
ಸ್ಯಾಂಡಲ್‌ವುಡ್‌ನಲ್ಲಿ 'ವಾಸ್ತು ಪ್ರಕಾರ' ಹೊಸ ಅಲೆ ಎಬ್ಬಿಸಿದ ಸುಂದರಿ ಐಶಾನಿ ಶೆಟ್ಟಿ ಇದೀಗ ಮನೆಯಲ್ಲಿ ಅಮ್ಮನ ಜೊತೆ ವೆರೈಟಿ ಅಡುಗೆ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಅಭಿಮಾನಿಗಳ ಬಾಯಲ್ಲಿ ನೀರೂರುತ್ತಿದೆ.
‘ವಾಸ್ತು ಪ್ರಕಾರ’ ಹುಡುಗಿ ಐಶಾನಿ ಶೆಟ್ಟಿ ಅವರ ವೀಕೆಂಡ್‌ಗೊಂದು ಕಳೆ ಬಂದಿರೋದು ಕೋರಿ ರೊಟ್ಟಿ ಮೂಲಕ. ಊರಿನ ಮನೆಯಲ್ಲಿ ಈಕೆ ಕೋರಿ ರೊಟ್ಟಿ ಮಾಡಿರೋದು ಮಾತ್ರ ಅಲ್ಲ, ‘ಈ ಕೋರಿ ರೊಟ್ಟಿಯ ಘಮ ಆತ್ಮವನ್ನೇ ಸ್ಪರ್ಶಿಸೋ ಹಾಗಿದೆ’ ಅನ್ನೋ ಡೈಲಾಗ್ ಕೂಡಾ ಹೊಡೆದಿದ್ದಾರೆ. ಈ ಮೂಲಕ ತಾನು ಮಾಡಿರೋ ಕೋರಿ ರೊಟ್ಟಿಗೆ ಸಾಟಿಯೇ ಇಲ್ಲ ಅಂತ ಬೀಗುತ್ತಿದ್ದಾರೆ. ತುಳುನಾಡ ಹುಡುಗಿಯ ಈ ಅಡುಗೆ ಕಂಡು ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ.
ಸದ್ಯ 'ಹೊಂದಿಸಿ ಬರೆಯಿರಿ' ಹಾಗೂ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಚಿತ್ರೀಕರಣದಲ್ಲಿ ಐಶಾನಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಹೊಂದಿಸಿ ಬರೆಯಿರಿ ಚಿತ್ರಕ್ಕೆ ಐಶಾನಿ ಹೊಸ ಲುಕ್ ಟ್ರೈ ಮಾಡಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಐಶಾನಿ ಕೊಂಚ ಚೂಸಿಯಾದರೂ, ಒಳ್ಳೆ ಕತೆಗಳಿಗೆ ತಾಳ್ಮೆಯಿಂದ ಕಾಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.