Latest Videos

ಹೀರೋಯಿನ್‌ಗಳ ಜೊತೆ ಸಂಸಾರ ಮಾಡೋಕೆ ಆಗಲ್ಲ ನನ್ನವಳು ಹಳ್ಳಿ ಹುಡುಗಿ ಹೊಂದಿಕೊಳ್ಳುತ್ತಾರೆ: ಒಳ್ಳೆ ಹುಡುಗ ಪ್ರಥಮ್

By Vaishnavi ChandrashekarFirst Published Jul 19, 2023, 12:22 PM IST
Highlights

ಯಾಕೆ ಪಕ್ಕಾ ಹಳ್ಳಿ ಹುಡುಗಿಯನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿರುವುದು ಎಂದು ವಿವರಿಸಿದ ಪ್ರಥಮ್. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.... 
 

ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ಬಿಗ್ ಬಾಸ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿಶ್ಚಿತಾರ್ಥ ಆಗಿದೆ ಎಂದು ಉಂಗುರದ ಫೋಟೋ ಮಾತ್ರ ಅಪ್ಲೋಡ್ ಮಾಡಿದ ಪ್ರಥಮ್ ಯಾಕೆ ಹುಡುಗಿ ಮುಖ ರಿವೀಲ್ ಮಾಡುತ್ತಿಲ್ಲ ಎಂದು ಈಗಾಗಲೆ ಹಲವು ಸಂದರ್ಶನದಲ್ಲಿ ಹೇಳಿದ್ದಾರೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋ ವೈರಲ್ ಆಯ್ತು, ಹೀಗಾಗಿ ಭಾವಿ ಪತ್ನಿ ಕ್ಯಾಮೆರಾದಿಂದ ದೂರ ಉಳಿಯಲು ಕಾರಣವೇನು? ಹಳ್ಳಿ ಹುಡುಗಿನೇ ಆಯ್ಕೆ ಮಾಡಿಕೊಂಡಿರುವುದು ಯಾಕೆಂದು ಹಂಚಿಕೊಂಡಿದ್ದಾರೆ. 

'ನನ್ನ ನಿಶ್ಚಿತಾರ್ಥವನ್ನು ಸೀಕ್ರೆಟ್ ಆಗಿಡುವುದಕ್ಕೆ ಕಾರಣ ಇಷ್ಟೆ..ಪ್ರಪಂಚದಲ್ಲಿ ಎಲ್ಲರೂ ಮದುವೆಯಾಗುತ್ತಾರೆ ಜೀವನ ಮಾಡುತ್ತಾರೆ ಬಾಳಿ ಬದುಕಿ ತೋರಿಸುತ್ತಾರೆ ನಾವು ಏನ್ ಸ್ಪೆಷಲ್ ಅಲ್ಲ ಈ ವಿಚಾರ ಮೊದಲು ಸೆಲೆಬ್ರಿಟಿಗಳ ತಲೆಗೆ ಹೋಗಬೇಕು. ಈಗ ಮತ್ತೊಂದು ಮಾಡುತ್ತಾರೆ ಯಾವುದಾರೂ ಒಂದು ಹೆಣ್ಣು ಮಗು ಪ್ರೆಗ್ನೆಂಟ್ ಆದ ತಕ್ಷಣ ಹೊಟ್ಟೆಗೆ ಜೂಮ್ ಹಾಕಿ ತೋರಿಸುತ್ತಾರೆ...ಈ ಪ್ರಪಂಚದಲ್ಲಿ ಯಾರೂ ಹುಟ್ಟಿಸದೇ ಇರುವ ಮಗುವನ್ನು ನಾನು ಹುಟ್ಟಿಸಿದರೆ ಆ ಕ್ರೆಡಿಟ್‌ ತೆಗೆದುಕೊಳ್ಳುವುದರಲ್ಲಿ ಅರ್ಥವಿದೆ ನಾನು ಏನಾದರೂ ಹುಲಿ ಸಿಂಹ ಹುಟ್ಟಿಸಿದರೆ ಆಗ ನೋಡ್ರಪ್ಪ 40 ಕೋಟಿ ಜನಸಂಖ್ಯೆಯಲ್ಲಿ ಹುಲಿ ಹುಟ್ಟಿಸಿರುವೆ ಎಂದು ತೋರಿಸುವೆ. ಈ ಮಾತಿನ ಅರ್ಥ ಏನೆಂದರೆ ನಾವು ಕೂಡ ಎಲ್ಲರಂತೆ ಸಾಮಾನ್ಯರು ನಮಗೆ ಆ ಕೊಂಬು ಬರುವುದು ಬೇಡ..ಆದರೂ ನಾನೊಂದು ಪೋಸ್ಟ್‌ ಹಾಕಿರುವೆ ಯಾಕೆ ಅಂದ್ರೆ ನಮ್ಮ ಆಪ್ತರು ನಮ್ಮ ಜನರಿಗೆ ನೋಡಪ್ಪ ನನ್ನ ಜೀವನದ ಪ್ರಮುಖವಾದ ಘಟ ಇದು ಎಂದು ತಿಳಿಸುತ್ತಿರುವೆ. ಇದುವರೆಗೂ ನಾನು ಒಂದು ಪೋಸ್ಟ್‌ ಕೂಡ ಹಾಕಿಲ್ಲ ಅಲ್ಲಿಗೆ ಬಂದವರು ಕ್ಲಿಕ್ ಮಾಡಿ ಹಾಕಿರುವುದು' ಎಂದು ಪ್ರಥಮ್ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಒಳ್ಳೆ ಗಂಡನಾಗ್ತೀನಿ, ಆದರೆ ಸಿನಿಮಾ ವಿಚಾರಕ್ಕೆ ತಲೆ ಹಾಕಬಾರದು; ಭಾವಿ ಪತ್ನಿಗೆ ಪ್ರಥಮ್ ರಿಕ್ವೆಸ್ಟ್!

'ನನ್ನ ಮದುವೆ ಆಗುವ ಹುಡುಗಿ ಹೇಳಿದರು ನೋಡಿ ನಾನು ಖುಷಿಯಾಗಿರಬೇಕು ಕಾಮಿಡಿ ಕಂಟೆಂಟ್‌ ನೋಡಿ ಅಥವಾ ವಿಚಿತ್ರವಾಗಿರುವ ರೀಲ್ಸ್‌ ನೋಡಿ ನಗಬೇಕಿಲ್ಲ ನನ್ನ ಸುತ್ತ ಇರುವ ಸಂತೋಷವನ್ನು ಹುಡುಕಿಕೊಂಡಿರುವೆ ನನಗೆ ಎಕ್ಸಟ್ರ ಏನೋ ಬೇಡ ಎಂದಿದ್ದರು ಅದಿಕ್ಕೆ ಅದನ್ನು ಫಾಲೋ ಮಾಡಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ಪತ್ನಿ ಕ್ಯಾಮೆರಾ ಮುಂದೆ ಬರುವುದಿಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪತ್ನಿ ಕ್ಯಾಮೆರಾ ಎದುರು ಬರುವುದಿಲ್ಲ ಹಾಗೆ ನನ್ನ ಪತ್ನಿ ಕೂಡ ಬರುವುದಿಲ್ಲ. ಯಾಕೆ ಈ ದೃಷ್ಟಿಯಲ್ಲಿ ಹೇಳುತ್ತಿರುವೆ ಅಂದ್ರೆ ಅವರ ಖುಷಿಯನ್ನು ಹುಡುಕಿಕೊಂಡಿದ್ದಾರೆ ಈ ಸೋಷಿಯಲ್ ಮೀಡಿಯಾದಿಂದ ಹುಡುಕಿಕೊಳ್ಳುವ ಅಗತ್ಯವಿಲ್ಲ' ಎಂದು ಪ್ರಥಮ್ ಹೇಳಿದ್ದಾರೆ. 

ನನ್ನ ಹುಡ್ಗಿ ಮೊಬೈಲೇ ಬಳಸಲ್ಲ, ಮದ್ವೆ ಆದ್ಮೇಲೆ ಎಲ್ರಿಗೂ ಆಗೋತರ ನಂಗು ಮಗು ಆಗುತ್ತೆ: ಒಳ್ಳೆ ಹುಡುಗ ಪ್ರಥಮ್

'ಮದ್ವೆ ಆದ್ಮೇಲೆ ನಮ್ಮ ಹುಡುಗಿನ ತರಕಾರಿ ಶಾಪಿಂಗ್ ಅಥವಾ ಹೋಟೆಲ್‌ಗೆ ಕರೆದುಕೊಂಡು ಹೋಗಬೇಕು. ಶಾಪಿಂಗ್ ಮಾಲ್‌ಗೆ ಕಾಲಿಟ್ಟರೆ ಬಜೆಟ್ ಜಾಸ್ತಿ ಆಗುತ್ತದೆ ಅದಿಕ್ಕೆ ಎಲ್ಲಾ ಪ್ಲ್ಯಾನ್ ಮಾಡಿ ಮದುವೆ ಹೀಗೆ ಆಗಬೇಕು ಸಂಸಾರ ಹೀಗೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿರುವೆ. ಅಷ್ಟೆ ಅಲ್ಲ ಯಾಕೆ ನಾನು ಹಳ್ಳಿ ಸೊಬಗು ಇರುವ ಹುಡುಗಿಯನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿರುವೆ ಅಂದ್ರೆ ಮನೆಯಲ್ಲಿ ರುಚಿ ರುಚಿಯಾಗಿರುವ ಅಡುಗೆ ಮಾಡುತ್ತೀರಾ ತಿನ್ನುತ್ತೀರಾ ಅದು ಆರೋಗ್ಯಕ್ಕೆ ಒಳ್ಳೆಯದು ಯಾವಗಾದರೂ ಒಂದು ಸಲ ಹೊರಡೆ ತಿನ್ನಬೇಕು ಅನಿಸುತ್ತದೆ ಒಮ್ಮೆ ಓಕೆ ಹಾಗೆನೆ...ನಾವು ನಮ್ಮ ಹಳ್ಳಿ ಸೈಡ್‌ ನಮ್ಮ ಸ್ಟೈಲ್‌ಗೆ ಹೊಂದುವವರನ್ನು ಆಯ್ಕೆ ಮಾಡಿಕೊಂಡಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹೊಂದಿಕೊಳ್ಳುತ್ತಾರೆ. ಸಿನಿಮಾ ಹೀರೋಯಿನ್‌ಗಳು ಚಾಟ್ಸ್‌ ತರ ಸಿಕ್ಕಾಗ ಹಾಯ್ ಹೇಗಿದ್ದೀರಾ ಸಿಕ್ಕಿ ತುಂಬಾ ದಿನ ಆಯ್ತು ಹಿಂಗೆ ಹೇಳುವುದಕ್ಕೆ ಸರಿ ಸಂಸಾರ ಮಾಡುವುದಕ್ಕೆ ಕಷ್ಟ ಆಗುತ್ತದೆ. ಮಿಡಲ್ ಕ್ಲಾಸ್ ಅಲ್ಲ below avaerage ನಲ್ಲಿ ಜೀವನ ನೋಡಿದ್ದೀನಿ ತೀರಾ ಹೈಫೈ ನನಗೆ ಕನೆಕ್ಟ್‌ ಆಗುವುದಿಲ್ಲ' ಎಂದಿದ್ದಾರೆ ಪ್ರಥಮ್.

 

click me!