ಯಶ್ ಟಾಕ್ಸಿಕ್ ಚಿತ್ರದಲ್ಲಿ ಮತ್ತೊಬ್ಬ ನಟ ಸೇರ್ಪಡೆ. ಆ ಖ್ಯಾತ ನಟನ ಪಾತ್ರವೇನು? ಯಾರು ಅ ನಟ?
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರದ ಮೂಲಕ ದೇಶಾದ್ಯಂತ ರಾಕಿ ಬಾಯ್ ಆಗಿ ಪರಿಚಯವಾದರು. ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ನಂತರ ಚಾಪ್ಟರ್ 3 ಬರಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದ ಸಮಯದಲ್ಲಿ ಟಾಕ್ಸಿಕ್ ಸಿನಿಮಾ ಅನೌನ್ಸ್ ಮಾಡಿಬಿಟ್ಟರು. ಮಲಯಾಳಂ ಮೂಲದ ನಟಿ ಹಾಗೂ ನಿರ್ದೇಶಕಿಯಾಗಿರುವ ಗೀತಾ ಮೋಹನ್‌ದಾಸ್ ಟಾಕ್ಸಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರಂಭದಲ್ಲಿ ಇಷ್ಟೇ ಮಾಹಿತಿ ಹೊರ ಬಂದಿದ್ದು....ಆದಾದ ಮೇಲೆ ಏನೇ ಮಾಹಿತಿ ಸಿಕ್ಕಿದ್ದಯಶ್ ಟಾಕ್ಸಿಕ್ ಚಿತ್ರದಲ್ಲಿ ಮತ್ತೊಬ್ಬ ನಟ ಸೇರ್ಪಡೆ. ಆ ಖ್ಯಾತ ನಟನ ಪಾತ್ರವೇನು? ಯಾರು ಅ ನಟ?ರೂ ಅದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು......
ಇದೀಗ ಸಿನಿಮಾ ಕುರಿತು ಹೊಸ ಸಂಗತಿವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು! ಟಾಕ್ಸಕ್ ಸಿನಿಮಾ 1950-1970ರ ಘಟ್ಟದಲ್ಲಿ ನಡೆಯುವ ಕಥೆಯಾಗಿದೆ, ಡ್ರಗ್ಸ್ ಮಾಫಿಯಾ ಹಿನ್ನಲೆಯಲ್ಲಿ ತಯಾರಾಗುತ್ತಿದೆ ಎನ್ನುವ ವರದಿ ಇದೆ. ಈ ಚಿತ್ರದಲ್ಲಿ ಮಲಯಾಳಂ ನಟ ಟೋವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೆ ಚಿತ್ರದಲ್ಲಿ ನಯನಾತಾರ, ಕರೀನಾ ಕಪೂರ್ ಮತ್ತು ಶ್ರುತಿ ಹಾಸನ್ ಹೆಸರು ಕೇಳಿ ಬಂದಿತ್ತು. ಅದರೆ ಚಿತ್ರತಂಡ ಇದ್ಯಾವುದನ್ನೂ ಅಧಿಕೃತವಾಗಿ ಹೇಳಿಲ್ಲ.
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ; ಅಕ್ಟೋಬರ್‌ಗೆ ಕಾಯುತ್ತಿರುವ ಎಂದ ಪತಿ ಭುವನ್!
ಸುಮಾರು 170 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ 2025ರಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಕಾಣಲಿದೆ. ಕಳೆದ ವರ್ಷ ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಅಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್, ಯೂರೋಪ್ ಸೇರಿದಂತೆ ಹಲವು ಕಡೆಗಳಲ್ಲಿ ಟಾಕ್ಸಿಕ್ ಚಿತ್ರದ ಟೈಟಲ್‌ನ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಈಗಾಗಲೆ ಜುಲೈ ತಿಂಗಳು ಆಗಿರುವ ಕಾರಣ ಸೈಲೆಂಟ್ ಆಗಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ. ಆರಂಭದಿಂದಲ್ಲೂ ಸದ್ದು ಮಾಡುತ್ತಿರುವ ಟಾಕ್ಸಿಕ್ ಸಿನಿಮಾ ಹಾಲಿವುಡ್ ರೇಂಜಲ್ಲಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ.