ನನಗೇನೂ ಗೊತ್ತಿಲ್ಲ ಎಂಬುದು ಚೆನ್ನಾಗಿ ಗೊತ್ತಾಗಿದೆ: ಯಾವಾಗ ಹೀಗೆ ಹೇಳಿದ್ರು ವಿಷ್ಣುವರ್ಧನ್?

By Shriram Bhat  |  First Published Nov 14, 2024, 11:41 AM IST

ನಾನು ತುಂಬಾ ಸಿಂಪಲ್ ಮ್ಯಾನ್ ನಾನು, ಬಹಳ ಸಿಂಪಲ್. ಅದು ಗೊತ್ತಾಗಿದೆ ನನಗೆ.. ನನಗೇನೂ ಗೊತ್ತಿಲ್ಲ ಎಂಬುದು ಬಹಳ ಚೆನ್ನಾಗಿ ಗೊತ್ತಾಗಿದೆ.. ಹಿಂದೆ ನನಗೆ ಎಲ್ಲಾ ಗೊತ್ತಿತ್ತು ಅಂತ ತಿಳ್ಕೊಂಡಿದ್ದೆ.. ಆದ್ರೆ, ಈಗ ನಾನು ಇರೋ ಸ್ಥಿತಿನಲ್ಲಿ, ನನ್ನ ವಯಸ್ಸು ಹಾಗೂ ಜೀವನದ..


ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರು ತಮ್ಮ ಕೊನೆಗಾಲದಲ್ಲಿ ಆಧ್ಯಾತ್ಮದ ಕಡೆ ಹೆಚ್ಚು ಗಮನ ಕೊಟ್ಟಿದ್ದರು ಎನ್ನಲಾಗುತ್ತದೆ. ಆ ಸಂದರ್ಭದಲ್ಲಿ ಅವರು ಮಾತನ್ನಾಡಿದಾಗ ಜೀವನದಲ್ಲಿ ವಿರಕ್ತಿ ಪ್ರದರ್ಶಿಸುತ್ತಿದ್ದರು. ನನಗೇನೂ ಬೇಡ, ಇರುವುದೇ ಸಾಕು, ಇದೇ ಬಹಳಷ್ಟಾಯಿತು' ಎಂಬ ಮನಸ್ಥಿತಿ ಅವರಲ್ಲಿತ್ತು. ಸಾಯಿಬಾಬಾರ ಭಕ್ತರಾಗಿದ್ದ ನಟ ವಿಷ್ಣುವರ್ಧನ್ ಅವರು ತಮ್ಮ ಕೊನೆಯ ದಿನಗಳಲ್ಲಿ ವೇಷ-ಭೂಷಣವನ್ನು ಕೂಡ ಭಗವಾನ್ ಸಾಯಿಬಾಬಾರಂತೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. 

ನಟ ವಿಷ್ಣುವರ್ಧನ್ ಅವರು ತಮ್ಮ 59ನೆಯ ವಯಸ್ಸಿನಲ್ಲಿ ತೀರಿಕೊಂಡಾಗ ಅವರು ಅಕ್ಷರಶಃ ಆಧ್ಯಾತ್ಮಿಕ ವ್ಯಕ್ತಿ ಆಗಿದ್ದರು ಎಂಬುದು ಅವರ ಆಪ್ತರು ಹೇಳುವ ಮಾತು. ಅವರ ಸುತ್ತಮುತ್ತ ಇರುವವರು ಅವರಿಗೆ ತೋಚಿದಂತೆ ಹೇಳುತ್ತಾರೆ, ಹೇಳಿರಬಹುದು ಎನ್ನಬಹುದು. ಆದರೆ ಸ್ವತಃ ನಟ ವಿಷ್ಣುವರ್ಧನ್ ಅವರೇ ಆಡಿರುವ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಕಾರಣ, ಇಂದು ಎಲ್ಲಾ ಮಾಹಿತಿಗಳು ಇಂಟರ್ನೆಟ್‌ಗಳಲ್ಲಿ ಹರಿದಾಡುತ್ತವೆ, ಯಾವುದೂ ಕೂಡ ಗುಟ್ಟಾಗಿ ಇರಲು ಅಸಾಧ್ಯ. ಹಾಗಿದ್ದರೆ ನಟ ವಿಷ್ಣು ಅವರು ಅದೇನು ಹೇಳಿದ್ದಾರೆ, ನೋಡಿ.. 

Tap to resize

Latest Videos

undefined

ಈ ಕನ್ನಡದ ನಟ ತೆಲುಗು ಬಿಗ್ ಸ್ಟಾರ್ ಆಗೋದು ಫಿಕ್ಸ್; ಭವಿಷ್ಯ ನುಡಿದ ಮೆಗಾ ಸ್ಟಾರ್!

ನಾನು ತುಂಬಾ ಸಿಂಪಲ್ ಮ್ಯಾನ್ ನಾನು, ಬಹಳ ಸಿಂಪಲ್. ಅದು ಗೊತ್ತಾಗಿದೆ ನನಗೆ.. ನನಗೇನೂ ಗೊತ್ತಿಲ್ಲ ಎಂಬುದು ಬಹಳ ಚೆನ್ನಾಗಿ ಗೊತ್ತಾಗಿದೆ.. ಹಿಂದೆ ನನಗೆ ಎಲ್ಲಾ ಗೊತ್ತಿತ್ತು ಅಂತ ತಿಳ್ಕೊಂಡಿದ್ದೆ.. ಆದ್ರೆ, ಈಗ ನಾನು ಇರೋ ಸ್ಥಿತಿನಲ್ಲಿ, ನನ್ನ ವಯಸ್ಸು ಹಾಗೂ ಜೀವನದ ಹಂತದಲ್ಲಿ, ನನಗೆ ಏನೂ ಗೊತ್ತಿಲ್ಲ ಎಂಬುದು ಚೆನ್ನಾಗೊ ಗೊತ್ತಾಗಿದೆ. ಸೋ, ಅದನ್ನ ಒಪ್ಕೊಂಡು, ನನ್ ಕೈನಲ್ಲಿ ಏನಾಗುತ್ತೋ ಎಷ್ಟು ಸಾಧ್ಯ ಆಗುತ್ತೋ, ಎಷ್ಟು ಒಳ್ಳೇದು ಮಾಡೋಕೆ ಆಗುತ್ತೋ, ಎಷ್ಟು ಅನುಕೂಲ ಆಗುತ್ತೋ ಅಷ್ಟು ಮಾಡೋದಕ್ಕೆ ಪ್ರಿಪೇರ್ ಆಗಿದೀನಿ ಅಷ್ಟೇ ನಾನು. 

ನನಗೆ ಈಗ ಆಸೆಗಳಿಲ್ಲ, ಪ್ರಶ್ನೆಗಳಿಲ್ಲ, ನನಗೆ ಈಗಂತೂ ಯಾವುದರ ಬಗ್ಗೆಯೂ ಪ್ರಶ್ನೆಗಳಿಲ್ಲ, ಹೀಗಾಗಿ ನನಗೆ ಉತ್ತರವೂ ಬೇಕಾಗಿಲ್ಲ. ನನಗೆ ಸದ್ಯಕ್ಕೆ ನಾನಿರೋ ಪರಸ್ಥಿತಿಯಲ್ಲಿ ನನಗೆ ಇರೋದೇ ಸಾಕು. ನನ್ನ ಯೋಗ್ಯತೆಗೆ ಮೀರಿ ದೇವರು ನನಗೆ ಕೊಟ್ಟಿದಾನೆ. ನನಗೆ ಕೊಟ್ಟಿದ್ದು ಸಾಕು, ಬೇರೆಯವರಿಗೆ ಕೊಡು ಅಂತೀನಿ ನಾನು.. ಆದ್ರೆ, ಬೇರೆಯವರ ಸಂತೋಷ ನೋಡೋ ಅವಕಾಶ ಹಾಗೂ ಭಾಗ್ಯ ನನಗೆ ಕೊಡು ಅಂತೀನಿ ನಾನು..' ಎಂದು ಒಂದು ಸಂದರ್ಶನದಲ್ಲಿ ನಟ ವಿಷ್ಣುವರ್ಧನ್ ಅವರು ಹೇಳಿದ್ದಾರೆ. 

ಡಾ ರಾಜ್‌ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!

click me!