ಅಪ್ಪು ಎಂಟ್ರಿಗೆ ಶಿವರಾಜ್‌ಕುಮಾರ್ ಧ್ವನಿ. ದೊಡ್ಡ ಸ್ಟಾರ್ ಬಳಗ ಹೊಂದಿರುವ ಜೇಮ್ಸ್ ಟೀಸರ್ ರಿಲೀಸ್. ಅಭಿಮಾನಿಗಳಲ್ಲಿ ಆನಂದ ಭಾಷ್ಪ.
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಕೊನೆಯ ಸಿನಿಮಾ ಜೇಮ್ಸ್ ಟೀಸರ್ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. Emotions are bigger than business ಅಂತ ಹೇಳಿ ಆರಂಭವಾಗುವ ಈ ಟೀಸರ್‌ನಲ್ಲಿ ಅಪ್ಪು ಹಾವ, ಭಾವ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಪ್ಪು ಎಂಟ್ರಿಗೆ ಹಿರಿಯಣ್ಣ ಶಿವರಾಜ್‌ಕುಮಾರ್ ಧ್ವನಿ ನೀಡಲಾಗಿದೆ.
ಕಿಶೋರ್ ಪ್ರೊಡಕ್ಷನ್‌ನಲ್ಲಿ (Kishore Productions) ಬಂಡವಾಳದಲ್ಲಿ, ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shivarajkumar), ರಾಘವೇಂದ್ರ ರಾಜ್‌ಕುಮಾರ್(Raghavendra Rajkumar), ಪ್ರಿಯಾ ಆನಂದ್, ಶರತ್ ಕುಮಾರ್ (Sharat Kumar), ಶ್ರೀಕಾಂತ್ ಮೆಹಕ್, ಆದಿತ್ಯ ಮೆನನ್, ಮುಕೇಶ್, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ (Chickanna), ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್ ಮತ್ತು ಕೇತನ್ ಕರಂದ್ರೆ ನಟಿಸಿದ್ದಾರೆ.
Puneeth Rajkumar: ಯೆಲ್ಲೋ ಬೋರ್ಡ್ ಡ್ರೈವರ್ಸ್‌ಗಾಗಿ ಅಪ್ಪು ಗಾನ ಬಜಾನ..!undefined
J-ವಿಂಗ್ ಸೆಕ್ಯೂರಿಟಿ ಕಂಪನಿಯ ಮ್ಯಾನೇಜರ್ ಜೇಮ್ಸ್ ಉರ್ಫ್ ಸಂತೋಷ್ ಕುಮಾರ್ (Santhosh Kumar) ಪಾತ್ರದ ಸುತ್ತ ನಡೆಯುವ ಕಥೆ ಇದು. ಸದಾ ಸಂತೋಷದಿಂದ ತಮ್ಮ ಸುತ್ತ ಸಂತೋಷ ಬಯಸುವ ವ್ಯಕ್ತಿ ಇದ್ದಕ್ಕಿದ್ದಂತೆ ಡಾರ್ಕ್ ಮಾರ್ಕೆಟ್ ಪ್ರವೇಶಿಸಿ, ಕ್ರೈಂ ಸಿಂಡಿಕೇಟ್‌ನಲ್ಲಿರುವ ಅತಿ ದೊಡ್ಡ ಪವರ್ ಬ್ರೋಕರ್ ಮತ್ತು ಉದ್ಯಮಿಗಳನ್ನು ಭೇಟಿ ಮಾಡುತ್ತಾನೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು ಡ್ರಾಮಾ, ಭಾವನೆ ಮತ್ತು ದೇಶ ಭಕ್ತಿಯನ್ನು ಅದ್ಭುತವಾಗಿ ಚಿತ್ರಿಸಿದಂತೆ ತೋರುತ್ತದೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಅಪ್ಪು ಸಿನಿಮಾ ಅಂದ್ಮೇಲೆ ಎನ್ನೂ ಡ್ಯಾನ್ಸ್ ಮತ್ತು ಫೈಟ್ ನೋಡಲು ತುದಿಗಾಲಿನಲ್ಲಿ ಕಾಯುತ್ತಾರೆ ಮಂದಿ. ಸ್ಟಂಟ್ ಮಾಸ್ಟರ್ ರವಿ ವರ್ಮಾ (Master Ravi Varma), ರಾಮ್ ಲಕ್ಷ್ಮಣ್, ಚೇತನ್ ಡಿ ಸೋಜಾ, ಅರ್ಜುನ್ ಮಾಸ್ಟರ್ ಮತ್ತು ವಿಜಯ್ ಮಾಸ್ಟರ್ ಕೈ ಚಳಕವಿದೆ. ಇನ್ನೂ ಪವರ್ ನೃತ್ಯಕ್ಕೆ ಎ.ಹರ್ಷ, ಶೇಖರ್ ಮಾಸ್ಟರ್ ಮತ್ತು ಮೋಹನ್ ಭುವನ್ ನಿರ್ದೇಶನ ಮಾಡಿದ್ದಾರೆ.
ಇನ್ನೂ ಜೇಮ್ಸ್ ಸಿನಿಮಾವನ್ನು ಹೋಸಪೇಟೆ, ಗೋವಾ (Goa), ಹೈದರಾಬಾದ್ (Hyderabd) ಮತ್ತು ಕಾಶ್ಮೀರದಲ್ಲಿ (Kashmir) ಚಿತ್ರೀಕರಿಸಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಜೇಮ್ಸ್ ಸಿನಿಮಾ ಮಾರ್ಚ್ 17ರಂದು ಬಿಡುಗಡೆ ಆಗುತ್ತಿದೆ. ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಸಖತ್ ಪವರ್ ಫುಲ್ ಡೈಲಾಗ್ ಇದ್ದು ಸಿನಿ ರಸಿಕರ ಗಮನ ಸೆಳೆದಿದೆ.
Puneeth Rajkumar ಇಷ್ಟಪಟ್ಟಿದ್ದ 'ಫ್ಯಾಮಿಲಿ ಪ್ಯಾಕ್' ಚಿತ್ರದ ಟ್ರೇಲರ್ ರಿಲೀಸ್!'ವಿಶ್ವದಲ್ಲಿ ಮೂರು ರೀತಿ ಮಾರ್ಕೆಟ್‌ಗಳಿವೆ. ಒಂದು ಒಪನ್ ಮಾರ್ಕೆಟ್, ಡೀಪ್ ಮಾರ್ಕೆಟ್ ಮತ್ತೊಂದು ಡಾರ್ಕ್ ಮಾರ್ಕೆಟ್.ಇದೊಂದು ವರ್ಲ್ಡ್ ಮಾಫಿಯಾ.' 'ನೂರು ಜನ ಗನ್ ಹಿಡ್ಕೊಂಡಿರುವ ವೇಸ್ಟ್ ಬಾಡಿಗಳಿಗಿಂತ ಒಬ್ಬ ಗನ್ ತರ ಇರುವ ವ್ಯಕ್ತಿಯನ್ನು ಹುಡ್ಕೊಡಿ. ಎದೆ ಕೊಟ್ಟು ಕಾಪಾಡುವುದಕ್ಕೆ ಗೊತ್ತಿರಬೇಕು, ಎದುರಾಳಿ ಎದೆಗೆ ಬುಲೆಟ್ ನುಗ್ಸೋಕು ಗೊತ್ತಿರಬೇಕು.'
ಟೀಸರ್‌ನಲ್ಲಿ ಅಪ್ಪುನ ಸಖತ್ ಕ್ಲಾಸ್ ಹಾಗೂ ಮಾಸ್ ಆಗಿ ತೋರಿಸಲಾಗಿದೆ. ಅದರಲ್ಲೂ ಮೂರು ಕುದುರೆಗಳ ಸಮಕ್ಕೆ ಅಪ್ಪು ಓಡಿರುವುದು ಎಲ್ಲರ ಗಮನ ಸೆಳೆದಿದೆ. 'ನನ್ನ ಜೊತೆ ಕಾಂಪೀಟ್ ಮಾಡಿರುವ ಯಾರೂ ಇದುವರೆಗೆ ಗೆದ್ದಿರುವ ರೆಕಾರ್ಡ್ ಬ್ರೇಕ್ ಮಾಡಿಲ್ಲ,' ಎಂದು ವಿಲನ್ ಡೈಲಾಗ್ ಹೇಳಿದಾಗ. ಶಿವರಾಜ್‌ಕುಮಾರ್ ಧ್ವನಿಯಲ್ಲಿ 'ನನಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ' ಎಂದು ಹೇಳಿರುವುದು ಕೇಳಬಹುದು. ಆಗ ಹೆಲಿಕಾಫ್ಟರ್ ಮತ್ತು ಕಾರಗಳ ನಡುವೆ ಪುನೀತ್ ರಾಜ್‌ಕುಮಾರ್ ಸ್ಟೈಲಿಷ್ ಆಗಿ ನಡೆದುಕೊಂಡು ಬಂದಿದ್ದಾರೆ.