
ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಮಿಂಚಬೇಕು ಎಂದು ಆಸೆ ಕಂಡ ನಟ ಸೂರಜ್ ಕುಮಾರ್ ಉರ್ಫ್ ಧ್ರುವನ್ ನಂಜನಗೂಡು ಮುಖ್ಯ ರಸ್ತೆಯಲ್ಲಿ ಅಪಘಾತವಾಗಿ ಕಾಲು ಕಳೆದುಕೊಂಡಿದ್ದಾರೆ. ಸೂರಜ್ ಬೈಕ್ ಚಲಾಯಿಸುವಾಗ ಎದುರು ಟಿಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಕಾಲುಗಳ ಮೇಲೆ ಲಾರಿ ಹರಿದ ಕಾರಣ ಸೂರಜ್ ಕಾಲು ಕಳೆದುಕೊಂಡಿದ್ದಾರೆ. ವೆಂಟಿಲೇಟರ್ ಬಳಕೆಯಿಂದ ಹೊರ ಬಂದಿರುವ ಸೂರಜ್ ಆರೋಗ್ಯ ಈಗ ಹೇಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
'ಅಪಘಾತ ನಡೆದ ಸ್ಥಳದಿಂದ ಸೂರಜ್ ಆಸ್ಪತ್ರೆಗೆ ಬರುವಾದ ಯಾವ ರೀತಿ ಚಿಕಿತ್ಸೆ ಸಿಕ್ಕಿರಲಿಲ್ಲ ಹೀಗಾಗಿ ತುಂಬಾ ರಕ್ತ ಕಳೆದುಕೊಂಡಿದ್ದರು. ಎಮರ್ಜೆನ್ಸಿಯಲ್ಲಿ ಬಂದ ವ್ಯಕ್ತಿಗಳನ್ನು ನಾವು ಕ್ರಾಶ್ ಎಂದು ಕರೆಯುತ್ತೇವೆ ಆದರೆ ಸೂರಜ್ ಅವರನ್ನು ಮೊದಲು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಬೇಕಿತ್ತು ಕಾರಣ ಮೊದಲು ಅವರ ಪ್ರಾಣ ಉಳಿಸುವುದಷ್ಟೇ ಮುಖ್ಯವಾಗಿತ್ತು.ಆಪರೇಷನ್ ಮಾಡುವ ಮುನ್ನ ಓಪನ್ ಮಾಡಿ ನೋಡಿದಾಗ ಕಾಲಿನಲ್ಲಿ 6 ಇಂಚು ಮೂಳೆ ಇರಲಿಲ್ಲ ತೊಡೆ ಭಾಗದಲ್ಲಿ 6 ಇಂಚು ಮೂಳೆ ಇರಲಿಲ್ಲ. ತಕ್ಷಣವೇ ಸೂರಜ್ ಫ್ಯಾಮಿಲಿ ಜೊತೆ ಮಾತನಾಡಿದ ಆದಷ್ಟು ಬೇಗ ಆಪರೇಷನ್ ಮಾಡಿ ಪ್ರಾಣ ಉಳಿಸಲು ಸಾಧ್ಯವಾಗಿತ್ತು.ಸೂರಜ್ ಬಂದ ತಕ್ಷಣ ವೆಂಟಿಲೇಟರ್ ಹಾಕಿದೆವು..ನಮ್ಮ ಪ್ರಕಾರ ಮೂರು ದಿನ ವೆಂಟಿಲೇಟರ್ ಬೇಕಾಗಬಹುದು ಅಂದುಕೊಂಡೆವು ಆದರೆ ಮರು ದಿನವೇ ಸೂರಜ್ ನಾರ್ಮಲ್ ಆದ ಕಾರಣ ವೆಂಟಿಲೆಟರ್ ತೆಗೆಯಲಾಗಿತ್ತು. ಈಗಲ್ಲೂ ಸೂರಜ್ ದೇಹದಲ್ಲಿ ರಕ್ತ ಕಡಿಮೆ ಇದೆ ಸುಮಾರು 10 ಪೈನ್ಸ್ ಆಫ್ ರಕ್ತ ಬಳಸಿದ್ದೀವಿ ತುಂಬಾ ಪ್ಯಾಕೆಟ್ ಫ್ಲೂಯಿಡ್ ಮತ್ತು ಪಿಆರ್‌ಪಿ ಬಳಸಿದ್ದೀವಿ. ಪರಿಸ್ಥಿತಿ ಹೇಗೆ ಅನ್ನೋದು ನಮಗೆ ಗೊತ್ತಿರಲಿಲ್ಲ ಹೀಗಾಗಿ ಮಾಧ್ಯಮಗಳಲ್ಲಿ ಮಾತನಾಡಲು ನಿರಾಕರಿಸಲಾಗಿತ್ತು ಆದರೆ ಈಗ ಸೂರಜ್ ಚೇತರಿಸಿಕೊಂಡಿರುವ ಕಾರಣ ಮಾತನಾಡುತ್ತಿದ್ದೀವಿ. ಕಾಲು ಮತ್ತು ತೊಡೆ ಮೂಳೆ ಹೋಗಿರುವ ಕಾರಣ 4-5 ಇಂಚು ಗ್ರಾಫ್ಟಿಂಗ್ ಮಾಡಿದ್ದೀವಿ ಹಾಗೂ numerical succession system ಹಾಕಿದ್ದೀವಿ ಇದು ತೊಡೆ ಮೆಂಟೇನ್ ಮಾಡುತ್ತದೆ. ಇನ್ನು ಚಿಕಿತ್ಸೆ ಮುಗಿದಿಲ್ಲ ಇದು ಆರಂಭ ಮುಂಬರುವ ದಿನಗಳಲ್ಲಿ ಸ್ವಲ್ಪ ಸರ್ಜರಿಗಳು ಇದು. ಇನ್ಫೆಕ್ಷನ್ ಆಗಬಾರದು ಅನ್ನೋ ಕಾರಣ ಸೂರಜ್‌ನ ನೋಡಲು ಯಾರನ್ನು ಬಿಡುತ್ತಿಲ್ಲ' ಎಂದು ಡಾಕ್ಟರ್ ಮಾತನಾಡಿದ್ದಾರೆ.
ಭೀಕರ ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ಯುವ ನಟ ಸೂರಜ್ ರಾಜ್‌ಕುಮಾರ್!
'ನನ್ನ ತಮ್ಮ ಸೂರಜ್ ಮತ್ತು ಟಿಪರ್ ಲಾರಿ ನಡುವೆ ಆದ ಅಪಘಾತ ಖಂಡಿತಾ ಬೇಸರವಾಗುತ್ತದೆ. ಸ್ಥಳೀಯರ ಸಹಾಯದಿಂದ ಆತ ಈಗ ಬದುಕಿರುವುದು ಆತನಿಗೆ ಏನು ಅಗತ್ಯವಿದೆ ಉಳಿಸಿಕೊಳ್ಳಲು ವೈದ್ಯರು ಅದೆಲ್ಲಾ ಮಾಡಿದ್ದಾರೆ. ಸೂರಜ್‌ನ ಉಳಿಸಿಕೊಳ್ಳಬೇಕು ಅಂದ್ರೆ ಕಾಲು ತೆಗೆಯಲೇ ಬೇಕಿತ್ತು ಪರಿಸ್ಥಿತಿ ಹಾಗಿತ್ತು. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಟ್ಟಿದ್ದಾರೆ ವೈದ್ಯರು. ಇಷ್ಟು ದಿನ ಸೂರಜ್ ಆರೋಗ್ಯದ ಚಿಂತೆಯಲ್ಲಿ ಇದ್ದೆವು ಈಗ ಸುದಾರಿಸಿಕೊಂಡಿರುವ ಕಾರಣ ಈಗ ಲೀಗಲ್ ಆಗಿ ಏನೆಲ್ಲಾ ಆಗಬೇಕು ನಡೆಸುತ್ತೇವೆ' ಎಂದು ಸೂರಜ್ ಅಕ್ಕ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.