
ಪತ್ರಕರ್ತರೊಂದಿಗೆ ಮಾತನಾಡಿದ ರಂಜನಿ ರಾಘವನ್, ‘ನಾವೆಲ್ಲ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇಂಥಾ ಸಮಯದಲ್ಲಿ ಅವಸ್ಥಾಂತರ ಸಿನಿಮಾದ ಮುಂದುವರಿಕೆ ಬಗ್ಗೆ ಮಾತನಾಡೋದು ಸ್ವಾರ್ಥ ಆಗುತ್ತೆ. ಅವಸ್ಥಾಂತರ ಸಿನಿಮಾದ ಫೋಟೋಶೂಟ್ ಆಗಿತ್ತು. ಮುಹೂರ್ತ ಆಗಿ ಶೂಟಿಂಗ್‌ಗೆ ರೆಡಿ ಆಗಿದ್ವಿ. ಅಷ್ಟೊತ್ತಿಗೆ ಕೊರೋನಾ ಲಾಕ್‌ಡೌನ್ ಆಯ್ತು. ಆಮೇಲೀಗ ಲಾಕ್‌ಡೌನ್ ಓಪನ್ ಆಗಿದೆ, ಶೂಟಿಂಗ್ ಶುರುವಾಗಿದೆ. ಈಗ ಈ ಸಿನಿಮಾ ಬಗ್ಗೆ ಯಾವ ನಿರ್ಧಾರ ಕೈಗೊಳ್ತಾರೋ ಗೊತ್ತಿಲ್ಲ’ ಎಂದಿದ್ದಾರೆ.
ಮೈಸೂರು ಮಹಾರಾಣಿ ಅವತಾರದಲ್ಲಿ ಕನ್ನಡತಿ, ಯಾಕೀ ಅಲಂಕಾರ?
‘ಅವಸ್ಥಾಂತರ ಬಿಟ್ಟರೆ ಟಕ್ಕರ್ ಚಿತ್ರ, ಐವರು ನಿರ್ದೇಶಕರ ಚಿತ್ರದಲ್ಲಿ ಜಯತೀರ್ಥ ಅವರ ಸಿನಿಮಾ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರಗಳು ಕೈಯಲ್ಲಿವೆ. ಕನ್ನಡತಿ ಟೀಮ್ ಮತ್ತೆ ಬೆಂಗಳೂರಲ್ಲಿ ಶೂಟಿಂಗ್ ಶುರುವಾಗಿದೆ. ಮತ್ತೆ ಸೀರಿಯಲ್ ಚಟುವಟಿಕೆಗಳು ಗರಿಗೆದರಿವೆ. ನಾನು ಕತೆ ಬರೆಯೋದ್ರಲ್ಲೂ ತೊಡಗಿಸಿಕೊಂಡಿದ್ದೇನೆ. ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.