ಪರೀಕ್ಷೆ ಬರೆಯುವ ದಿನ ಕೈಗೆ ಸಿಗ್ತು ದೊಡ್ಡ ಅವಕಾಶ...ಲೆಕ್ಕಾಚಾರ ಮಾಡಿ ಎಕ್ಸಾಂ ಬಿಟ್ಟು ಹಾಡಿದ ವಿಜಯ್ ಪ್ರಕಾಶ್....
ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಪತ್ನಿ ಕಾವ್ಯಾ ಪ್ರಕಾಶ್ ಪ್ರೀತಿ 20ನೇ ವಯಸ್ಸಿಗೆ ಮದುವೆ ಮಾಡಿಕೊಂಡರು. ತಮ್ಮಿಬ್ಬರ ನಡುವೆ ಪ್ರೀತಿ ಹೇಗಿದೆ ಎಂದು ಜೀ ತಮಿಳು ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
'ನಾವು ಕೂಡ ಜಗಳ ಮಾಡುತ್ತೀವಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇರುತ್ತದೆ. ನನಗೆ Ego ಇಲ್ಲ ಆಕೆಗೂ ಇಲ್ಲ. ನಾನು ಇಂಜಿನಿಯರಿಂಗ್ ಕೂಡ ಮುಗಿಸಿರಲಿಲ್ಲ ಅಷ್ಟರಲ್ಲಿ ಆಕೆ ಮನೆಯವರ ಜೊತೆ ಮಾತನಾಡಿ ನಾನು ಈ ಗಾಯಕನನ್ನು ಮದುವೆ ಆಗಬೇಕು ಎಂದು ತೀರ್ಮಾನ ಮಾಡಿದ್ದೀನಿ ಎಂದುಬಿಟ್ಟಳು. ಅತನ ಬಳಿ ಒಂದು ಪದವಿನೂ ಇಲ್ಲ ಹೇಗೆ ಮದುವೆ ಆಗ್ತೀಯಾ ಎಂದು ಮನೆಯಲ್ಲಿ ಕೇಳಿದ್ದರು ಅದಿಕ್ಕೆ ಆಕೆಗೋಸ್ಕರ ನಾನು ಡಿಪ್ಲಮೋ ಮೂಲಕ ಗ್ರ್ಯಾಜುಯೇಷನ್ ಮುಗಿಸುವ ಪ್ರಯತ್ನ ಮಾಡಿದೆ ಆದರೆ ಆಗಲಿಲ್ಲ ಏಕೆಂದರೆ ಬ್ರಿಟಾನಿಯ ಅವರಿಂದ 14 ಭಾಷೆಗಳಲ್ಲಿ ಜಿಂಗಲ್ಸ್ ಹಾಡಲು ಎಕ್ಸಾಂ ದಿನವೇ ಅವಕಾಶ ಪಡೆದುಕೊಂಡೆ. ಇದನ್ನು ಮಾಡಿದರೆ ಇಷ್ಟು ದುಡ್ಡು ಬರುತ್ತದೆ ಎಕ್ಸಾಂ ಬರೆದರೆ ಆಮೇಲೆ ಎಷ್ಟು ಮಾಡಬಹುದು ಎಂದು ಲೆಕ್ಕಾಚಾರ ಮಾಡಿ ಎಕ್ಸಾಂ ಬರೆಯದೇ ನಾನು ಹಾಡಲು ಹೋದೆ. ನನ್ನ ಮಾವ ಹೇಳಿದರು ನೀನು ಒಂದು ಪದವಿ ಪಡೆದಿರಬೇಕು ಇಲ್ಲವಾದರೆ ಮನೆ ಖರೀದಿಸಬೇಕು ಎಂದು. ನಾನು ಮೂರು ವರ್ಷಗಳಲ್ಲಿ ಮನೆ ಖರೀದಿಸಿದೆ ಸರ್ ಮದುವೆ ಮಾಡಿಕೊಡಿ ಎಂದು ಕೇಳಿದೆ ಅದಾದ ಮೇಲೆ ತಿರುಪತಿಯಲ್ಲಿ ಮದುವೆ ಮಾಡಿಕೊಂಡೆ. ನಿಜಕ್ಕೂ ಪತ್ನಿ ತುಂಬಾ ತ್ಯಾಗ ಮಾಡುತ್ತಾಳೆ ಏಕೆಂದರೆ ಹಾಡು ಅಂತ ನಾನು ಊರು ಊರು ಸುತ್ತಲು ಶುರು ಮಾಡಿದೆ ಆದರೆ ಆಕೆ ನನ್ನ ಅಪ್ಪ ಅಮ್ಮ ಮತ್ತು ಮಗಳನ್ನು ಚೆನ್ನಾಗಿ ನೋಡಿಕೊಂಡು ಮನೆ ನಡೆಸಿಕೊಂಡು ಬಂದಳು' ಎಂದು ವಿಜಯ್ ಪ್ರಕಾಶ್ ಮಾತನಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಶೀರ್ವಾದ ಪಡೆದ ರಾದ್ಯಾ; ಪರಮಾತ್ಮನ ಶಕ್ತಿ ಎಂದ ನಟಿ!
ವಿಜಯ್ ಪ್ರಕಾಶ್ ಸಪೋರ್ಟ್ ಇಲ್ಲದೆ ನಾನು ಇಷ್ಟು ದೂರ ಬರಲು ಸಾಧ್ಯವಿರುತ್ತಿರಲಿಲ್ಲ. ಪ್ರತಿಯೊಂದಕ್ಕೂ ವಿಜಯ್ ನನಗೆ ಕ್ರೆಡಿಟ್ ಕೊಡಬಹುದು ಆದರೆ ನಾವು ಏನೇ ಮಾಡಿದ್ದರೂ ಒಟ್ಟಿಗೆ ನಿರ್ಧಾರ ತೆಗೆದುಕೊಳ್ಳುತ್ತೀವಿ' ಎಂದು ಪತ್ನಿ ಮಾತನಾಡಿದ್ದಾರೆ.
ರೀಲ್ಸ್ ಮಂಜಣ್ಣ Prank; ಎಣ್ಣೆ ಬಳಸಿದ್ದಕ್ಕೆ ಉದುರಿದ ಕೂದಲು, ಯಾಮಾರಿಸಿ ಓಡಾಡುತ್ತಿರುವುದು ನಿಜವೇ?
ನಾನು ಮದುವೆ ಮಾಡಿಕೊಂಡಾಗ ನಾನು 20 ವಯಸ್ಸು ಆಕೆ 18 ವರ್ಷದ ಹುಡುಗಿ. 23ನೇ ವರ್ಷಕ್ಕೆ ನನ್ನ ಮಗಳು ಕೈಯಲ್ಲಿದ್ದಳು. ಮದುವೆಯಲ್ಲಿ ಸಂಗಾತಿಯನ್ನು ಬದಲಾಯಿಸಬಾರದು. ನಿನಗಾಗಿ ನಾನು ಬದಲಾಗಿದ್ದೀನಿ ನನಗಾಗಿ ನೀನು ಬದಲಾಗಬೇಕು ಎನ್ನಬಾರದು. ಇಬ್ಬರು ಒಂದೊಂದು ಕೈ ಹಿಡಿದುಕೊಂಡು ಶಾಶ್ವತವಾಗಿ ಇರುತ್ತೀವಿ ಮತ್ತೊಂದು ಕೈ ಫ್ರೀ ಬಿಟ್ಟಿರುತ್ತೀವಿ ಅದು ನಾವು ನಾವಾಗಿರುವುದಕ್ಕ ಎಂದು ವಿಜಯ್ ಹೇಳಿದ್ದಾರೆ.