ಸ್ಟ್ರೋಕ್‌ನಿಂದ ಬಳಲುತ್ತಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿಧನ. ಆಸ್ಪತ್ರೆಗೆ ಹೋಗಲಿಚ್ಛಿಸದ ತಾಯಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಿದ್ದರು ವಿಜಯ್.
ಬೆಂಗಳೂರು (ಜುಲೈ 08): ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನರಾಗಿದ್ದಾರೆ. 'ಅಮ್ಮ ಮತ್ತೆ ಹುಟ್ಟಿ ಬಾ' ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಬರೆದುಕೊಂಡಿದ್ದಾರೆ.
ನಾರಾಯಣಮ್ಮ ಅವರಿಗೆ ಕೆಲವು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಆಗಿತ್ತು. ಇನ್ನೇನು ಚೇತರಿಸಿಕೊಂಡರು ಅನ್ನುವಷ್ಟರಲ್ಲಿ ಬ್ರೈನ್ ಸ್ಟ್ರೋಕ್ ಆಗಿತ್ತು. ಕಳೆದ 23 ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದಿನವೂ ವೈದ್ಯರು ಮೆಡಿಸಿನ್ ಹಾಗೂ ಇಂಜೆಕ್ಷನ್ ನೀಡುತ್ತಿದ್ದರು. ದಿನೇ ದಿನೇ ಅವರು ವೀಕ್ ಆಗುತ್ತಿದ್ದಂತೆ, ಎಂದು ಕೆಲವು ದಿನಗಳಿಂದೆ ವಿಜಯ್ ಮಾತನಾಡಿದ್ದಾರೆ.
ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ!
ತಾಯಿಯ ಪಾದಗಳ ಪೋಟೋ ಹಂಚಿಕೊಂಡು 'ಈ ಎರಡು ಪಾದಗಳ ಮತ್ತು ನಿಮ್ಮೆಲ್ಲರ ಹಾರೈಕೆ ಆಶೀರ್ವಾದವೇ ನನಗೆ ಶ್ರೀರಕ್ಷೆ,' ಎಂದು ವಿಜಯ್ ಬರೆದು ಕೊಂಡಿದ್ದರು. 'ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಅಮ್ಮನಿಗೆ ನಾವಿನ್ನೂ ಚಿಕ್ಕ ಮಕ್ಕಳೇ. ನಾನು ಇಂದು ಜೀವನದಲ್ಲಿ ಏನಾದ್ರೂ ಗಳಿಸಿದ್ದೇನೆ , ಹೆಸರು ಮಾಡಿದ್ದೇನೆ ಅಂದ್ರೆ ಅದರ ಮೂಲ ಕಾರಣಕರ್ತೆ ನನ್ನಮ್ಮ. ಅವಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಹಾಗೆ ಮಕ್ಕಳ ಸಾಧನೆಯಲ್ಲಿ ತಾಯಂದಿರದ್ದು ಸಿಂಹ ಪಾಲು,' ಎಂದು ಬರೆದು ಅಮ್ಮಂದಿರ ದಿನಕ್ಕೆ ಶುಭಾಶಯ ತಿಳಿಸಿದ್ದರು.
ದುನಿಯಾ ವಿಜಯ್ ಅವರ ತಾಯಿ ಅಂತ್ಯಕ್ರಿಯೆಯನ್ನು ಜುಲೈ 8ರ ಮಧ್ಯಾಹ್ನ ಅನೇಕಲ್‌ನ ಕುಂಬಾರ ಹಳ್ಳಿಯಲ್ಲಿ ನಡೆಸಲು ವಿಜಯ್ ಕುಟುಂಬ ನಿರ್ಧರಿಸಿದೆ.