ನಟ Ravichandran ಕಿಡ್ನಾಪ್, ಲೀಕ್ ಆದ ವಿಡಿಯೋ ವೈರಲ್!

Suvarna News   | Asianet News
Published : Feb 15, 2022, 01:50 PM IST
ನಟ Ravichandran ಕಿಡ್ನಾಪ್, ಲೀಕ್ ಆದ ವಿಡಿಯೋ ವೈರಲ್!

ಸಾರಾಂಶ

ಕ್ರೇಜಿ ಸ್ಟಾರ್‌ನ ಕಿಡ್ನ್ಯಾಪ್ ಮಾಡಲು ಕಾರಣವೇನು? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ಯಾಕೆ? 

ಸ್ಯಾಂಡಲ್‌ವುಡ್‌ (Sandalwood) ರೊಮ್ಯಾಂಟಿಕ್ ಮ್ಯಾನ್, ಕ್ರೇಜಿ ಲೋಕ ಸೃಷ್ಟಿಸಿದ ರಣಧೀರ ರವಿಚಂದ್ರನ್‌ (Ravichandran) ಅವರನ್ನು ಯಾರೋ ಪುಂಡರು ಕಿಡ್ನಾಪ್ (Kidnap) ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಈ ಸಿಪಾಯಿಯನ್ನು ಕಿಡ್ನಾಪ್ ಮಾಡುವ ಧೈರ್ಯ ಯಾರಿಗಿದೆ? ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನ್ಯೂಸ್‌ (News) ವಾಹಿನಿಯೊಂದರ ವಿಡಿಯೋ ಕೂಡ ಇದೆ, ಏನಿದು ಹೇಗೆ ಸಾಧ್ಯ ಎಂದು ಬಿಗ್ ಕನ್ಫ್ಯೂಷನ್‌ನಲ್ಲಿರುವ ಜನರಿಗೆ ಇಲ್ಲಿದೆ ಕ್ಲಾರಿಟಿ...

ವೈರಲ್ ಅಗುತ್ತಿರುವ ವಿಡಿಯೋವನ್ನು ಜೀ ಕನ್ನಡ (Zee Kannada) ವಾಹಿನಿ ರಿಲೀಸ್ ಮಾಡಿದೆ. ಶೀಘ್ರವೇ ಜೀ ಕನ್ನಡದಲ್ಲಿ ಡ್ರಾಮಾ ಜ್ಯೂನಿಯರ್ಸ್‌ (Drama Juniors) ರಿಯಾಲಿಟಿ ಶೋ ಶುರುವಾಗಲಿದ್ದು, ತೀರ್ಪುಗಾರರಲ್ಲಿ ಒಬ್ಬರಾಗಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ, ಇದೊಂದು ರಿಯಾಲಿಟಿ ಶೋ (reality show) ಪ್ರೋಮೊವನ್ನು ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ ರವಿ ಮಾಮ ಎಂಟ್ರಿಯನ್ನು ಜನರಿಗೆ ತೋರಿಸಬೇಕು ಎಂದು  ಕಿಡ್ನಾಪ್ ಮಾಡಿರುವ ಕಾನ್ಸೆಪ್ಟ್‌ ಬಳಸಲಾಗಿದೆ.

ಗರ್ಲ್‌ಫ್ರೆಂಡ್‌ ರಮ್ಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ Nagini 2 ನಟ ನಿನಾದ್!

ಪ್ರೋಮೋದಲ್ಲಿ ರವಿಚಂದ್ರನ್ ಕಿಡ್ನಾಪ್ ಆಗುವುದನ್ನು ತೋರಿಸಿದ್ದಾರೆ. ಅದರ ಜೊತೆಗೆ ಅವರ ಅಭಿಮಾನಿಗಳು ಸಂತಸದಲ್ಲಿ ಕುಣಿಯುತ್ತಿರುವುದನ್ನು ಕೂಡ ತೋರಿಸಿದ್ದಾರೆ. ಕಿಡ್ನಾಪ್ ಮಾಡಿರುವ ವಿಡಿಯೋ ಒಂದು ದಿನ ರಿಲೀಸ್ ಆದರೆ, ಮತ್ತೊಂದರಲ್ಲಿ ಅವರ ಕ್ಯಾಮೆರಾ (Camera) ಮುಂದೆ ಬಂದು ಕುಳಿತಿದ್ದರು. ಏಕೆಂದರೆ ಅವರನ್ನು ಅಪuರಣ (Kidnap) ಮಾಡಿದ್ದು ಡ್ರಾಮ ಜ್ಯೂನಿಯರ್ಸ್‌ (Drama Juniors) ಮಕ್ಕಳು ಎನ್ನಲಾಗಿದೆ. ಸೀಸನ್4 ಶೀಘ್ರದಲ್ಲಿ ಆರಂಭವಾಗಲಿದೆ. ಮಕ್ಕಳ ಆಯ್ಕೆಯೂ ನಡೆದಿದ್ದು, 16 ಪ್ರತಿಭಾವಂತ ಮಕ್ಕಳನ್ನು ನೀವು ವೇದಿಕೆ ಮೇಲೆ ನೋಡಬಹುದು. 

 

ಡ್ರಾಮe ಜ್ಯೂನಿಯರ್ಸ್ ಮಕ್ಕಳು ಮತ್ತು ರವಿಚಂದ್ರನ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅವರಿಗೆ ಪ್ರಶ್ನೆ ಹಾಕಲಾಗಿದೆ. 'ಶಾಂತಿ ಕ್ರಾಂತಿ (Santi Kranti), ಹಳ್ಳಿ ಮೇಷ್ಟ್ರು (Halli mestru) ಅಂತ ಸಿನಿಮಾಗಳಿಗೂ ಮಕ್ಕಳು ಬೇಕು. ಈಗ ನಾವು ಬೇಡ್ವಾ? ನಾವು ಚಿಕ್ಕವರಾಗಿರಬಹುದು. ಆದರೆ ಕೊಡೋ ಬಿಲ್ಡಪ್‌ ದೊಡ್ಡದೇ,' ಎಂದು ಮಕ್ಕಳು ಡೈಲಾಗ್ ಬಿಟ್ಟಿದ್ದಾರೆ. ಈ ಪ್ರೋಮೋ (Promo) ನೋಡಿ ಎಲ್ಲರೂ ನಕ್ಕಿದ್ದಾರೆ.  ಸಾಮಾನ್ಯವಾಗಿ ಮೂರು ತೀರ್ಪುಗಾರರು ಇರಲಿದ್ದಾರೆ, ಹಿರಿಯ ನಟಿ ಲಕ್ಷ್ಮಿ (Lakshmi) ಮತ್ತು ರವಿಚಂದ್ರನ್ ಕನ್ಫರ್ಮ್ ಆಗಿದ್ದಾರೆ. ಮತ್ತೊಬ್ಬರು ಯಾರು ಎಂದು ಕಾದು ನೋಡಬೇಕಿದೆ. ಯಾವುದೇ ಸೀಸನ್‌ ಇರಲ್ಲಿ ಅದಕ್ಕೆ ಮಾಸ್ಟರ್ ಅನಂದ್‌ (Master Anand) ಕಾರ್ಯಕ್ರಮದ ನಿರೂಪಣಾ ಹೊಣೆ ಹೊರುತ್ತಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೋವಿಂದೇ ಗೌಡ - ದಿವ್ಯಶ್ರೀ!

ದೃಶ್ಯಂ 2 (Dhrishyam 2) ಸಿನಿಮಾ ಆದ್ಮೇಲೆ ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಿದ್ದಾರೆ. ಅವರ ಇನ್ನೊಂದು ಸಿನಿಮಾ ಈ ವರ್ಷ ತೆರೆ ಕಾಣಬೇಕಿದೆ. ವೀಕ್ಷಕರನ್ನು ಈ ವರ್ಷ ಹೆಚ್ಚಿಗೆ ಮನೋರಂಜಿಸಲು ಅವರಿಗೆ ಹತ್ತಿರವಾಗಲು, ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕ್ರೇಜಿ ಸ್ಟಾರ್‌ಗೆ (Crazy Star) ಕಿರುತೆರೆ (Small Screen) ಹೊಸದಲ್ಲ ಅನೇಕ ಡ್ಯಾನ್ಸ್‌ ರಿಯಾಲಿಟಿ (Dance Reality) ಶೋನಗಳಿಗೆ ತೀರ್ಪುಗಾರರಾಗಿದ್ದಾರೆ. ಆದರೆ ಇದೇ ಮೊದಲ ಬಾರಿ ಮಕ್ಕಳ ಡ್ರಾಮe ನೋಡಲು ಬರುತ್ತಿರುವುದು. ರವಿಚಂದ್ರನ್‌ ಜೊತೆ ಮತೊಬ್ಬ ಜಡ್ಜ್‌ ಯಾರು ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಗೆಸ್ ಮಾಡುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ ಮುದ್ದು ಹುಡುಗಿ ಮೇಘನಾ ರಾಜ್ (Meghana Raj) ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡ ನಂತರ ಅವರೇ ಡ್ರಾಮ ಜ್ಯೂನಿಯರ್ಸ್‌ಗೂ ಬರಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಬೆಳೆಯುತ್ತಿರುವ ಮಗುವಿನ ತುಂಟ ಗುಣವನ್ನು ನೋಡುತ್ತಿರುವ ತಾಯಿಗೆ ನಿಜಕ್ಕೂ ಮಕ್ಕಳು ಅ ವಯಸ್ಸಿನಲ್ಲಿ ಹೇಗಿರುತ್ತಾರೆ? ಅವರೊಟ್ಟಿಗೆ ಹೇಗೆ ಮಾತನಾಡಬೇಕು ಎಂದು ತಿಳಿದಿರುತ್ತದೆ. ಅವರೇ ಬರಲಿ ಎನ್ನುತ್ತಿದ್ದಾರೆ. ಪ್ರತಿವರ್ಷವೂ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ತೀರ್ಪುಗಾರರಾಗಿರುತ್ತಿದ್ದರು. ಆದರೆ ಈ ಸಲ ಅವರು ಡ್ಯಾನ್ಸ್‌ ಚಾಂಪಿಯನ್‌ಶಿಪ್‌ನಲ್ಲಿರುವ (Dance Championship) ಕಾರಣ ಡ್ರಾಮ ಜ್ಯೂನಿಯರ್ಸ್‌ಗೆ ಬರುವುದು ಖಚಿತವಾಗಿಲ್ಲ. ಒಟ್ಟಿನಲ್ಲಿ ವೀಕೆಂಡ್ ಮನೋರಂಜನೆಗೆ ವೀಕ್ಷಕರು ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ