2019 ರಲ್ಲಿ ಎದುರಾದ ಕಷ್ಟಗಳನ್ನು ಪರಿಹರಿಸಿ ನೆಮ್ಮದಿ ನೀಡಿದ ದೇವ ತಿರುಪತಿ ತಿಮ್ಮಪ್ಪನಿಗೆ ಶಿವರಾಜ್‌ಕುಮಾರ್ ಪತ್ನಿ ಗೀತಾ ಮುಡಿ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದಂಪತಿ ಡಿಸೆಂಬರ್ 11 ರಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ ಹರಕೆಯನ್ನು ತೀರಿಸಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್ ತೀರಿಕೊಂಡ ದಿನದಿಂದ ಕುಟುಂಬದ ಹಿರಿಯಕ್ಕ ಆಗಿ ಜವಾಬ್ದಾರಿ ಹೊತ್ತು ತಾಯಿಯಂತೆ ಕುಟುಂಬ ನಡೆಸಿಕೊಂಡು ಬರುತ್ತಿದ್ದಾರೆ ಗೀತಾ ಶಿವರಾಜ್‌ಕುಮಾರ್. ಈ ಹಿಂದೆ ತಿರುಪತಿಗೆ ಅನೇಕ ಬಾರಿ ತಿರುಪತಿಗೆ ಭೇಟಿ ನೀಡಿರುವ ಗೀತಾ ಇದೇ ಮೊದಲ ಬಾರಿ ತಿಮ್ಮಪ್ಪನಿಗೆ ಸಂಪೂರ್ಣ ಮುಡಿ ಕೊಟ್ಟಿದ್ದಾರೆ.
2019 ಎಲ್ಲಾ ಕಷ್ಟಗಳಲ್ಲಿ ಕೈ ಹಿಡಿದ ಆ ತಿರುಪತಿ ತಿಮ್ಮಪನಿಗೆ ನಮ್ಮ ಅರ್ಪಣೆ pic.twitter.com/kJ4nLcPzM9
— DrShivaRajkumar (@NimmaShivanna)ಇದರ ಬಗ್ಗೆ ಶಿವರಾಜ್‌ಕುಮಾರ್ ಟ್ಟಿಟರ್‌ನಲ್ಲಿ '2019 ರಲ್ಲಿ ಎಲ್ಲಾ ಕಷ್ಟಗಳಲ್ಲಿ ಕೈ ಹಿಡಿದ ಆ ತಿರುಪತಿ ತಿಮ್ಮಪ್ಪನಿಗೆ ನಮ್ಮ ಅರ್ಪಣೆ ' ಎಂದು ಬರೆದುಕೊಂಡಿದ್ದಾರೆ.