ಜು.12ರಂದು ಶಿವಣ್ಣ ಹುಟ್ಟುಹಬ್ಬಕ್ಕೆ ಹೊಸ ಟೈಟಲ್‌ ಘೋಷಣೆ!

Kannadaprabha News   | Asianet News
Published : Jul 08, 2021, 05:21 PM IST
ಜು.12ರಂದು ಶಿವಣ್ಣ ಹುಟ್ಟುಹಬ್ಬಕ್ಕೆ ಹೊಸ ಟೈಟಲ್‌ ಘೋಷಣೆ!

ಸಾರಾಂಶ

ಶಿವರಾಜ್‌ಕುಮಾರ್‌ ನಟನೆಯ ‘ಶಿವಪ್ಪ’ ಸಿನಿಮಾದ ಹೆಸರು ಬದಲಾಗಲಿದೆ. ಹೊಸ ಹೆಸರನ್ನು ಶಿವಣ್ಣ ಹುಟ್ಟುಹಬ್ಬ, ಜು.12ರಂದು ಅನಾವರಣ ಮಾಡುವ ಪ್ಲಾನ್‌ ಇದೆ. ಅಂದು ಶಿವಣ್ಣ ಅವರ 60ನೇ ಹುಟ್ಟುಹಬ್ಬ.  

ಶಿವಪ್ಪ ಎನ್ನುವ ಶೀರ್ಷಿಕೆ ಕತೆಗೆ ಅಷ್ಟುಸೂಕ್ತವಾಗಿಲ್ಲ. ಮಾಸ್‌ ಹೆಸರು ಬೇಕಾಗಿದೆ ಎಂಬ ಕಾರಣಕ್ಕೆ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದ್ದೆ ಎನ್ನಲಾಗಿದೆ. ಕೃಷ್ಣ ಸಾರ್ಥಕ್‌ ನಿರ್ಮಾಣದ, ವಿಜಯ್‌ ಮಿಲ್ಟನ್‌ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇಲ್ಲಿ ಡಾಲಿ ಧನಂಜಯ್‌ ಹಾಗೂ ಶಿವಣ್ಣ ಮುಖಾಮುಖಿ ಆಗುತ್ತಿದ್ದಾರೆ.

ಶಿವರಾಜ್‌ಕುಮಾರ್‌ ಶೂಟಿಂಗ್‌ಗೆ ಆರಂಭಿಸುತ್ತಿರುವಂತೆಯೇ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟೈಗರ್‌ ಮುಖದ ಫೋಟೋ ಅಭಿಮಾನಿಗಳಲ್ಲಿ ಸಾಕಷ್ಟುಕ್ರೇಜ್‌ ಹುಟ್ಟು ಹಾಕಿದೆ. ಜು.10ಕ್ಕೆ ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಸಿನಿ ಕಾರ್ಮಿಕರ ನೆರವಿಗೆ ನಿಂತ ಡಾ.ಶಿವರಾಜ್‌ಕುಮಾರ್! 

‘ಶಿವರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂಬುದು ನಮ್ಮ ತಂಡದ ಆಸೆ. ಆ ನಿಟ್ಟಿನಲ್ಲಿ ಫಸ್ಟ್‌ ಲುಕ್‌, ಟೈಟಲ್‌ ಟೀಸರ್‌ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್‌.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಈ ಬಾರಿಯ ಬಿಗ್ ಬಾಸ್ ಇಷ್ಟೊಂದು ಪರ್ಸನಲ್‌ ಜಿದ್ದಾಜಿದ್ದಿಗೆ ಕಾರಣವಾಗಿದ್ದೇಕೆ? ಗುಟ್ಟು ರಟ್ಟಾಯ್ತು..!
ಆಧ್ಯಾತ್ಮದ ಬದುಕಿನ ದಾರಿ ಹಿಡಿದ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಾಯಕಿ! 'ಬ್ರೈನ್‌ ವಾಶ್' ಮಾಡಿದ್ದು ಯಾರು?