'ಒಳಗೆ ಸೇರಿದರೆ ಗುಂಡು' ಹಾಡಿನ ಖ್ಯಾತಿಯ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ

By Suvarna NewsFirst Published May 10, 2021, 10:42 AM IST
Highlights

ಚಂದನವನದ ಹಿರಿಯ ಚಿತ್ರ ಸಾಹಿತಿ ಶ್ರೀರಂಗ (86) ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 

'ನಂಜುಂಡಿ ಕಲ್ಯಾಣ', 'ಒಳಗೆ ಸೇರಿದರೆ ಗುಂಡು' ಹಾಡಿನಿಂದ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದ ಶ್ರೀರಂಗ ವಯೋಸಹಜ ಕಾಯಿಲೆಯಿಂದ ಮೇ 9, 2021ರ ಭಾನುವಾರ ಕೊನೆಯುಸಿರೆಳೆದಿದ್ದಾರೆ. 

ಬೆಂಗಳೂರಿನ ನಾಗರಭಾವಿಯಲ್ಲಿ ವಾಸಿಸುತ್ತಿದ್ದ ಶ್ರೀರಂಗ ಪತ್ನಿ,ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕನ್ನಡದಲ್ಲಿ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಿಗೆ ಗೀತ ರಚನೆ ಮಾಡಿದ್ದಾರೆ. 'ಭೂ ಲೋಕದಲ್ಲಿ ಯಮರಾಜ' ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. 'ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುವಾ ಬಾ', 'ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ', 'ಸುಮ್‌ಸುಮ್ನೇ ಓಡಬೇಡ ಸುಂದರಿ' ಸೇರಿದಂತೆ ಅನೇಕ ವಿಭಿನ್ನ ಹಾಡುಗಳನ್ನು ರಚಿಸಿರುವ ಹೆಗ್ಗಳಿಕೆ ಶ್ರೀರಂಗ ಅವರದ್ದು.

ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿ

ಶ್ರೀರಂಗ ಅವರು ಇನ್ನಿಲ್ಲ ಎಂಬ ವಿಚಾರ ತಿಳಿದು ಕನ್ನಡ ಚಿತ್ರರಂಗ ಆಪ್ತರು ಕಂಬನಿ ಮಿಡಿದಿದ್ದಾರೆ. ಕೆಲವು ದಿನಗಳ ಹಿಂದೆ ನಿರ್ದೇಶಕ ರೇಣುಕಾ ಶರ್ಮಾ, ನಿರ್ಮಾಪಕ ಕೋಟಿ ರಾಮು, ಹಿರಿಯ ಕಲಾವಿದ ಖಂಖನಾದ ಅರವಿಂದ್, ನಿರ್ಮಾಪಕ ಸ್ವಾತಿ ಅಂಬರೀಶ್‌ ಕೋವಿಡ್‌ಗೆ ತುತ್ತಾಗಿದ್ದಾರೆ.

click me!