
ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜಗಳಕ್ಕೆ ಮತ್ತೊಬ್ಬರ ಎಂಟ್ರಿ!
ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಸದ್ಯ ತುಂಬಾ ಸೆನ್ಸೇಷನ್ ಸೃಷ್ಟಿಸುತ್ತಿರುವ ಸಂಗತಿ ಎಂದರೆ ಅದು ದರ್ಶನ್ ಪರಮಾಪ್ತ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ಇಬ್ಬರ ಕುಟುಂಬದ ಆಪ್ತರ ಬೀದಿ ಜಗಳ ಎನ್ನಬಹುದು. ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರಿಬ್ಬರ ಮಧ್ಯೆ ತಮ್ಮತಮ್ಮ ಆಪ್ತರ ಮೂಲಕ ನಡೆಯುತ್ತಿರುವ ಮನಸ್ತಾಪ ಹಾಗೂ ಕಾನೂನು ಹೋರಾಟ ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದೀಗ, ಈ ವಿವಾದಕ್ಕೆ ದರ್ಶನ್ ಆಪ್ತ ಮಾಜಿ ಪುರಸಭೆ ಸದಸ್ಯ, ನಟ ಅರ್ಜುನ್ ರಮೇಶ್ ಎಂಟ್ರಿ ಕೊಟ್ಟಿದ್ದಾರೆ.
ಧನ್ವೀರ್ ಗೆ ಟಾಂಗ್ ಕೊಟ್ಟ ದರ್ಶನ್ ಆಪ್ತ ಮಾಜಿ ಪುರಸಭೆ ಸದಸ್ಯ, ನಟ ಅರ್ಜುನ್ ರಮೇಶ್:- ಹೌದು, ದರ್ಶನ್ ಆಪ್ತ, ಮಾಜಿ ಪುರಸಭೆ ಸದಸ್ಯ ಅರ್ಜುನ್ ರಮೇಶ್ ಅವರು ನಟ ಧನ್ವೀರ್ ಗೌಡ ವಿರುದ್ಧ ಧ್ವನಿ ಎತ್ತಿದ್ದಾರೆ. ಕಳೆದ ವರ್ಷ ಬೇಲ್ ಮೂಲಕ ಜೈಲಿನಿಂದ ಆಚೆ ಬಂದಾಗ ನಟ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಿದ್ದ ಅರ್ಜುನ್ ರಮೇಶ್ ಅವರು ಇದೀಗ ನಟ ಧನ್ವೀರ್ ಗೌಡ ಅವರ ವಿರುದ್ಧ ಅದೇನು ಹೇಳಿದ್ದಾರೆ ನೋಡಿ..
"ಧನ್ವೀರ್ ಗೌಡ ಈ ಮೊದಲು ಅಣ್ಣ ಅಣ್ಣ ಅಂತಿದವನು ಈಗ ದರ್ಶನ್ ಸರ್ ಅಂತಾನೆ.. ಅಣ್ಣನ ಹೆಸರನ್ನ ಹೇಳಿಕೊಂಡು ಗುರುತಿಸಿಕೊಂಡಿರುವವನು ನಟ ಧನ್ವೀರ್.
ಒಳ ಜಗಳ ಏನೆ ಇದ್ದರೂ ಮೌನವಾಗಿದ್ದು ಎದುರಿಸಬೇಕಿತ್ತು.. ಇಲ್ಲಿ ಇವರೆಲ್ಲರ ಜಗಳಗಳಿಂದ ಹರ್ಟ್ ಆಗ್ತಾ ಇರೋದು ದರ್ಶನ್ ಸರ್ ಅವರಿಗೆ.. ಆಡುವ ಮಾತಿನ ಮೇಲೆ ನಿಗಾ ಇರಬೇಕು, ಅಷ್ಟು ಕೆಟ್ಟ ಪದಬಳಕೆ ಮಾಡಿದ್ದಾರೆ ಧನ್ವೀರ್ ಗೌಡ. ಅಮ್ಮ ಅಕ್ಕ ಅಂತ ಮನೆ ಮಂದಿಗೆಲ್ಲ ಬೈಯೋದಾ? ಅವರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವಾ? ಅದರಲ್ಲೂ ಸಿಎಂ ವಿಚಾರವನ್ನೆಲ್ಲಾ ಪ್ರಸ್ತಾಪಿಸುವ ಅವಶ್ಯಕತೆ ಇತ್ತಾ?" ಎಂದಿದ್ದಾರೆ ಏಷ್ಯಾನೆಟ್ ಸುವರ್ಣ ಪ್ರತಿನಿಧಿಯೊಡನೆ 'ಚಿಟ್‌ಚಾಟ್'ನಲ್ಲಿ ಮಾತನ್ನಾಡಿರುವ ಅರ್ಜುನ್ ರಮೇಶ್.
ವಿಜಯಲಕ್ಷ್ಮಿ ಆಪ್ತರಿಂದ ಧನ್ವೀರ್ ವಿರುದ್ಧ ದೂರು
ಸಾಮಾಜಿಕ ಜಾಲತಾಣದ ವಾಗ್ವಾದದ ನಡುವೆಯೇ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ದೂರವಾಣಿ ಮೂಲಕ ಸಂಪರ್ಕಿಸಿದಾಗ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬುದು ನಾಗರಾಜ್ ಅವರ ಆರೋಪವಾಗಿದೆ. ಈ ಸಂಬಂಧ ಆಡಿಯೋ ಸಾಕ್ಷ್ಯವನ್ನೂ ಪೊಲೀಸರಿಗೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಆರೋಪಗಳ ಕುರಿತು ಧನ್ವೀರ್ ಅವರ ಪ್ರತಿಕ್ರಿಯೆ ಹಾಗೂ ತನಿಖೆಯ ಸಂಪೂರ್ಣ ವಿವರಗಳು ಬಹಿರಂಗವಾಗಬೇಕಿದೆ. ಹೀಗಾಗಿ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಸಾಬೀತಾದ ಸಂಗತಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ.
ಧನ್ವೀರ್ ತಂದೆಯಿಂದಲೂ ಪ್ರತಿದೂರು
ಇತ್ತ ಧನ್ವೀರ್ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಅವರ ತಂದೆ ತಿಮ್ಮೇಗೌಡ ಕೂಡ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ ಎನ್ನಲಾಗಿದೆ.
ವಿಜಯಲಕ್ಷ್ಮಿ, ನಾಗರಾಜ್ ಹಾಗೂ ಅವರ ಜೊತೆಗಿದ್ದವರು ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಗಲಾಟೆ ನಡೆಸಿ, ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನು ತಿಮ್ಮೇಗೌಡ ಮಾಡಿದ್ದಾರೆ ಎಂದು ವರದಿಯಾಗಿದೆ. ಧನ್ವೀರ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ ಎಂಬುದು ಅವರ ಕಡೆಯವರ ವಾದವಾಗಿದೆ.
ಹೀಗೆ ಎರಡೂ ಕಡೆಯಿಂದ ದೂರುಗಳು ದಾಖಲಾಗಿರುವುದರಿಂದ ವಿವಾದ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಒಂದು ಕಡೆ ದೂರವಾಣಿ ಕರೆ ಮೂಲಕ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪವಿದ್ದರೆ, ಮತ್ತೊಂದೆಡೆ ಮನೆಗೆ ನುಗ್ಗಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಈ ಎರಡೂ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ.
ದರ್ಶನ್ ಬಿಡುಗಡೆ ವಿಚಾರದ ಹಿಂದೆ ಬೇರೇನಾದರೂ ಇದೆಯೇ?
ದರ್ಶನ್ ಜೈಲಿನಲ್ಲಿರುವಾಗ ಅವರ ಕುಟುಂಬದ ಜೊತೆ ಗುರುತಿಸಿಕೊಂಡಿದ್ದ ಆಪ್ತರ ನಡುವೆ ಇಂತಹ ಸಂಘರ್ಷ ಏಕೆ ಉಂಟಾಯಿತು ಎಂಬುದು ಈಗ ಅಭಿಮಾನಿಗಳ ಪ್ರಮುಖ ಪ್ರಶ್ನೆಯಾಗಿದೆ. ದರ್ಶನ್ ಅವರ ಬಿಡುಗಡೆಗೆ ಸಂಬಂಧಿಸಿದ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆಯೇ ಅಥವಾ ವೈಯಕ್ತಿಕ ಕಾರಣಗಳಿಂದ ಇವರ ಸಂಬಂಧ ಹದಗೆಟ್ಟಿದೆಯೇ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆಲವರು ಹೇಳುವ ಪ್ರಕಾರ ಇದರಲ್ಲಿ ಹಣದ ವ್ಯವಹಾರವೂ ಸೇರಿದೆ. ಆದರೆ, ತನಿಖೆ ಬಳಿಕವಷ್ಟೇ ಸತ್ಯ ಹೊರಗೆ ಬರಬೇಕಿದೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ವೈರಲ್ ಆಡಿಯೋ ಕುರಿತ ಚರ್ಚೆಗಳು ಹಾಗೂ ಪರಸ್ಪರ ದೂರುಗಳು ಈ ಪ್ರಕರಣದ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿವೆ. ಆದರೆ, ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಮನಸ್ತಾಪಕ್ಕೆ ದರ್ಶನ್ ಬಿಡುಗಡೆ ಪ್ರಯತ್ನಗಳೇ ಕಾರಣ ಎಂಬುದನ್ನು ದೃಢಪಡಿಸುವ ಅಧಿಕೃತ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಒಟ್ಟಿನಲ್ಲಿ, ದರ್ಶನ್ ಅವರ ಸಂಕಷ್ಟದ ಸಮಯದಲ್ಲಿ ಜೊತೆಯಾಗಿದ್ದ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ಸಂಬಂಧದಲ್ಲಿ ಏನಾಯಿತು ಎಂಬ ಕುತೂಹಲ ಮಾತ್ರ ಹೆಚ್ಚಾಗಿದೆ. ಎರಡೂ ಕಡೆಯವರ ಹೇಳಿಕೆಗಳು ಮತ್ತು ಪೊಲೀಸ್ ತನಿಖೆಯ ಮುಂದಿನ ಬೆಳವಣಿಗೆಗಳು ಹೊರಬಂದ ಬಳಿಕವೇ ಈ ವಿವಾದದ ನೈಜ ಹಿನ್ನೆಲೆ ಸ್ಪಷ್ಟವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.