
ರೀಮೇಕ್ ಆಗಲಿರುವ ಚಿತ್ರದ ಹೆಸರು ‘ನಿನ್ನು ಕೋರಿ’. ನಾನಿ ನಟನೆಯ ಸೂಪರ್ ಹಿಟ್ ಆದ ಸಿನಿಮಾ. ಇದೇ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟ್ರಿ ಬ್ಯಾನರ್ನಲ್ಲಿ ರೀಮೇಕ್ ಮಾಡುವ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟಿಕ್‌ಟಾಕ್ ಲೋಕದಲ್ಲಿ 'ಪೊಗರು' ತೋರಿಸುತ್ತಿದ್ದಾರೆ 'ಬಹದ್ದೂರ್ ಹುಡುಗ'!
ಈ ಹಿಂದೆ ಶರಣ್ ನಟನೆಯಲ್ಲಿ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರವನ್ನು ನಿರ್ಮಿಸಿದ ಸಂಸ್ಥೆಯೇ ಈ ಪೀಪಲ್ಸ್ ಮೀಡಿಯಾ ಫ್ಯಾಕ್ಟ್ರಿ. ಈಗ ಧ್ರುವ ಸರ್ಜಾ ಅವರ ಕಾಲ್ಶೀಟ್ ಕೂಡ ಈ ಸಂಸ್ಥೆಯಲ್ಲಿದ್ದು, ತೆಲುಗಿನಲ್ಲಿ ತಾವೇ ನಿರ್ಮಿಸಿರುವ ‘ನಿನ್ನು ಕೋರಿ’ ಚಿತ್ರವನ್ನು ರೀಮೇಕ್ ಮಾಡುವ ಪ್ಲಾನ್ ಮಾಡುತ್ತಿದ್ದಾರಂತೆ.
ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ‘ಪೊಗರು’ ಚಿತ್ರದ ನಂತರ ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಸರದಿಯಲ್ಲಿದೆ. ಈ ಚಿತ್ರಕ್ಕೂ ನಂದ ಕಿಶೋರ್ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮೇ ತಿಂಗಳಲ್ಲಿ ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಸೆಟ್ಟೇರಲಿದೆ. ಈ ಎರಡೂ ಚಿತ್ರಗಳ ನಡುವೆ ನಿರ್ಮಾಪಕ ಕಂ ನಿರ್ದೇಶಕ ರಾಘವೇಂದ್ರ ಹೆಗಡೆ ಸಿನಿಮಾ ಕೂಡ ಕಾಯುತ್ತಿದೆ. ಈ ಹಿಂದೆ ‘ಜಗ್ಗುದಾದಾ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ರಾಘವೇಂದ್ರ ಹೆಗಡೆ ಅವರ ಎರಡನೇ ಪ್ರಯತ್ನದ ಚಿತ್ರ ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಸೆಟ್ಟೇರುತ್ತಿದೆ.
ಧ್ರುವ ಸರ್ಜಾ ಮನೆ ಮುಂದೆ ಫ್ಯಾನ್ಸ್ ಅಬ್ಬರ; ಬ್ಯೂಟಿಫುಲ್ ಹುಡ್ಗಿ ಮಾಸ್ ಡೈಲಾಗ್!
ಅಧಿಕೃತವಾಗಿ ಎರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಧ್ರುವ ಸರ್ಜಾ, ‘ನಿನ್ನು ಕೋರಿ’ ಚಿತ್ರದ ರೀಮೇಕ್ಗೂ ಸೈ ಎನ್ನುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.