
ಕೊರೋನಾ ಲಸಿಕೆ ಹಾಕಿಸಿ ಕೊಳ್ಳುವ ಮುನ್ನ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ಬಹು ದಿನಗಳಿಂದ ಪ್ರಜ್ಞಾವಂತರು ಹೇಳುತ್ತಿದ್ದಾರೆ. ನಟ ವಸಿಷ್ಠ ಸಿಂಹ ಈ ಮಾತನ್ನು ನಿಜ ಮಾಡಿದ್ದಾರೆ. ಕೊರೋನಾ ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ರಾಜ್ಯದಲ್ಲಿ ಕಡಿಮೆಯಾದ ಬ್ಲಡ್ ಡೊನೆಟ್: 'ಕೋವಿಡ್ ಲಸಿಕೆಗೂ ಮುನ್ನ ರಕ್ತದಾನ ಮಾಡಿ ಜೀವ ಉಳಿಸಿ'
ಕೊರೋನಾ ಲಸಿಕೆ ಪಡೆದು ತಿಂಗಳ ಕಾಲ ರಕ್ತದಾನ ಮಾಡವಂತಿಲ್ಲ. ಆ ಕಾರಣ ಕೊರೋನಾ ರೋಗಿಗಳಿಗೆ ರಕ್ತದ ಅಭಾವ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ವಸಿಷ್ಠ ಸಿಂಹ ಹಾಗೂ ಕೆಪಿಟಿಸಿಎಲ್ ನೌಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ ಆರ್ ರಾಮು ಕೃಷ್ಣಯ್ಯ ರಕ್ತದಾನ ಶಬಿರ ಅಯೋಜಿಸಿದ್ದರು.
ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಂಡ ಕಿರುತೆರೆ ನಟಿ ಯಮುನಾ ಶ್ರೀನಿಧಿ!
ಮೇ.9 ನಡೆದ ರಕ್ತದಾನ ಶಬಿರದಲ್ಲಿ ಅನೇಕರು ಭಾಗಿಯಾಗಿದ್ದರು. 18 ವರ್ಷದ ಮೇಲ್ಪಟ್ಟವರು ರಕ್ತದಾನ ಮಾಡುವಂತೆ ವಸಿಷ್ಠ ಜಾಗೃತಿ ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಿರುತೆರೆ ನಟಿ ಯಮುನಾ ಶ್ರೀನಿಧಿ ತಮ್ಮ ಹುಟ್ಟುಹಬ್ಬದ ದಿನ ರಕ್ತದಾನ ಮಾಡಿದ್ದರು. ಈ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ವೈದ್ಯರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.