ಮುಂದೆ ಮೈಲಾರಿ 2, ಕಬ್ಜ 2 ಬರುತ್ತೆ: ಅಭಿಮಾನಿಗಳಿಗೆ ಶಿವಣ್ಣ ಕೊಟ್ರು ಬಿಗ್ ಅಪ್‌ಡೇಟ್!

Published : Sep 09, 2026, 08:30 AM IST
Shivarajkumar

ಸಾರಾಂಶ

ಶಿವರಾಜ್‌ಕುಮಾರ್ ಅಭಿನಯದ ‘ಮೈಲಾರಿ 2’ ಸಿನಿಮಾ ಖಂಡಿತವಾಗಿಯೂ ಬರಲಿದೆ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಆರ್.ಚಂದ್ರು ಈಗಾಗಲೇ ಮುಂದುವರಿದ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಕಥೆ ಮತ್ತು ಪಾತ್ರದ ಸ್ಟೈಲ್ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೂ ಕನೆಕ್ಟ್ ಆಗಲಿದೆ.

‘ನನಗೆ ಆ ಚಿತ್ರದ ಕತೆ ಮತ್ತು ಕ್ಯಾರೆಕ್ಟರ್‌ ತುಂಬಾ ಇಷ್ಟವಾಗಿತ್ತು. ಖಂಡಿತವಾಗಿಯೂ ಅದರ ಮುಂದುವರಿದ ಭಾಗ ಬರಲಿದೆ’. ಆರ್‌.ಚಂದ್ರು ನಿರ್ದೇಶನದ ‘ಒರಿಜಿನಲ್‌ ಮಾನ್‌ಸ್ಟರ್‌’ ಚಿತ್ರದ ಮೂಹೂರ್ತದಲ್ಲಿ ಶಿವರಾಜ್‌ಕುಮಾರ್‌ ಹೀಗೆ ಹೇಳಿದ್ದು ‘ಮೈಲಾರಿ’ ಚಿತ್ರದ ಬಗ್ಗೆ.

‘ಕಬ್ಜ’ ಪಾರ್ಟ್‌ 2 ಬರಲಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ‘ಕಬ್ಜ ಪಾರ್ಟ್‌ 2 ಬರಲಿದೆ. ಅದಕ್ಕಿಂತ ಮುಖ್ಯವಾಗಿ ‘ಮೈಲಾರಿ 2’ ಚಿತ್ರ ಬರಲಿದೆ. ಆರ್‌.ಚಂದ್ರು ಅದರ ಮುಂದುವರಿದ ಕತೆ ಬರೆದುಕೊಂಡಿದ್ದಾರೆ. ಅದರ ಮುಂದುವರಿದ ಕತೆ ಮತ್ತು ಕ್ಯಾರೆಕ್ಟರ್‌ ಸ್ಟೈಲ್‌ ಎಲ್ಲಾ ಭಾಷೆಗಳಿಗೂ ಕನೆಕ್ಟ್‌ ಆಗೋದು ಪಕ್ಕಾ.

ಖಂಡಿತವಾಗಿಯೂ ಅದೊಂದು ವಿಶೇಷ ಸಿನಿಮಾ ಆಗಲಿದೆ. ಇದರ ಜೊತೆಗೆ ‘ಕಬ್ಜ 2’ ಚಿತ್ರ ಕೂಡ ಪ್ಲಾನ್‌ನಲ್ಲಿದೆ’ ಎಂದಿದ್ದಾರೆ. ‘ಒರಿಜಿನಲ್‌ ಮಾನ್‌ಸ್ಟರ್‌’ ಕನ್ನಡ ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. ಶಿವಣ್ಣ ತಮಗೆ ಹಿಂದಿ ಭಾಷೆ ತಿಳಿದಿರುವುದಾಗಿ ಹೇಳಿದ್ದಾರೆ.

ಕಬ್ಜ ಫ್ಲಾಪ್‌ ಅನ್ನೋರಿಗೆ ಚಿತ್ರದ ಕಲೆಕ್ಷನ್‌ ಉತ್ತರ ಕೊಟ್ಟಿದೆ: ಆರ್‌.ಚಂದ್ರು

‘ಒರಿಜಿನಲ್‌ ಮಾನ್‌ಸ್ಟರ್‌’ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌.ಚಂದ್ರು, ‘ಕಬ್ಜ ಫ್ಲಾಪ್‌ ಆಗಿದ್ದರೆ ಶಿವಣ್ಣ ಅಂಥ ದೊಡ್ಡ ಸ್ಟಾರ್‌ ಹೀರೋ ನನ್ನ ಜೊತೆಗೆ ಸಿನಿಮಾ ಮಾಡುತ್ತಿರಲಿಲ್ಲ. ಅಮೆಜಾನ್‌ ಪ್ರೈಮ್‌ ವೀಡಿಯೋ ಓಟಿಟಿಯವರು ಕರ್ನಾಟಕದಿಂದ ಇಬ್ಬರನ್ನು ಮಾತ್ರ ಬಿಸಿನೆಸ್‌ ಮೀಟಿಂಗ್‌ಗೆ ಕರೆದಿದ್ದರು. ಒಬ್ಬರು ಹೊಂಬಾಳೆ ಪ್ರೊಡಕ್ಷನ್‌ ಮತ್ತು ನಾನು.

ಇಷ್ಟೆಲ್ಲ ಗೌರವ ಪಡೆಯಲು ಸಾಧ್ಯವಾಗಿದ್ದು ‘ಕಬ್ಜ’ ಸಿನಿಮಾದಿಂದಲೇ. ಅಲ್ಲದೆ ‘ಕಬ್ಜ’ ಎಷ್ಟು ಕೋಟಿ ಗಳಿಸಿದೆ, ಎಷ್ಟು ಕೋಟಿ ತೆರಿಗೆ ಕಟ್ಟಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿದ್ದೇನೆ. ಹಾಗಿದ್ದರೂ ‘ಕಬ್ಜ’ ಫ್ಲಾಪ್‌ ಅನ್ನೋರಿಗೆ ನಾನು ಉತ್ತರ ಕೊಡಲ್ಲ. ನಾನು ಸಿನಿಮಾ ಮಾಡಿಕೊಂಡು ಹೋಗುತ್ತೇನೆ. ಮಾತಾಡೋವ್ರು ಮಾತಾಡಲಿ’ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾ.ರಾಜ್ ಕುಮಾರ್-ಲೀಲಾವತಿ ಸಂಬಂಧ: ತಿಂಗಳಲ್ಲಿ 10 ಮುದ್ರಣ ಕಂಡ 'ಲೀಲಮ್ಮ ನಿನ್ನ ಗಂಡ ಯಾರಮ್ಮ?' ಕೃತಿ!
ಚಾಲೆಂಜಿಂಗ್ ಲಾಯರ್ ವೈದೇಹಿಯಾದ ಭಾವನಾ: ವಿಭಿನ್ನ 'ಸ್ಪಾರ್ಕ್' ಅವತಾರದಲ್ಲಿ ಜಾಕಿ ನಟಿ!