ಕೋಟ್ಯಾಧಿಪತಿ ಹೆಂಡತಿ ಅದಿತಿ ಪ್ರಭುದೇವ?; ಕೊಂಕು ಮಾಡುವವರಿಗೆ ಉತ್ತರ ಕೊಟ್ಟ ನಟಿ

By Vaishnavi ChandrashekarFirst Published Feb 7, 2023, 3:11 PM IST
Highlights

ಯೂಟ್ಯೂಬ್ ವಿಡಿಯೋಗಳಿಗೆ ಪರ್ಸನಲ್‌ ಲೈಫ್‌ ಬಗ್ಗೆ ಕಾಮೆಂಟ್ ಮಾಡುವವರಿಗೆ ಉತ್ತರ ಕೊಟ್ಟ ಅದಿತಿ ಪ್ರಭುದೇವ... 

ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪರ್ಸನಲ್ ಲೈಫ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮದ್ವೆ ಆದ್ಮೇಲೆ ಸಿನಿಮಾ ಮಾಡಲ್ಲ ಎನ್ನುತ್ತಿದ್ದವರು ನಟಿಯ ಬ್ಯಾಕ್ ಟು ಬ್ಯಾಕ್ ರಿಲೀಸ್‌ ನೋಡಿ ಶಾಕ್ ಆಗಿದ್ದಾರೆ. ಶಶಿಕುಮಾರ್ ಪುತ್ರ ಅಕ್ಷಿತ್‌ಗೆ ಜೋಡಿಯಾಗಿ ಅಭಿನಯಿಸಿರುವ ಖೆಯೊಸ್‌ ಸಿನಿಮಾ ಫೆಬ್ರವರಿ 17ರಂದು ರಿಲೀಸ್ ಆಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಅದಿತಿ ಫುಲ್ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಪರ್ಸನಲ್‌ ಲೈಫ್‌ನ ವಿಚಾರವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

'ಒಂದು ವಿಚಾರವನ್ನು ತುಂಬಾ ಕ್ಲಿಯರ್ ಆಗಿ ಹೇಳಬೇಕು ನಾನು ಪ್ರತಿಯೊಬ್ಬರ ಜರ್ನಿನೂ ವಿಭಿನ್ನವಾಗಿರುತ್ತದೆ. ನಾಯಕಿಯರ ವಿಚಾರ ಹೇಳಬೇಕು ಅಂದ್ರೆ ಅವರ ಜೀವನ ಮೊದಲೇ ಸೆಟಲ್ ಆಗಿರುತ್ತದೆ, ಅವರಿಗೆ ಅಂತ ಒಂದು ಮನೆ ಇರುತ್ತದೆ ಅವರದ್ದೇ ಒಂದು ಬ್ಯಾಗೇಜ್‌ ಇರುತ್ತದೆ ಚೆನ್ನಾಗಿ ಸೆಟಲ್ ಆಗಿರುತ್ತಾರೆ ಹೀಗಾಗಿ ಅವರು ದುಡಿಯುವ ಅವಶ್ಯಕತೆ ಇರುವುದಿಲ್ಲ . ಎರಡು ವರ್ಷ ಕೆಲಸವಿಲ್ಲದೆ ಆರಾಮ್ ಆಗಿ ಕುಳಿತುಕೊಳ್ಳಬಹುದು ಎನ್ನುವ ಮನಸ್ಥಿತಿ ಅಥವಾ ಪರಿಸ್ಥಿತಿಯಲ್ಲಿ ನಾವಿಲ್ಲ. ಒಂದು ವರ್ಷ ಕೆಲಸ ಇಲ್ಲ ಅಂದ್ರೂ ಪರ್ವಾಗಿಲ್ಲ ಮನೆಯಲ್ಲಿ ಕುಳಿತುಕೊಂಡು ಕಾಯುವೆ ಎನ್ನುಷ್ಟು ನನಗೆ ಇರಲಿಲ್ಲ ಅದಿಕ್ಕೆ ಬರುವ 10 ಸಿನಿಮಾಗಳಲ್ಲಿ ನನಗೆ ಯಾವ ಪಾತ್ರ ಚೆನ್ನಾಗಿದೆ ನೋಡಿಕೊಂಡು ಒಪ್ಪಿಕೊಳ್ಳುತ್ತಿದ್ದೆ. ಈಗ ಸಿನಿಮಾ ಹಿಟ್ ಫ್ಲಾಪ್ ಅನ್ನೋ ವಿಚಾರ ಯಾರ ತಲೆಯಲ್ಲೂ ಇಲ್ಲ ಕೆಲವರು ಮಾತ್ರ 50 ದಿನ ಪೂರೈಸಿದರೆ ಹಿಟ್ ಹಾಗೆ ಹೀಗೆ ಅಂದುಕೊಳ್ಳಬಹುದು. ಈಗ ಸಿನಿಮಾ ಹೇಗೆ ಸಂಪಾದನೆ ಮಾಡುತ್ತದೆ ಅಂದ್ರೆ ಒಂದು ವಾರ ಥಿಯೇಟರ್‌ನಲ್ಲಿ ಸಿನಿಮಾ ಇದ್ರೆ ನನಗೆ ಆಡಿಯೋ ರೈಟ್ಸ್‌ ಸಿಗುತ್ತೆ, ಡಬ್ಬಿಂಗ್ ರೈಟ್ಸ್‌ ಸಿಗುತ್ತದೆ ಮತ್ತೆ ಓಟಿಟಿ- ಚಾನೆಲ್‌ಗೆ ಸಿಗುತ್ತದೆ. ಚಿತ್ರದ ಮೇಲೆ ಹಾಕಿರುವ ಬಜೆಟ್‌ಗಿಂತ ನಿರ್ಮಾಪಕರಿಗೆ ಹೆಚ್ಚಿಗೆ ಸಿಕ್ಕಿರುತ್ತದೆ ಅವರು ಫುಲ್ ಸೇಫ್ ಆಗಿರುತ್ತಾರೆ. ನಮ್ಮ ಪ್ರಕಾರ ಸಿನಿಮಾ ಹಿಟ್ ಅಂದ್ರೆ ನಿರ್ಮಾಪಕರು ಹಾಕಿರುವ ಹಣ ಹೆಚ್ಚಾಗಿ ಕೈಗೆ ಸೇರುವುದು' ಎಂದು ಅದಿತಿ ಪ್ರಭುದೇವ ಖಾಸಗಿ ವೆಬ್‌ನಲ್ಲಿ ಮಾತನಾಡಿದ್ದಾರೆ.

ಅದಿತಿ ಪ್ರಭುದೇವ ಮದುವೆಗೆ ರಣವೀರ್ ಸಿಂಗ್ ಡಿಸೈನರ್?; ಕಾಲೆಳೆದ ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ

'ನನ್ನ ವಿಚಾರದಲ್ಲಿ ನನಗೆ ಕೆಲಸ ಬೇಕಿತ್ತು ಸೇಫ್‌ ಗಾರ್ಡ್‌. ನನ್ನ ಯೂಟ್ಯೂಬ್‌ನಲ್ಲಿ ಕೆಲವರು ಕಾಮೆಂಟ್ ಮಾಡಿದ್ದರು ನೀವು ರೈತನ ಮದುವೆ ಆಗುತ್ತೀನಿ ಎಂದು ಕೋಟ್ಯಾಧಿಶ್ವರನ ಮದ್ವೆ ಆಗಿದ್ದೀರಾ ಅನ್ನೋರಿದ್ದಾರೆ...ಅವರಿಗೆ ನನ್ನ ಉತ್ತರ ಏನೆಂದರೆ ಇದೆಲ್ಲಾ ನಿಮಗೆ ಯಾರು ಹೇಳಿದ್ದರು? ನೀವು ಬಂದು ನೋಡಿದ್ದೀರಾ?  ಏನೇ ಇದ್ದರೂ ಅದು ಅವರದ್ದು. ನಮ್ಮ ಅಪ್ಪ ಇಷ್ಟು ಮಾಡಿದ್ದಾರೆ ಅದನ್ನು ಹೊಡ್ಕೊಂಡು ಚೆನ್ನಾಗಿ ತಿಂದು ಬಿಡುತ್ತೀನಿ ನನ್ನ ಗಂಡ ಮಾಡಿದ್ದಾನೆ ಅದನ್ನು ಹೊಡ್ಕೊಂಡು ತಿಂದು ಬಿಡುತ್ತೀನಿ ಅನ್ನೋ ವ್ಯಕ್ತಿ ನಾನಲ್ಲ. ನನಗೆ ನನ್ನ ಅಸ್ತಿತ್ವ ತುಂಬಾ ಮುಖ್ಯವಾಗುತ್ತದೆ ಯಾರ ಮೇಲೂ ಡಿಪೆಂಡ್ ಆಗಬಾರದು ಯಾರಿಗೂ ಬಾರ ಆಗಬಾರದು ಎಷ್ಟು ಆಗುತ್ತೆ ಅಷ್ಟು ದುಡಿಯಬೇಕು. ಒಳ್ಳೆ ಬ್ಯಾನರ್ ಸಿನಿಮಾ ಇರ್ಬೇಕು ಒಳ್ಳೆ ಕಥೆ ಇರ್ಬೇಕು ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆ ಸಿನಿಮಾದಲ್ಲಿ ದೊಡ್ಡ ಕಲಾವಿದರಿದ್ದಾರೆ ಇದೆಲ್ಲಾ ನೋಡಿಕೊಂಡು ಕಥೆ ಒಪ್ಪಿಕೊಳ್ಳುವೆ. ಕನ್ನಡ ಚಿತ್ರರಂಗಕ್ಕೆ ಸಾಯುವವರೆಗೂ ಋಣಿಯಾಗಿರುವೆ. ಅಯ್ಯೋ ಲೈಫ್ ಹಾಗೆ ಹೀಗೆ ಅನ್ನೋ ಆತಂಕ ಇಲ್ಲ ಮೈಂಡ್‌ ಫ್ರೀ ಆಗಿದೆ' ಎಂದು ಅದಿತಿ ಹೇಳಿದ್ದಾರೆ. 

click me!