ನಟ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹಾಗಾದರೆ ಈ ವಾರದ ಬಿಗ್‌ಬಾಸ್ ಎಪಿಸೋಡ್ ವೀಕೆಂಡ್ ವಿಥ್ ಕಿಚ್ಚದಲ್ಲಿ ಯಾರಿರಲಿದ್ದಾರೆ?
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ವೈದ್ಯರ ಸಲಹೆಯಿಂದ ಒಂದು ವಾರ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.
'ಹುಷಾರಿಲ್ಲ, ಈ ವೀಕೆಂಡ್‌ನೊಳಗೆ ಚೇತರಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದೆ. ಆದರೆ ನನ್ನ ವೈದ್ಯರ ಸಲಹೆ ಪ್ರಕಾರ ಇನ್ನೂ ಒಂದು ವಾರ ವಿಶ್ರಾಂತಿ ತೆಗೆದು ಕೊಳ್ಳಬೇಕಿದೆ. ಈ ಕಾರಣಕ್ಕೆ ಬಿಗ್ ಬಾಸ್ ಈ ವಾರ ಎಪಿಸೋಡ್‌ನಲ್ಲಿ ನಾನಿರುವುದಿಲ್ಲ. ಬಿಗ್ ಬಾಸ್ ಕ್ರಿಯೇಟಿವ್ ತಂಡ ಈ ವಾರದ ಎಲಿಮಿನೇಷನ್‌ಗೆ ಏನು ಪ್ಲಾನ್ ಮಾಡಿದೆ ಎಂಬ ಬಗ್ಗೆ ನನಗೆ ಕುತೂಹಲವಿದೆ,' ಎಂದು ಸುದೀಪ್ ಟ್ಟೀಟ್ ಮಾಡಿದ್ದಾರೆ.
ಟ್ಟಿಟರ್‌ನಲ್ಲಿ ವಿಕ್ರಾಂತ್ ಬಗ್ಗೆ ಸರ್ಪ್ರೈಸ್ ಸುದ್ದಿ ಕೊಟ್ಟ ಸುದೀಪ್!
ಕೋಟಿಗೊಬ್ಬ 3 ರಿಲೀಸ್ ಕೆಲಸಗಳು, ವಿಕ್ರಾಂತ್ ರೋಣಾ ಸಿನಿಮಾ ಚಿತ್ರೀಕರಣ ಹಾಗೂ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮ ಹೀಗೆ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡುತ್ತಿದ್ದ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಬಳಲಿಕೆಯಿಂದ ಏರುಪೇರು ಆಗಿರಬಹುದು ಎನ್ನಲಾಗಿದೆ. ಕೇವಲ ಎರಡು ಗಂಟೆ ಪ್ರಸಾರವಾಗುವ ಬಿಗ್ ಬಾಸ್ ವೀಕೆಂಡ್ ಎಪಿಸೋಡ್‌ಗೆ ಸುಮಾರು 10 ಗಂಟೆಗಳ ನಾನ್ ಸ್ಟಾಪ್ ಚಿತ್ರೀಕರಣ ಮಾಡಿ ಕೊಡುತ್ತಾರೆ ಸುದೀಪ್.
ಪರಭಾಷೆಯಲ್ಲಿ ದಾಖಲೆಯ ಮೊತ್ತಕ್ಕೆ ಕನ್ನಡ ಕೋಟಿಗೊಬ್ಬ-3 ಹಕ್ಕು ಮಾರಾಟ!
'ನನ್ನ ದೇವರಿಗೆ ಏನು ಪ್ರಾಬ್ಲಮ್ ಅಗಿದೆ ಅಂತ ನನಗೆ ಅರ್ಥ ಅಗಿಲ್ಲ. ಯಾರದರೂ ಪ್ಲೀಸ್ ನನ್ನ ದೇವರಿಗೆ ಏನಾಗಿದೆ ಅಂತ ನನಗೆ ಕನ್ನಡದಲ್ಲಿ ತಿಳಿಸಿಕೋಡಿ', 'Biggbossನಲ್ಲಿ ನಿಮ್ಮನ್ನು ಮಿಸ್ ಮಾಡ್ಕೋತೀವಿ ನಿಜ. ಆದ್ರೆ Biggboss ಮೂವೀಸ್ ಎಲ್ಲದಕ್ಕಿಂತ ನಿಮ್ ಅರೋಗ್ಯ ಮುಖ್ಯ ನಮಗೆ. ಚೆನ್ನಾಗಿ ನಿದ್ರೆ ಮಾಡಿ. ರೆಸ್ಟ್ ತಗೋಳಿ. ಆದಷ್ಟು ಬೇಗ ಹುಷಾರಾಗಿ,' ಎಂದು ಸುದೀಪ್ ಅಭಿಮಾನಿಗಳು ಟ್ಟೀಟ್ ಮಾಡಿದ್ದಾರೆ.
Been unwell n was hoping to recover bfr the weekend. But on my docs advice I need to gv myself a bit more rest n hence Will be missing this weekends episode of BB.
Curious to know the innovative plan which the creative team'll come out with, for this week's elimination. 🤗🤗🥂