Shiva Rajkumar: ಸಂದೇಶ್‌ ನಾಗರಾಜ್‌ ನಿರ್ಮಾಣದಲ್ಲಿ ಕರುನಾಡ ಚಕ್ರವರ್ತಿ ಸಿನಿಮಾ

By Suvarna News  |  First Published Feb 3, 2022, 11:58 AM IST

ಸಂದೇಶ್‌ ನಾಗರಾಜ್‌ ನಿರ್ಮಾಣದ ಹೊಸ ಚಿತ್ರವನ್ನು ಶಿವರಾಜ್‌ಕುಮಾರ್‌ ಒಪ್ಪಿಕೊಂಡಿದ್ದಾರೆ. ಚಿ ಗುರುದತ್‌ ನಿರ್ದೇಶನದ ಚಿತ್ರ ಇದು. ಇದೊಂದು ವಿಭಿನ್ನ ಕತೆಯುಳ್ಳ ಸಿನಿಮಾ ಎಂಬುದು ಸದ್ಯ ಸಿಕ್ಕಿರುವ ಮಾಹಿತಿ. 


ಸ್ಯಾಂಡಲ್‌ವುಡ್‌ನ ನಿರ್ಮಾಪಕರ ಪಾಲಿನ ಅಚ್ಚುಮೆಚ್ಚಿನ ನಟ ಹಾಗೂ ಅಭಿಮಾನಿಗಳ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್‌ (Shivarajkumar) 'ಭಜರಂಗಿ 2' ಸಿನಿಮಾ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಭೈರಾಗಿ' ಸಿನಿಮಾ ಶೂಟಿಂಗ್ ಮುಗಿಸಿ ತಮ್ಮದೇ ಹೋಂ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ 'ವೇದ' ಸಿನಿಮಾದ ಚಿತ್ರೀಕರಣದಲ್ಲಿರೋ ಶಿವರಾಜ್‌ಕುಮಾರ್ ಹೆಸರಿಡದ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹೌದು! ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ನಿರ್ಮಾಪಕ ಸಂದೇಶ್ ಪ್ರೊಡಕ್ಷನ್ಸ್ (Sandesh Production) ಸಂಸ್ಥೆಯಲ್ಲಿ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. 

ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ (Sandesh Nagaraj) ಅರ್ಪಿಸುವ ಈ ಚಿತ್ರವನ್ನು ಸಂದೇಶ್.ಎನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಸಮರ' ಹಾಗೂ 'ಆರ್ಯನ್' ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಚಿ. ಗುರುದತ್ (Chi Gurudutt) ಇನ್ನೂ ಹೆಸರಿಡದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಕಥಾಹಂದರದ ಚಿತ್ರದ ಬಗ್ಗೆ ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಿರ್ಮಾಪಕ ಸಂದೇಶ್ ಮತ್ತು ಶಿವರಾಜ್ ಕುಮಾರ್, ನಿರ್ದೇಶಕ ಚಿ.ಗುರುದತ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 

Tap to resize

Latest Videos

Shiva Rajkumar: 'ರಣರಂಗ' ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್

ಚಿ ಗುರುದತ್‌ ಹಾಗೂ ಶಿವರಾಜಕುಮಾರ್‌ ಆತ್ಮೀಯ ಸ್ನೇಹಿತರು ಕೂಡ ಹೌದು. ಹೀಗಾಗಿ ಇವರ ಕಾಂಬಿನೇಶನ್‌ ಸಿನಿಮಾ ಎಂಬುದ ಮೇಲೆ ಕೊಂಚ ನಿರೀಕ್ಷೆ ಹಾಗೂ ಕುತೂಹಲ ಇದ್ದೇ ಇರುತ್ತದೆ. ಶಿವಣ್ಣ ಮಾತ್ರವಲ್ಲದೇ ಈ ಚಿತ್ರದಲ್ಲಿ ಯಾರೆಲ್ಲ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಇರುತ್ತೆ ಹಾಗೂ ಚಿತ್ರದ ಟೈಟಲ್ ಏನು ಅನ್ನೋದನ್ನ ಚಿತ್ರತಂಡ ಸದ್ಯದಲೇ ತಿಳಿಸಲಿದೆ. ಇನ್ನು ಶಿವಣ್ಣ ಸಂತೋಷ್ ಆನಂದ್‌ರಾಮ್ (Santhosh Ananddram) ಜೊತೆ 'ರಣರಂಗ' (Ranaranga) ಚಿತ್ರವನ್ನು ಮಾಡುತ್ತಿದ್ದು, ಹೊಂಬಾಳೆ ಫಿಲಮ್ಸ್ (Hombale Films) ಮೂಲಕ ಈ ಚಿತ್ರ ಸೆಟ್ಟೇರುತ್ತಿರುವುದಾಗಿ ಹೇಳಲಾಗುತ್ತಿದೆ. 



ಸದ್ಯ ಶಿವಣ್ಣ, ಎ.ಹರ್ಷ (A.Harsha) ನಿರ್ದೇಶನದಲ್ಲಿ 'ವೇದ' (Veda) ಚಿತ್ರದಲ್ಲಿ ನಟಿಸುತ್ತಿದ್ದು, ಗೀತಾ ಶಿವರಾಜ್‌ಕುಮಾರ್‌ (Geetha Shivarjkumar) ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯತ್ತಿದೆ. ಈಗಷ್ಟೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ 'ವೇದ', ಎರಡನೇ ಹಂತದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಸೆಟ್‌ನಲ್ಲಿ ನಡೆಯುತ್ತಿದೆ. ಮತ್ತೊಮ್ಮೆ ಶಿವಣ್ಣ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿ ವಿಚಾರ. ಈ ಚಿತ್ರದಲ್ಲೂ ಹೊಸ ರೀತಿಯ ಕತೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. 'ವೇದ' ಎನ್ನುವ ಹೆಸರು ಈಗಾಗಲೇ ಟ್ರೆಂಡ್‌ ಆಗಿದೆ ಎಂದು ಎ.ಹರ್ಷ ತಿಳಿಸಿದ್ದಾರೆ.

Shiva Rajkumar: ಚಿತ್ರಮಂದಿರ 100% ಭರ್ತಿಗಾಗಿ ಸಿಎಂ ಭೇಟಿ ಮಾಡುವೆ

ಇನ್ನು ಶಿವಣ್ಣ ಅಭಿನಯದ 123ನೇ ಸಿನಿಮಾ 'ಬೈರಾಗಿ' (Bairagi) ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದು, ವಿಜಯ್ ಮಿಲ್ಟನ್ (Vijay Milton) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಟಗರು' ನಂತರ ಶಿವಣ್ಣ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ (Dhananjay) ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಕಾರಣ 'ಬೈರಾಗಿ' ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ್ ಅವರ ಲುಕ್‌ಗಳು ವಿಭಿನ್ನವಾಗಿವೆ. ವಿಶೇಷವಾಗಿ ಪುನೀತ್ ಅಗಲಿಕೆ ನೋವಿನಿಂದ ಹೊರ ಬಂದಿರುವ ಶಿವಣ್ಣ ಮತ್ತೆ ಹಿಂದಿನ ಲಯಕ್ಕೆ ಬಂದಿದ್ದು, ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಕಮಿಟ್ ಆಗುವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

click me!