ಲೇ ಲಡಾಕ್‌ನಲ್ಲಿ ಚಿತ್ರೀಕರಿಸುತ್ತಲೇ ಮಡದಿಗೆ ಸ್ಪೆಷಲ್ ಶಾಪಿಂಗ್ ಮಾಡಿದ ನಿಖಿಲ್!

Published : Apr 16, 2021, 05:00 PM IST
ಲೇ ಲಡಾಕ್‌ನಲ್ಲಿ ಚಿತ್ರೀಕರಿಸುತ್ತಲೇ ಮಡದಿಗೆ ಸ್ಪೆಷಲ್ ಶಾಪಿಂಗ್ ಮಾಡಿದ ನಿಖಿಲ್!

ಸಾರಾಂಶ

ರೈಡರ್ ಸಿನಿಮಾ ಚಿತ್ರೀಕರಣದ ವೇಳೆ ಪತ್ನಿಗೆ ಶಾಪಿಂಗ್ ಮಾಡಿದ ನಿಖಿಲ್. ಫ್ಯಾನ್ ಪೇಜ್‌ಗಳಲ್ಲಿ ಹರಿದಾಡುತ್ತಿದೆ ಯುವರಾಜನ ಶಾಪಿಂಗ್ ಫೋಟೋ.....  

ಬಹು ನಿರೀಕ್ಷಿತ ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮುಖ ಭಾಗ ಇದಾಗಿರುವ ಕಾರಣ ಲೇ ಲಡಾಕ್‌ನಲ್ಲಿ ಸೆರೆ ಹಿಡಿಯಲಾಗುತ್ತಿದೆ. ಕೊರೋನಾ ಸೊಂಕು ಹೆಚ್ಚಾಗುತ್ತಿದೆ, ಲಾಕ್‌ಡೌನ್ ಆಗುವ ಮುನ್ನ ಚಿತ್ರೀಕರಣ ಮುಗಿಸಬೇಕು ಎಂದು ತಂಡ ಬೇಗ ಬೇಗ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದೆ. ಲೇಗೆ ಪ್ರಯಾಣ ಮಾಡುವಾಗಲೂ ನಿಖಿಲ್ ಮುಂಜಾಗೃತ ಕ್ರಮಗಳನ್ನು ಕೈಗೊಂಡು, ತಂಡದ ಜೊತೆ ಪ್ರಯಾಣಿಸಿದ್ದರು. 

ನಿಖಿಲ್ ಕುಮಾರಸ್ವಾಮಿ ಕನ್ನಡ ಪೋಸ್ಟ್: ಕನ್ನಡ ಬರೆಯೋಕೆ ಬರಲ್ವಾ? ಟ್ರೋಲ್! 

ಸುಮಾರು ಮೂರ್ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು, ಬಿಡುವು ಮಾಡಿಕೊಂಡು ಪತ್ನಿಗಾಗಿ ಶಾಪಿಂಗ್ ಮಾಡಿದ್ದಾರೆ. ನಿಖಿಲ್ ಫ್ಯಾನ್ ಪೇಜ್‌ವೊಂದರಲ್ಲಿ ಫೋಟೋ ಶೇರ್ ಮಾಡಿಕೊಂಡು, 'ಬಾಳ ಸಂಗಾತಿ ರೇವತಿಗೆ ಗಿಫ್ಟ್ ಖರೀದಿಸುವಲ್ಲಿ ಬ್ಯುಸಿಯಾಗಿರುವ ನಿಖಿಲ್ ಅಣ್ಣ,' ಎಂದು ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದೆ. 'ಅಣ್ಣ ಗಿಫ್ಟ್ ನೀಡುವಾಗ ಅತ್ತಿಗೆ ಜೊತೆ ಫೋಟೋ ಅಪ್ಲೋಡ್ ಮಾಡಿ,', 'ಅತ್ತಿಗೆ ಜತೆ ಯುಗಾದಿ ಫೋಟೋ ಹಾಕಿಲ್ಲ. ಅದಕ್ಕಾದರೂ ಬೆಂಗಳೂರಿಗೆ ಬಂದ ನಂತರ ಒಂದು ಸೆಲ್ಫೀ ಶೇರ್ ಮಾಡಿ,' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ನಿಖಿಲ್ ಹುಟ್ಟುಹಬ್ಬದ ದಿನ ರೈಡರ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಸಖತ್ ಮಾಸ್‌ ಆಗಿರುವ ಈ ಚಿತ್ರ ನಿಖಿಲ್‌ ಅವರನ್ನು ಡಿಫರೆಟ್ ಶೇಡ್‌ನಲ್ಲಿ ತೋರಿಸಿದ್ದಾರೆ ನಿರ್ದೇಶಕ ವಿಜಯ್ ಕುಮಾರ್. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದ್ದು ಸಿನಿಮಾ ಹಾಡುಗಳು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರೈಡರ್ ರಿಲೀಸ್ ಆಗುತ್ತಿದ್ದು, ನಿಖಿಲ್ ಲುಕ್ ಹೇಗಿರಲಿದೆ ಎಂದು ಇತ್ತೀಚಿಗೆ ಅಪ್ಲೋಡ್ ಮಾಡುತ್ತಿರುವ ಫೋಟೋಗಳಿಂದ ಗೆಸ್ ಮಾಡಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಶ್ ಅಮ್ಮ ಪುಷ್ಪಾ ಮಾತಿಗೆ ಉಗ್ರಾವತಾರ ತಾಳಿದ ಆರ್‌ಜಿವಿ; ಅಲ್ಲು ಅರವಿಂದ್ ಸಪೋರ್ಟ್‌ ಮಾಡಿ ಹೇಳಿದ್ದೇನು?
ನಿಧಿಗಾಗಿ ಹೊರಟ ವಿಷ್ಣುವರ್ಧನ್‌ಗೆ ಸಿಕ್ಕಿದ್ದು ಪುನರ್ಜನ್ಮದ ರಹಸ್ಯ: ಏನಿದು ಸೇಡಿನ ರೋಚಕ ಕಥೆ!