ಚಾಲೆಂಜಿಂಗ್ ಲಾಯರ್ ವೈದೇಹಿಯಾದ ಭಾವನಾ: ವಿಭಿನ್ನ 'ಸ್ಪಾರ್ಕ್' ಅವತಾರದಲ್ಲಿ ಜಾಕಿ ನಟಿ!

Published : Sep 08, 2026, 03:40 PM IST
Bhavana Menon

ಸಾರಾಂಶ

‘ಸ್ಪಾರ್ಕ್’ ಸಿನಿಮಾದಲ್ಲಿ ಲಾಯರ್ ವೈದೇಹಿ ಪಾತ್ರದಲ್ಲಿ ನಟಿಸಿರುವ ಭಾವನಾ ಮೆನನ್, ತಮ್ಮ ವಿಭಿನ್ನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ನಾಯಕ ನಿರಂಜನ್ ಸುಧೀಂದ್ರ ಅವರ ನಟನಾ, ಡ್ಯಾನ್ಸ್ ಮತ್ತು ಫೈಟ್ ಪ್ರತಿಭೆಯನ್ನು ನಟಿ ಮೆಚ್ಚಿಕೊಂಡಿದ್ದಾರೆ.

ಬಹಳ ದಿನಗಳ ಬಳಿಕ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಬಹುಭಾಷಾ ನಟಿ ಭಾವನಾ ಮೆನನ್, ಇದೀಗ ‘ಸ್ಪಾರ್ಕ್’ ಸಿನಿಮಾದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಭಾವನಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಜಾಕಿ ಖ್ಯಾತಿಯ ಭಾವನಾ, ಸಿನಿಮಾದಲ್ಲಿ ಲಾಯರ್ ವೈದೇಹಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ‘ಸ್ಪಾರ್ಕ್’ ಸಿನಿಮಾದ ಬಗ್ಗೆ ಮಾತನಾಡಿರುವ ಭಾವನಾ, ಚಿತ್ರದ ಕಥೆಯಲ್ಲಿಯೇ ಸಾಕಷ್ಟು ‘ಸ್ಪಾರ್ಕ್’ ಇದೆ ಎಂದು ಹೇಳಿದ್ದಾರೆ. ಸಿನಿಮಾದ ಪ್ರತಿಯೊಂದು ಪಾತ್ರವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇದೇ ಕಾರಣಕ್ಕೆ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಸವಾಲಿನ ಚಿತ್ರಕಥೆ ಎದುರಾದಾಗ ಮಾತ್ರ ಸಿನಿಮಾ ಒಪ್ಪಿಕೊಳ್ಳುವ ಭಾವನಾ, ನಿರ್ದೇಶಕರು ವೈದೇಹಿ ಪಾತ್ರದ ಬಗ್ಗೆ ವಿವರಿಸಿದಾಗ ಇದು ತಾವು ಈ ಹಿಂದೆ ಮಾಡಿರದಂತಹ ಪಾತ್ರ ಎಂಬುದು ಅರಿವಾಯಿತು ಎಂದು ಹೇಳಿದ್ದಾರೆ. ಬಹಳ ಸಮಯದ ಬಳಿಕ ತಮ್ಮೊಳಗಿನ ನಟಿಯನ್ನು ಸಂಪೂರ್ಣವಾಗಿ ಹೊರತರುವ ಅವಕಾಶ ಈ ಪಾತ್ರದಿಂದ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕಿ ಸಮರ್ಪಣಾ ಅವರು ಸಿನಿಮಾದ ಬಗ್ಗೆ ಹೊಂದಿರುವ ಸಮರ್ಪಣಾ ಭಾವನೆಯನ್ನೂ ಭಾವನಾ ಮೆಚ್ಚಿಕೊಂಡಿದ್ದಾರೆ. ಪ್ರತಿದಿನವೂ ಸೆಟ್‌ಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ ನಿರ್ಮಾಪಕಿಯ ಉತ್ಸಾಹ ಚಿತ್ರತಂಡಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ಹೇಳಿದ್ದಾರೆ.

ನಿರಂಜನ್ ಬಗ್ಗೆ ಭಾವನಾ ಮೆಚ್ಚುಗೆಯ ಮಾತು

‘ಸ್ಪಾರ್ಕ್’ ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಬಗ್ಗೆಯೂ ಭಾವನಾ ಮನಬಿಚ್ಚಿ ಮಾತನಾಡಿದ್ದಾರೆ. ನಟನಾಗಿ ಮಾತ್ರವಲ್ಲದೆ ಡ್ಯಾನ್ಸ್ ಮತ್ತು ಫೈಟ್‌ನಲ್ಲಿಯೂ ಉತ್ತಮವಾಗಿ ಕಾಣಿಸಿಕೊಳ್ಳುವ ಅಪರೂಪದ ಬಹುಮುಖ ಪ್ರತಿಭೆ ನಿರಂಜನ್ ಎಂದು ಅವರು ಪ್ರಶಂಸಿಸಿದ್ದಾರೆ. ಯುವ ನಟ ನಿರಂಜನ್ ಸುಧೀಂದ್ರ ಚಿತ್ರರಂಗದ ಭರವಸೆಯ ನಾಯಕನಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ವಿಶ್ವಾಸವನ್ನೂ ಭಾವನಾ ವ್ಯಕ್ತಪಡಿಸಿದ್ದಾರೆ.

ಇನ್ನು ‘ಸ್ಪಾರ್ಕ್’ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರ ಜೊತೆಗಿನ ಆತ್ಮೀಯತೆಯ ಬಗ್ಗೆಯೂ ನಟಿ ಮಾತನಾಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಕೌಟುಂಬಿಕ ವಿಚಾರಗಳು ಹಾಗೂ ಒಳ್ಳೆಯ ಸಂದೇಶಕ್ಕೂ ಜಾಗ ನೀಡಲಾಗಿದೆ. ಮನರಂಜನೆಯ ಜೊತೆಗೆ ಕುಟುಂಬ ಸಮೇತ ನೋಡಬಹುದಾದ ಸಂಪೂರ್ಣ ಪ್ಯಾಕೇಜ್ ಆಗಿ ಸಿನಿಮಾ ಮೂಡಿಬಂದಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ‘ಸ್ಪಾರ್ಕ್’ ಇದೇ ಸೆಪ್ಟೆಂಬರ್ 25ರಂದು ಪ್ರೇಕ್ಷಕರ ಮುಂದೆ ಬರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮತ್ತೆ ರಾಕಿ ಭಾಯ್ ಹವಾ.. 'KGF 3' ಕಥೆ ರೆಡಿ: ಪ್ರಶಾಂತ್ ನೀಲ್ ಕೊಟ್ರು ಬಿಗ್ ಅಪ್‌ಡೇಟ್
MN Lakshmi Devi ಸುಳ್ಳು ಸುದ್ದಿ ನಂಬಬೇಡಿ; ಹಿರಿಯ ನಟಿ ಲಕ್ಷ್ಮೀದೇವಿ ಆರೋಗ್ಯವಾಗಿದ್ದಾರೆ!