha News  |  First Published Oct 29, 2019, 9:05 AM IST

ಐಶಾನಿ ಶೆಟ್ಟಿ ರೀ ಎಂಟ್ರಿಯ ಬಳಿಕ ಬೇಡಿಕೆಯ ನಟಿ ಎನಿಸಿಕೊಳ್ಳುತ್ತಿದ್ದಾರೆ. ದೀಪಾವಳಿ ಪಟಾಕಿ ಸದ್ದಿನಲ್ಲೇ ಇವರು ಅಭಿನಯಿಸಿದ ಎರಡು ಚಿತ್ರಗಳ ಪೋಸ್ಟರ್ ಹಾಗೂ ಟೈಟಲ್, ಮತ್ತೊಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. 


ಈ ಪೈಕಿ ಒಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅಂದ ಹಾಗೆ ಐಶಾನಿ ಶೆಟ್ಟಿ ಕೈಯಲ್ಲಿರುವ ಮೂರು ಚಿತ್ರಗಳು ‘ನಮ್ ಗಣಿ ಬಿಕಾಂ ಪಾಸಾದ’, ‘ಧರಣಿ ಮಂಡಲ ಮಧ್ಯದೊಳಗೆ’ ಹಾಗೂ ಹೊಸದಾಗಿ ಒಪ್ಪಿಕೊಂಡ ‘ಹೊಂದಿಸಿ ಬರೆಯಿರಿ’. ಈಗಾಗಲೇ ‘ನಮ್ ಗಣಿ ಬಿಕಾಂ ಪಾಸಾದ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆಯಂತೆ.

ಗಣಿ ಜೊತೆ 10 ಲಕ್ಷ ಸಂಪಾದಿಸಲು ಮುಂದಾದ ಸ್ಯಾಂಡಲ್‌ವುಡ್ ನಟಿ!

Tap to resize

Latest Videos

undefined

ತುಂಬಾ ಹಿಂದೆಯೇ ‘ಗುಳ್ಟು’ ನವೀನ್ ಜೊತೆಗೆ ಒಪ್ಪಿಕೊಂಡಿದ್ದ ಚಿತ್ರದ ಪೋಸ್ಟರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಿದೆ. ಚಿತ್ರದ ಹೆಸರು ‘ಧರಣಿ ಮಂಡಲ ಮಧ್ಯದೊಳಗೆ’.

 

 
 
 
 
 
 
 
 
 
 
 
 
 

#NamGaniBcomPass trailer coming this 22nd!! 😍😍 #aishanishetty

A post shared by Aishani Shetty (@aishanishetty) on Oct 20, 2019 at 5:07am PDT

ಹಬ್ಬದ ಸಂಭ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದರು. ಶ್ರೀಧರ್ ಷಣ್ಮುಖ ಈ ಚಿತ್ರದ ನಿರ್ದೇಶಕರು. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಹೊಸತನದಿಂದ ಕೂಡಿದೆ. ನಿರೀಕ್ಷೆ ಹುಟ್ಟಿಸಿದೆ. ಇಡೀ ಸಿನಿಮಾದ ಕಥೆಯನ್ನು ಪೋಸ್ಟರ್‌ನಲ್ಲಿ ಹೇಳಿದ್ದು, ಕ್ರಿಯೇಟವ್ ಆಗಿದೆ. ಐಶಾನಿ ಅವರ ಮತ್ತೊಂದು ಸಿನಿಮಾ ‘ಹೊಂದಿಸಿ ಬರೆಯಿರಿ’. ನವೆಂಬರ್ 1 ರಂದು ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಜಗನ್ನಾಥ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಲಿದ್ದು ಪ್ರೀತಿ, ಸ್ನೇಹ ಹಾಗೂ ಸಂಬಂಧಗಳ ನೆರಳಿನಲ್ಲಿ ಇಡೀ ಸಿನಿಮಾ ಸಾಗುತ್ತದೆ.

ಪೂರ್ಣ ಪ್ರಮಾಣದ ನಟಿಯಾದ ಐಶಾನಿ ಶೆಟ್ಟಿ!

ನಟನೆಯಿಂದ ಒಂದಿಷ್ಟು ಬಿಡುವು ಮಾಡಿಕೊಂಡು ಓದು ಮುಗಿಸುವ ಜೊತೆಗೆ ಒಂದು ಕಿರು ಚಿತ್ರವನ್ನು ನಿರ್ದೇಶಿಸಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ಐಶಾನಿ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವುದು ಈ ಮೂಲಕ ಸಾಬೀತಾದಂತಾಗಿದೆ.

 

click me!