
ಕರುನಾಡ ಸಿಂಹ, ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು (Kiccha Sudeep) ಅದೆಷ್ಟೋ ಮಂದಿ ತಮ್ಮ ಮನೆಯ ದೇವರ ಗುಡಿಯಲ್ಲಿ ಫೋಟೋ ಇಟ್ಟು ದೇವರಂತೆ ಪೂಜಿಸುತ್ತಾರೆ. ಅದೆಷ್ಟೋ ಜನರ ಜೀವನಕ್ಕೆ ದಾರಿ ದೀಪವಾಗಿರುವ ಕಿಚ್ಚನನ್ನು ದಿನವೂ ಸ್ಮರಿಸುತ್ತಾರೆ. ಇಷ್ಟೊಂದು ಪ್ರೀತಿ ಪಾತ್ರರಾಗಿರುವ ಕಿಚ್ಚನಿಗೆ ಒಂದು ಗುಡಿ ಕಟ್ಟಲೇ ಬೇಕು ಎಂದು ರಾಯಚೂರಿನ (Raichuru) ಅಭಿಮಾನಿಗಳು ಗುಡಿ ಕಟ್ಟಲು ಮುಂದಾಗಿದ್ದಾರೆ. ಖಾಸಗಿ ವೆಬ್‌ಸೈಲ್‌ನಲ್ಲಿ ಕಿಚ್ಚನ ಗುಡಿ ಬಗ್ಗೆ ಅಭಿಮಾನಿಯೊಬ್ಬರು ಬರೆದಿದ್ದಾರೆ.
ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ (Bollywood) ಹೆಸರು ಮಾಡಿರುವ ಕಿಚ್ಚ ಸುದೀಪ್‌ರವರಿಗೆ ಸ್ಟಾರ್ ನಟನರಿಂದ ಹಿಡಿದು ತಂತ್ರಜ್ಞರನ್ನು ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಾರೆ. ಈ ಅದ್ಭುತ ನಟನಿಗೆ ಎಲ್ಲಾ ಸಮುದಾಯದಿಂದಲೂ ಅಭಿಮಾನಿಗಳಿದ್ದಾರೆ. ಅವರ ಅಭಿಮಾನಕ್ಕೆ ಸುದೀಪ್ ಕೂಡ ಶರಣಾಗಿದ್ದಾರೆ. ತೆಲುಗು (Tamil), ತಮಿಳು (Telugu), ಮಲಯಾಳಂ (Mollywood) ನಟನಿಗೆ ಗುಡಿ ಕಟ್ಟಿದ್ದಾರೆ, ಇದೇ ಮೊದಲು ಕನ್ನಡದ ನಟನಿಗೆ ಗುಡಿ ಕಟ್ಟುತ್ತಿರುವುದು ಎನ್ನಬಹುದು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ದೇವಸ್ಥಾನ ನಿರ್ಮಿಸುತ್ತಿದ್ದಾರೆ. ದೇವಸ್ಥಾನದ ಬಹುತೇಕ ಕಾರ್ಯಗಳು ಮುಗಿದಿದ್ದು ಕೆಲವು ದಿನಗಳ ಕೆಲಸ ಮಾತ್ರ ಉಳಿದಿದೆ. ಕಳೆದು ಮೂರು ತಿಂಗಳಿಂದ ನಿರ್ಮಾಣವಾಗುತ್ತಿರುವ ಈ ಗುಡಿಯ ಸ್ಥಳದಲ್ಲಿ ವಾಲ್ಮೀಕಿ ಗುಡಿ (Valmiki Temple) ಕಟ್ಟಲು ಮುಂದಾಗಿದ್ದರು. ಇದೇ ಸಮಯದಲ್ಲಿ ಕಿಚ್ಚನ ಅಭಿಮಾನಿಗಳು ಗುಡಿ ಕಟ್ಟಬೇಕು ಎಂದು ಮಾತುಕತೆ ಶುರು ಮಾಡಿಕೊಂಡರು. ಹೀಗಾಗಿ ಎಲ್ಲರೂ ಒಟ್ಟಿಗೆ ಚರ್ಚಿಸಿ ತಮ್ಮ ಜನಾಂಗದ ನಾಯಕ ನಟನ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರಿಗೆ ಗುಡಿ ಕಟ್ಟಬೇಕು ಎಂದು ನಿರ್ಧರಿಸಿದ್ದರು. ಇದೇ ಗ್ರಾಮದ ಚರಣ ಬಸವ ನಾಯಕ ಎನ್ನುವವರು ಗುಡಿ ನಿರ್ಮಿಸಲು ಉಚಿತವಾಗಿ 35-45 ಚದರ ಅಡಿ ವಿಸ್ತೀರ್ಣದ ಜಾಗ ನೀಡಿದ್ದಾರೆ.
'ನಾವು ಹುಚ್ಚ ಸಿನಿಮಾದಿಂದ ಸುದೀಪ್ ಅಭಿಮಾನಿ, ನಮ್ಮ ಜನಾಂಗದಲ್ಲಿಯೇ ಅವರು ತುಂಬಾ ದೊಡ್ಡ ಹೆಸರು ಮಾಡಿದ್ದಾರೆ. ಅವರಿಗಾಗಿ ಗುಡಿ ಕಟ್ಟಬೇಕು, ಅಂತ ತೀರ್ಮಾನ ಮಾಡಿದ್ವಿ. ಗುಡಿಯೊಳಗೆ ಗಾರ್ಡನ್, ಸುತ್ತಲೂ ಕಾಂಪೌಂಡ್, ಲೈಟಿಂಗ್ ಮಾಡಲಾಗಿದೆ. ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. 20 ದಿನಗಳಲ್ಲಿ ಕೆಲಸ ಮುಗಿಯುತ್ತೆ. ಈ ಗುಡಿಯೊಳಗೆ ವಾಲ್ಕೀಕಿ ಮೂರ್ತಿ ಮತ್ತು ಸುದೀಪ್ ಮೂರ್ತಿ ಇರುತ್ತವೆ,' ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದೇವರಾಜ ಹೇಳಿದ್ದಾರೆ.
ಸುದೀಪ್‌ಗಾಗಿ ಗುಡಿ ನಿರ್ಮಿಸಲು ಒಟ್ಟು 12 ಲಕ್ಷ ಖರ್ಚಾಗಿದೆ. ಈಗಾಗಲೇ ಕೆಲವು ಗಣ್ಯರು 2-3ಲಕ್ಷ ನೀಡಿದ್ದಾರೆ ಎನ್ನಲಾಗಿದೆ, ಉಳಿದ ಹಣವನ್ನು ಅಭಿಮಾನಿಗಳೇ ಹಾಕಿ ಕಟ್ಟುತ್ತಿದ್ದಾರೆ. ಗುಡಿ ಮತ್ತೊಂದು ವಿಶೇಷತೆ ಏನೆಂದರೆ ಪುನೀತ್ ರಾಜ್‌ಕುಮಾರ್ ಅವರ ಗ್ಲಾಸ್ ಫಿಟ್ಟಿಂಗ್ ಮಾಡಿಸಿ ಅದಕ್ಕೆ ಎಲ್‌ಇಡಿ ಅಳವಡಿಸಲಾಗಿದೆ. 'ಕಿಚ್ಚ ಸುದೀಪ್ ಬಳಿ ಈ ವಿಚಾರವನ್ನು ಅಭಿಮಾನಿಗಳು ಹೇಳಿದಾಗ ಗುಡಿಯನ್ನು ಕಟ್ಟದೇ ಇರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಆದರೆ ನಾವು ಪ್ರೀತಿಯಿಂದ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದೇವೆ. ಅವರು ನೋಡಲು ಬರುತ್ತೇನೆ ಎಂದಿದ್ದಾರೆ,' ಎಂದು ದೇವರಾಜ ನಾಯಕ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಹೀಗೆ ತಮ್ಮ ನೆಚ್ಚಿನ ನಟನಿಗೆ ಗುಡಿ ಕಟ್ಟುವುದು ತುಂಬಾನೇ ಕಾಮನ್ ಎನ್ನಬಹುದು. ಜಯಲಲಿತಾ, ಎನ್‌ಟಿಆರ್, ಖುಷ್ಬೂ ಸೇರಿ ಅನೇಕ ಸಿನಿ ಕಲಾವಿದರಿಗೆ ಅಲ್ಲಿ ದೇಗುಗಳಿದ್ದು, ಅಭಿಮಾನದಿಂದ ಭಕ್ತರು ಪೂಜಿಸುತ್ತಾರೆ. ಆದರೆ, ಇದೇ ಮೊಲದು ಬಾರಿಗೆ ಕರ್ನಾಟಕದಲ್ಲಿಯೂ ಇಂಥ ಸಂಸ್ಕೃತಿ ತಲೆ ಎತ್ತುತ್ತಿದೆ. ಇನ್ನು ಬಹುಶಃ ತಮ್ಮ ನೆಚ್ಚಿನ ನಟರಿಗೆ ಈ ರೀತಿ ದೇವಸ್ಥಾನಗಳನ್ನು ನಿರ್ಮಿಸುವುದು ಸಾಮಾನ್ಯವಾಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.