ಧನ್ವೀರ್ ವಿರುದ್ಧ ಫಿಲಂ ಚೇಂಬರ್‌ಗೆ ದೂರು ನೀಡಿದ ಝೈದ್ ಖಾನ್! ಹಿಂದಿರೋ ಸ್ಪೋಟಕ ಮಾಹಿತಿ ಏನು?

Published : Oct 26, 2026, 02:36 PM IST
Dhanveer Gowda Darshan Zaid Khan

ಸಾರಾಂಶ

ನಟ ಝೈದ್ ಖಾನ್ ಹಾಗೂ ಧನ್ವೀರ್ ಗೌಡ ಮಧ್ಯೆ ಏನಾಗಿದೆ? ಇತ್ತೀಚೆಗೆ ಅವರಿಬ್ಬರ ಸಂಬಂಧ ಹೇಗಿದೆಯೋ ಏನೋ ಅಂತ ಕುತೂಹಲ ಇದ್ದವರಿಗೆ ಇದೀಗ ಉತ್ತರ ಸಿಕ್ಕಿದೆ ಎನ್ನಬಹುದು. ಕಾರಣ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ, ದರ್ಶನ್ ಆಪ್ತ ಧನ್ವೀರ್ ಗೌಡ ಅವರದು ಎಂದು ಹೇಳಲಾಗುತ್ತಿರುವ ಆಡಿಯೋದಲ್ಲಿ ಏನಿದೆ? ನೋಡಿ..

ಧನ್ವೀರ್ ಗೌಡ ವಿರುದ್ಧ ಫಿಲಂ ಚೇಂಬರ್‌ಗೆ ಮತ್ತೊಬ್ಬ ನಟ ದೂರು; ಏನಿದು ಹೊಸ ಬೆಳವಣಿಗೆ?

ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಸದ್ಯಕ್ಕೆ ತುಂಬಾ ಸೆನ್ಸೇಷನ್ ಸೃಷ್ಟಿಸುತ್ತಿರುವ ಸಂಗತಿ ಎಂದರೆ ಅದು ದರ್ಶನ್ ಪರಮಾಪ್ತ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ಇಬ್ಬರ ಕುಟುಂಬದ ಆಪ್ತರ ಬೀದಿ ಜಗಳ ಎನ್ನಬಹುದು. ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರಿಬ್ಬರ ಮಧ್ಯೆ ತಮ್ಮತಮ್ಮ ಆಪ್ತರ ಮೂಲಕ ನಡೆಯುತ್ತಿರುವ ಮನಸ್ತಾಪ ಹಾಗೂ ಕಾನೂನು ಹೋರಾಟ ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದೀಗ ಈ ವಿವಾದಕ್ಕೆ ದರ್ಶನ್ ಆಪ್ತ, ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ (Zaid Khan) ಎಂಟ್ರಿ ಕೊಟ್ಟಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ಸ್ಯಾಂಡಲ್‌ವುಡ್ ನಟ ಝೈದ್ ಖಾನ್

ಹೌದು, ಒಂದು ಕಾಲದಲ್ಲಿ ನಟ ದರ್ಶನ್ ಅವರಿಗೆ ಅತ್ಯಂತ ಆಪ್ತರಾಗಿದ್ದ ಬಳಗದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ಸ್ಯಾಂಡಲ್‌ವುಡ್ ನಟ ಝೈದ್ ಖಾನ್ ಕೂಡ ಸೇರಿದ್ದಾರೆ. ಇತ್ತೀಚೆಗೆ ಅವರಿಬ್ಬರ ಸಂಬಂಧ ಹೇಗಿದೆಯೋ ಏನೋ ಅಂತ ಕುತೂಹಲ ಇದ್ದವರಿಗೆ ಇದೀಗ ಉತ್ತರ ಸಿಕ್ಕಿದೆ ಎನ್ನಬಹುದು. ಕಾರಣ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ, ದರ್ಶನ್ ಆಪ್ತ ಧನ್ವೀರ್ ಗೌಡ ಅವರದು ಎಂದು ಹೇಳಲಾಗುತ್ತಿರುವ ಆಡಿಯೋದಲ್ಲಿ ನಟ ಧನ್ವೀರ್ ಅವರು ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ, ಟನ ಝೈದ್ ಖಾನ್ ಅವರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲಂ ಚೇಂಬರ್) ಯಲ್ಲಿ ಸಭೆ ಕರೆದಿದ್ದು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲ, ನಟ ಧನ್ವೀರ್ ಗೌಡ ವಿರುದ್ಧ ಈಗಾಗಲೇ ಹಲವರು ರೊಚ್ಚಿಗೆದ್ದಿದ್ದಾರೆ. ಅವರ ವಿರುದ್ಧ ಮನಸ್ತಾಪ ಹಾಗೂ ಕಾನೂನು ಹೋರಾಟ ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದೀಗ, ಈ ವಿವಾದಕ್ಕೆ ದರ್ಶನ್ ಆಪ್ತ ಮಾಜಿ ಪುರಸಭೆ ಸದಸ್ಯ, ನಟ ಅರ್ಜುನ್ ರಮೇಶ್ ಎಂಟ್ರಿ ಕೊಟ್ಟಿದ್ದಾರೆ.

ಧನ್ವೀರ್ ಗೆ ಟಾಂಗ್ ಕೊಟ್ಟ ದರ್ಶನ್ ಆಪ್ತ ಮಾಜಿ ಪುರಸಭೆ ಸದಸ್ಯ, ನಟ ಅರ್ಜುನ್ ರಮೇಶ್!

ಹೌದು, ದರ್ಶನ್ ಆಪ್ತ, ಮಾಜಿ ಪುರಸಭೆ ಸದಸ್ಯ ಅರ್ಜುನ್ ರಮೇಶ್ ಅವರು ನಟ ಧನ್ವೀರ್ ಗೌಡ ವಿರುದ್ಧ ಧ್ವನಿ ಎತ್ತಿದ್ದಾರೆ. ಕಳೆದ ವರ್ಷ ಬೇಲ್ ಮೂಲಕ ಜೈಲಿನಿಂದ ಆಚೆ ಬಂದಾಗ ನಟ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಿದ್ದ ಅರ್ಜುನ್ ರಮೇಶ್ ಅವರು ಇದೀಗ ನಟ ಧನ್ವೀರ್ ಗೌಡ ಅವರ ವಿರುದ್ಧ ಅದೇನು ಹೇಳಿದ್ದಾರೆ ನೋಡಿ..

"ಅಣ್ಣ ಅಣ್ಣ ಅಂತಿದವನು ಈಗ ದರ್ಶನ್ ಸರ್ ಅಂತಾನೆ.. ಅಣ್ಣನ ಹೆಸರನ್ನ ಹೇಳಿಕೊಂಡು ಗುರುತಿಸಿಕೊಂಡಿರುವವನು ನಟ ಧನ್ವೀರ್.

ಒಳ ಜಗಳ ಏನೆ ಇದ್ದರೂ ಮೌನವಾಗಿದ್ದು ಎದುರಿಸಬೇಕಿತ್ತು.. ಇಲ್ಲಿ ಇವರೆಲ್ಲರ ಜಗಳಗಳಿಂದ ಹರ್ಟ್ ಆಗ್ತಾ ಇರೋದು ದರ್ಶನ್ ಸರ್‌ ಅವರಿಗೆ.. ಆಡುವ ಮಾತಿನ ಮೇಲೆ ನಿಗಾ ಇರಬೇಕು, ಅಷ್ಟು ಕೆಟ್ಟ ಪದಬಳಕೆ ಮಾಡಿದ್ದಾರೆ ಧನ್ವೀರ್ ಗೌಡ. ಅಮ್ಮ ಅಕ್ಕ ಅಂತ ಮನೆ ಮಂದಿಗೆಲ್ಲ ಬೈಯೋದಾ? ಅವರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವಾ? ಅದರಲ್ಲೂ ಸಿಎಂ ವಿಚಾರವನ್ನೆಲ್ಲಾ ಪ್ರಸ್ತಾಪಿಸುವ ಅವಶ್ಯಕತೆ ಇತ್ತಾ?" ಎಂದಿದ್ದಾರೆ ಏಷ್ಯಾನೆಟ್ ಸುವರ್ಣ ಪ್ರತಿನಿಧಿಯೊಡನೆ 'ಚಿಟ್‌ಚಾಟ್‌'ನಲ್ಲಿ ಮಾತನ್ನಾಡಿರುವ ಅರ್ಜುನ್ ರಮೇಶ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಶ್‌ರ ಆ ಸಿನಿಮಾದ ದಾಖಲೆಗೆ ಸವಾಲು ಹಾಕಿದ ಪ್ರೇಮದ ಊರಲಿ: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ
‘ರಂಗಿತರಂಗ’ ಕಾಂಬಿನೇಷನ್‌ಗೆ ಶಿವಣ್ಣ ಸಾಥ್: 'ಸತ್ಯ ಸನ್ ಆಫ್ ಹರಿಶ್ಚಂದ್ರ' ಟೀಸರ್ ನೋಡಿದ್ರಾ?