ಪುನೀತ್ ರಾಜ್‌ಕುಮಾರ್ ತಾಯಿ ಬಗ್ಗೆ ಮಾತನಾಡುತ್ತಿರುವ ವಿಡಿಯೋ ವೈರಲ್. ಆತ ದೇವರು ಎಂದು ಪಾರ್ವತಮ್ಮನವರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಹಾಟ್ ಸೀಟ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇದ್ದರು. ಈ ವೇಳೆ ಪಾರ್ವತಮ್ಮನವರು ಕೂಡ ಆಗಮಿಸಿದ್ದರು. ತಾಯಿ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ ಎಂದು ರಮೇಶ್ ಅರವಿಂದ್ ಕೇಳಿದಾಗ ಅಪ್ಪು ಹೇಳಿದ ಮಾತುಗಳು ವೈರಲ್ ಅಗುತ್ತಿದೆ.
ನನ್ನ ತಾಯಿ ಬಗ್ಗೆ ಮಾತ್ರವಲ್ಲ ಕರ್ನಾಟಕದಲ್ಲಿ ಇರುವ ಪ್ರತಿಯೊಬ್ಬ ಮಕ್ಕಳು ತಮ್ಮ ತಾಯಿ ಬಗ್ಗೆ ಖುಷಿ ಪಟ್ಟು ಮಾತನಾಡುತ್ತಾರೆ. ನನ್ನ ತಾಯಿಗೆ ಕಮಿಟ್ಮೆಂಟ್ ತುಂಬಾನೇ ಇತ್ತು ಅಪ್ಪಾಜೀ ಕೆಲಸಗಳು, ಆಫೀಸ್ ಮತ್ತು ಮನೆ ಎಲ್ಲವೂ ನೋಡಿಕೊಳ್ಳಬೇಕಿತ್ತು ಅದರ ನಡುವೆ ನಾನೊಬ್ಬ ಟಾರ್ಚರ್ ಆಗಿದ್ದೆ. ನಾನು ಸಿಕ್ಕಾಪಟ್ಟೆ ತರ್ಲೆ ಹುಡುಗ ಆಗಿದ್ದ, ಆಕ್ಟಿಂಗ್ ಮಾಡು ಅಂದ್ರೆ ನಾನು ಮಾಡುತ್ತೀನಿ ಅಂತ ಹೇಳಿದ್ದೀನಾ? ನನಗೆ ಇದು ಬೇಕು ಅಂದ್ರೆ ಬೇಕು..ಈ ಊಟ ಇಲ್ಲಿಂದಲೇ ನಿನ್ನಬೇಕು ಎಂದು ಹಠ ಮಾಡುತ್ತಿದ್ದೆ. ನನ್ನ ಕೈಗೆ ಹಣ ಕೊಡುತ್ತಿರಲಿಲ್ಲ ಆದರೆ ಪ್ರತಿಯೊಂದನ್ನು ನೋಡಿಕೊಂಡರು ಎಂದು ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ.
ಒಂದು ಡಿಗ್ರಿ ಇರ್ಬೇಕು ಇಲ್ಲ ಮನೆ ಮಾಡ್ಬೇಕು; ಗಾಯಕ ವಿಜಯ್ ಪ್ರಕಾಶ್‌ಗೆ ಮಾವನಿಂದ ಎದುರಾದ ಸವಾಲ್!
ಸುಮಾರು ಬ್ಯುಸಿನೆಸ್‌ಗಳಲ್ಲಿ ದುಡ್ಡು ಹಾಕಿ ಹಾಳು ಮಾಡಿದೆ ಆ ಹಣವನ್ನು ಕೂಡ ಅಮ್ಮ ಕೊಟ್ಟರು. ನನ್ನ ಮೇಲೆ ನಂಬಿಕೆ ಇತ್ತು ಆ ವಿಚಾರದಲ್ಲಿ ನನಗೆ ಖುಷಿ ಇದೆ. ತಪ್ಪು ಮಾಡಲಿ ಸರಿ ಮಾಡಲಿ ಪ್ರತಿಯೊಂದಕ್ಕೂ ಬೆಂಬಲವಾಗಿ ನಿಂತಿದ್ದು ಅಮ್ಮ ಮಾತ್ರ. ಚಿಕ್ಕ ವಯಸ್ಸಿನಲ್ಲಿ ನನಗೆ ಜವಾಬ್ದಾರಿ ಬರಲು ಕಾರಣ ಅಮ್ಮನೇ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಶೀರ್ವಾದ ಪಡೆದ ರಾದ್ಯಾ; ಪರಮಾತ್ಮನ ಶಕ್ತಿ ಎಂದ ನಟಿ!
ಆಸ್ಪತ್ರೆಗೆ ನನ್ನನ್ನು ಭಗವಾನ್ ಮತ್ತು ಪತ್ನಿ ಕರೆದುಕೊಂಡು ಹೋದರು. ನನಗೆ ಪರಿಚಯ ಇದ್ದ ಡಾಕ್ಟರ್ ಅವರನ್ನು ಕರೆಸಿಕೊಂಡೆ ನೋವು ಬಂದ ಮೇಲೆ 6.10ಕ್ಕೆ ಹುಟ್ಟಿದ್ದ. ಗಂಡು ಮಗು ಹುಟ್ಟಿದ್ದಾನಾ ಅಂತ ಮನಸ್ಸಿನಲ್ಲಿ ಅಂದುಕೊಂಡೆ. ಬಸರಿ ಇದ್ದಾಗ ಒಂದು ಹೇಳುತ್ತಿದ್ದರು ಬಲಗೈ ಇಟ್ಕೊಂಡು ಕೂತ್ಕೊಂಡ್ರೆ ಗಂಡು ಮಗು ಆಗುತ್ತೆ, ಎಡಗೈ ಎತ್ಕೊಂಡು ಕೂತ್ಕೊಂಡ್ರೆ ಹೆಣ್ಣು ಮಗು ಆಗುತ್ತೆ ಅಂತ ಅದರಿಂದ ಗ್ಯಾರಂಟಿ ಗಂಡು ಆಗುತ್ತೆ ಅಂತ. ನನ್ನ ತಮ್ಮನನ್ನು ಕಪ್ಪು ಹುಟ್ಟಿಸಿಬಿಟ್ಟೆ ನೀನು ಅಂತ ಕಿರು ಮಗಳು ಪೂರ್ಣಿಮಾ ಜಗಳ ಮಾಡುತ್ತಿದ್ದಳು. ಕೃಷ್ಣ ರಾಮ ಎಲ್ಲಾ ಕಪ್ಪು ಅದಿಕ್ಕೆ ಅವನು ಕಪ್ಪು ಹುಟ್ಟಿರುವುದು ಅವನು ದೇವರು ನೀನು ಏನ್ ಏನೋ ತಿಳಿದುಕೊಳ್ಳಬೇಡ ಅಂತ ಹೇಳಿ ಸಮಾಧಾನ ಮಾಡುತ್ತಿದ್ದೆ ಎಂದು ಪಾರ್ವತಮ್ಮ ರಾಜ್‌ಕುಮಾರ್ ಹೇಳಿದ್ದಾರೆ.