ಚಿತ್ರರಂಗದ ಸ್ಟಾರ್‌ಗಳನ್ನು ನೋಡಿ ಸೈಕ್ ಆದ Dr Bro; ಫೋಟೋ ವೈರಲ್!

Published : Jun 22, 2023, 04:52 PM ISTUpdated : Jun 22, 2023, 04:53 PM IST
ಚಿತ್ರರಂಗದ ಸ್ಟಾರ್‌ಗಳನ್ನು ನೋಡಿ ಸೈಕ್ ಆದ Dr Bro; ಫೋಟೋ ವೈರಲ್!

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಡಾಕ್ಟರ್ ಬ್ರೋ ಅಪ್ಲೋಡ್ ಮಾಡಿರುವ ಫೋಟೋ. ನೆಟ್ಟಿಗರ ಕಾಮೆಂಟ್ ವೈರಲ್...

ಯುಟ್ಯೂಬ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಜನರಿಗೆ ದೇಶ ವಿದೇಶವನ್ನು ಪರಿಚಯ ಮಾಡುತ್ತಿರುವ ಅಪ್ಪಟ್ಟ ಕನ್ನಡಿಗ ಡಾ. ಬ್ರೋ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡುವ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ಸೆಲ್ಫಿ ಫೋಟೋದಲ್ಲಿ ಕಾಣಿಸುವುದು ಕನ್ನಡ ಚಿತ್ರರಂಗದ ಸ್ಟಾರ್ ನಟ ನಟಿಯರು. ಏನಿದು ಇಂಟ್ರೆಸ್ಟಿಂಗ್ ಫೋಟೋ?

ಹೌದು! ಡಾ ಬ್ರೋ ತಿಂಗಳಿಗೊಂದು ದೇಶಕ್ಕೆ ಭೇಟಿ ನೀಡಿ ಅಲ್ಲಿನ ಆಚಾರ ವಿಚಾರಗಳನ್ನು ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಾರೆ. ಹೀಗೆ ಪ್ರಯಾಣ ಮಾಡುವಾಗ ವಿಮಾನ ನಿಲ್ದಾಣದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಕಾಣಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ, ಲೂಸ್ ಮಾದ ಯೋಗೀಶ್, ನೀನಾಸಂ ಸತೀಶ್, ಪನ್ನಗಾಭರಣ, ನಾಗಭೂಷನ್,ಡಾಲಿ ಧನಂಜಯ್, ವಾಸುಕಿ ವೈಭವ್ ಸೇರಿದಂತೆ ಇನ್ನು ಕೆಲಸ ನಟರಿದ್ದರು. ಸ್ವತಃ ಬ್ರೋ ಕ್ಲಿಕ್ ಮಾಡಿರುವ ಈ ಫೋಟೋಗೆ 'ನಾನು ತುಂಬಾ ಚಿಕ್ಕಂದಿನಿಂದ ಇವರೆಲ್ಲರನ್ನು ನೋಡ್ತಿದ್ದೆ. ಇಂದು ಅಚಾನಕ್ಕಾಗಿ ಎಲ್ಲರೂ ಒಟ್ಟಾಗಿ ನೋಡಿ ಸೈಕ್ ಆದೆ' ಎಂದು ಬರೆದುಕೊಂಡಿದ್ದಾರೆ.

Daredevil Mustafa Trailer: ಹೊಸಬರ ಚಿತ್ರಕ್ಕೆ ಡಾ ಬ್ರೋ ಸಾಥ್, ಹೇಗಿದೆ ಟ್ರೈಲರ್?

ಇಲ್ಲಿ ಯಾರು ಯಾರನ್ನು ಮೀಟ್ ಮಾಡಿ ಸೈಕ್ ಆಗಿದ್ದಾರೆ ಗೊತ್ತಿಲ್ಲ ಆದರೆ ಕಾಮೆಂಟ್ಸ್‌ನಲ್ಲಿ ಸೂಪರ್ ಸೈಕ್ ಆಗಿದೆ. 'ಹಿಂದೆ ನಿಂತಿರೋರು ಕನ್ನಡ ಚಿತ್ರರಂಗದವರು ಮುಂದೆ ನಿಂತಿರೋದು ಚರಿತ್ರೆಯನ್ನು ಸೃಷ್ಟಿ ಮಾಡುವವನು' ಎಂದು ಶ್ರೀನಿ ಎಂಬುವರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಕನ್ನಡ ಬರವಣಿಗೆ ಹಾಗೂ ಕನ್ನಡ ಪ್ರೇಮವನ್ನು ಕಂಡು ಇಲ್ಲಿ ನಾನು ಸೈಕಾದೆ ಎಂದು ರಾಘು ತುಮಕೂರು ಹೇಳಿದ್ದಾರೆ. ಏನ್ ದೇವ್ರು ನಿಮ್ ಕರಾಮತ್ತು ನಿಮ್ಮ ರೇಂಜ್‌ ಬೇರೆ ಬ್ರೋ ನಿನ್ನ ಮೀಟ್ ಮಾಡೋದೇ ನಮ್ಮ ಪುಣ್ಯ' ಎಂದು ಕಾಮೆಂಟ್‌ಗಳು ಸುರಿಮಳೆ ನೋಡಬಹುದು. 

Dr Broಗೆ ಗೋಲ್ಡನ್‌ ಪ್ಲೇ ಬಟನ್; ಚಿನ್ನನೇ ಅಲ್ಲ ಗುರು ಎಂದು ಅಸಲಿ ಸತ್ಯ ಬಿಚ್ಚಿಟ್ಟ ಗಗನ್

ಎಲ್ಲೋಗುತ್ತಿದ್ದರು?

ಜೂನ್ 17ರಂದು ದುಬೈನಲ್ಲಿ ರಾಜ್ ಕಪ್ ಟೀಮ್ ಹರಾಜು ನಡೆದಿದೆ. ಈ ಪ್ರಕ್ರಿಯೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟರು, ನಿರ್ದೇಶಕು, ಗಾಯಕರು, ನಿರ್ಮಾಪಕರು ಭಾಗಿಯಾಗಿದ್ದರು. ಈ ವರ್ಷ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದೆ. ಮತ್ತೊಂದು ವಿಶೇಷತೆ ಏನೆಂದರೆ ಪಂದ್ಯಾವಳಿ ಉದ್ಘಾಟನೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಅತಿಥಿಯಾಗಿ ಆಗಮಿಸಲಿದ್ದಾರೆ. ರಾಜ್‌ ಕಪ್‌ನ ಆಯೋಜಿಸುತ್ತಿರುವ ರಾಜೇಶ್ ಬ್ರಹ್ಮಾವರ ಈ ಸಲ 12 ತಂಡಗಳಿದೆ 1000ಕ್ಕೂ ಅಪ್ಲೀಕೇಷನ್ ಬಂದಿದೆ ಹೀಗಾಗಿ 12 ತಂಡಗಳಿಗೆ 12 ಕ್ಯಾಪ್ಟನ್‌ 12 ವೈಸ್ ಕ್ಯಾಪ್ಟನ್ ಹಾಗೂ ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್‌ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿದೆ ಎಂದು ಹೇಳಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್