'ವಂದೇ ಮಾತರಂ' ಗೀತೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್; ಉಳಿದ ಸಾಧಕರೆಲ್ಲಿ ಎಂದ ಜನ

Published : Aug 15, 2022, 10:34 AM IST
'ವಂದೇ ಮಾತರಂ' ಗೀತೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್; ಉಳಿದ ಸಾಧಕರೆಲ್ಲಿ ಎಂದ ಜನ

ಸಾರಾಂಶ

ಸ್ಯಾಂಡಲ್‌ವುಡ್ ಸ್ಟಾರ್ಸ್ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಗೀತೆಯ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ.  ಹೌದು, 'ವಂದೇ ಮಾತರಂ' ಹಾಡಿನ ಮೂಲಕ ಕನ್ನಡ ನಟರು ಒಂದಾಗಿದ್ದಾರೆ.  ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್​ ಖಾತೆ ಮೂಲಕ ಶೇರ್​ ಮಾಡಲಾಗಿದೆ.

ದೇಶದಾದ್ಯಂತ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲೆಲ್ಲೂ ಅಜಾದಿ ಸ್ವಾತಂತ್ರ್ಯೋತ್ಸವ ಕಳೆಕಟ್ಟಿದೆ. ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರುತ್ತಿದೆ. ಇದೇ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಲಾಗುತ್ತಿದೆ. 75ನೇ ಸ್ವಾತಂತ್ರ್ಯೋತ್ಸವದ ಈ ಅಮೃತಮಹೋತ್ಸವ ಘಳಿಗೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ  ತಿರಂಗಾ ಹಾರಿಸಲಾಗಿದೆ. ಸ್ಯಾಂಡಲ್‌ವುಡ್ ಸ್ಟಾರ್ಸ್ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಗೀತೆಯ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ. ಹೌದು, 'ವಂದೇ ಮಾತರಂ' ಹಾಡಿನ ಮೂಲಕ ಕನ್ನಡ ನಟರು ಒಂದಾಗಿದ್ದಾರೆ.  ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್​ ಖಾತೆ ಮೂಲಕ ಶೇರ್​ ಮಾಡಲಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, 'ವಂದೇ ಮಾತರಂ...ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​, ಜಗ್ಗೇಶ್​, ರಮೇಶ್​ ಅರವಿಂದ್​, ಅನಂತ್​ ನಾಗ್​, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್​ ಶೆಟ್ಟಿ, ರವಿಚಂದ್ರನ್​, ಗಣೇಶ್​, ಧನಂಜಯ್ ಇನ್ನು ಕೆಲ ನಟರು ಕಾಣಿಸಿಕೊಂಡಿದ್ದಾರೆ. ಇನ್ನು ಸಾಲುಮರದ ತಿಮ್ಮಕ್ಕ, ವೆಂಕಟೇಶ್​ ಪ್ರಸಾದ್​, ಎಸ್​.ಎಲ್​. ಬೈರಪ್ಪ ಮುಂತಾದವರು ಕೂಡ ಇದ್ದಾರೆ. 

Har Ghar Tiranga; ಆಮೀರ್ ಖಾನ್ ಮನೆ ಮೇಲೆ ಹಾರಿದ ತಿರಂಗಾ, ಫೋಟೋ ವೈರಲ್

ಈ ಗೀತೆಯನ್ನು ರಿಲೀಸ್ ಮಾಡುತ್ತಿದ್ದಂತೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸಾಧಕರು ಇಷ್ಟೆ ಜನನಾ? ಉಳಿದ ಸಾಧಕರೆಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮಿಸ್ ಆಗಿದ್ದಾರೆ. ಉಳಿದ ಕಲಾವಿದರಲ್ಲಿ, ಕೇವಲ ನಟರು ಮಾತ್ರ ಇದ್ದಾರೆ, ನಟಿಯರು ಸಾಧನೆ ಮಾಡಿಲ್ಲವಾ ಎಂದು ಜನರು ತರಾಟೆ ತೆಗೆದುಕೊಂಡಿದ್ದಾರೆ. 

ಕೈ ಮೇಲೆ ತಿರಂಗಾ ಅಚ್ಚೆ ಹಾಕಿಸಿಕೊಂಡ ನಿರ್ದೇಶಕ ಕುಮಾರ್!

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಗೀತೆಯಲ್ಲಿ ಪುನೀತ್ ಅವರ ಒಂದು ಫೋಟೋವಾದರೂ ಇರಬೇಕಿತ್ತು. ಆದರೆ ಅಪ್ಪು ಅವರನ್ನು ಮರೆತಿದ್ದಾರೆ ಎಂದು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?