'ಓಲ್ಡ್ ಮಾಂಕ್' ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ

By Suvarna News  |  First Published Jan 29, 2020, 11:24 AM IST

'ಬ್ರಹ್ಮಚಾರಿ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಅದಿತಿ ಫ್ರಭುದೇವ ಫುಲ್ ಬ್ಯುಸಿಯಾಗಿದ್ದಾರೆ. ಇದೀಗ 'ಓಲ್ಡ್ ಮಾಂಕ್' ಸಿನಿಮಾದಲ್ಲಿ ಶ್ರೀನಿ ಜೊತೆ ನಟಿಸುತ್ತಿದ್ದಾರೆ. 


ಶ್ರೀನಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ ಆಗಿದ್ದಾರೆ. ‘ರಂಗನಾಯಕಿ’ ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಮತ್ತು ಅದಿತಿ ತೆರೆ ಮೇಲೆ ಜತೆಯಾಗುತ್ತಿದ್ದಾರೆ.

ಏನ್ ವೈನಾಗಿ ಕುಣಿತವ್ಳೋ 'ಬ್ರಹ್ಮಚಾರಿ' ಬೆಡಗಿ!

Tap to resize

Latest Videos

‘ಸಾಕಷ್ಟು ನಟಿಯರನ್ನು ಆಡಿಷನ್ ಮಾಡಲಾಯಿತು. ಯಾರೂ ಕತೆಗೆ ಪೂರಕವಾಗಿ ಕಾಣಲಿಲ್ಲ. ನನ್ನ ಕತೆಯ ಪಾತ್ರಕ್ಕೆ ಅದಿತಿ ಅವರು ಸೂಕ್ತ ಅನಿಸಿತು. ಹೀಗಾಗಿ ಅವರನ್ನು ಆಯ್ಕೆ ಮಾಡಿಕೊಂಡೆ. ಚಿತ್ರದಲ್ಲಿ ಅವರ ಪಾತ್ರ ಹೇಗಿರುತ್ತದೆ, ಚಿತ್ರದ ಟೈಟಲ್‌ಗೂ ಅವರ ಕ್ಯಾರೆಕ್ಟರ್‌ಗೂ ಏನು ಸಂಬಂಧ ಎಂಬುದು ಕೂಡ ಇಲ್ಲಿನ ಮತ್ತೊಂದು ಕುತೂಹಲ. ಈಗಾಗಲೇ ನಮ್ಮ ಜೋಡಿಯನ್ನು ರಂಗನಾಯಕಿ ಚಿತ್ರದಲ್ಲಿ ನೋಡಿ ಮೆಚ್ಚಿದ್ದಾರೆ. ಈಗ ಓಲ್ಡ್ ಮಾಂಕ್ ಚಿತ್ರದ ಸರದಿ’ ಎನ್ನುತ್ತಾರೆ ನಿರ್ದೇಶಕ ಶ್ರೀನಿ. 

 

click me!