
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಇಂದು ಕರ್ನಾಟಕ ನೂತನ ಮುತ್ರಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಭೇಟಿ ಮಾಡಿದ ಕಾರಣ ತಿಳಿಸಿದ್ದಾರೆ.
'ಸಿಎಂ ಅವರ ಇಡೀ ಕುಟುಂಬ ನಮ್ಮ ಫ್ಯಾಮಿಲಿ ಫ್ರೆಂಡ್ಸ್. ಇವರ ಮದುವೆಗೆ ನಮ್ಮ ತಂದೆ ಹೋಗಿದ್ದರು ಅವಾಗಿನಿಂದ ನಮಗೆ ತುಂಬಾ ಗೊತ್ತಿರುವವರು. ಈಗ ನಾವು ಭೇಟಿ ನೀಡಿದ್ದು ಎರಡು ಉದ್ದೇಶ. ಒಂದು ಅವರಿಗೆ ಶುಭಾಶಯಗಳ್ನು ತಿಳಿಸುವುದಕ್ಕೆ, ಇನ್ನೊಂದು ನಮ್ಮ ಎಜುಕೇಶನ್ ಸೆಂಟರ್‌ನಿಂದ ನಡೆಸಲಾಗುವ ಎಜುಕೇಶನ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದೀವಿ. ಅವರು ತಿಳಿಸುತ್ತೇನೆ ಎಂದಿದ್ದಾರೆ,' ಎಂದು ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿದ್ದಾರೆ.
ರಾಘಣ್ಣನ ಜೊತೆ ಹಿರಿಯ ಪುತ್ರ ಯುವ ಕೂಡ ಸಿಎಂರನ್ನು ಭೇಟಿ ಮಾಡಿದ್ದಾರೆ. ಯುವ ಇದೀಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಯುವ ಪ್ರತಿಭೆ. ಸಿಎಂ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಮಾವ ಎಂದು ಕರೆಯುವ ಮೂಲಕ ಶುಭಾಶಯಗಳು ತಿಳಿಸಿದ್ದರು. ಇನ್ನು ಕನ್ನಡ ಚಿತ್ರರಂಗದ ತೆರೆದಿರುವುದರ ಬಗ್ಗೆ ರಾಘಣ್ಣರನ್ನು ಪ್ರಶ್ನೆ ಮಾಡಿದಾಗ 'ಫಿಲ್ಮಂ ಚೇಂಬರ್ ಹೇಳಿದ ರೀತಿ ನಾವು ಮಾಡುತ್ತೇವೆ,' ಎಂದು ಹೇಳಿದ್ದಾರೆ.
ಇವತ್ತು ಕನ್ನಡ ಸಿನಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಹ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಭೇಟಿಗೆ ಕಾರಣ ತಿಳಿಸಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.