ನಟ ನಿಖಿಲ್ ಕುಮಾರಸ್ವಾಮಿ ಗೃಹ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಗಣೇಶ ಹಬ್ಬದ ಶುಭದಿನದಂದು ಭೂಮಿ ಪೂಜೆ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಗೃಹ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಗೌರಿ ಗಣೇಶ ಹಬ್ಬ ಪ್ರಯುಕ್ತ ಭೂಮಿ ಫೂಜೆ ನೆರವೇರಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಅದ್ಧೂರಿ 'ಗೌರಿ ಗಣೇಶ' ಆಚರಣೆ!ಆರ್ಕಿಟೆಕ್ಟ್ ಪದವೀಧರೆ ಆಗಿರುವ ರೇವತಿ ಗೃಹ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಒಂದು ವರ್ಷದೊಳಗೆ ಕೆಲಸ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ಇಬ್ಬರು ಪರಿಸರ ಪ್ರೇಮಿಗಳಾದ ಕಾರಣ ಮನೆ ಪರಿಸರ ಸ್ನೇಹಿಯಾಗಿರಲಿದೆ ಎಂದು ಹೇಳಿದ್ದಾರೆ. ಬೆಂಗಳೂರು ನಿವಾಸದಲ್ಲಿ ಗೌರಿ ಗಣೇಶ ಹಬ್ಬ ಆಚರಿಸಿ ಆನಂತರ ಭೂಮಿ ಫೂಜೆಯಲ್ಲಿ ಭಾಗಿಯಾಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಏನೇ ಮಾಡಿದರೂ ತುಂಬಾನೇ ಡಿಫರೆಂಟ್ ಆಗಿರುತ್ತದೆ ಇದಕ್ಕೆ ಸಾಕ್ಷಿ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಫೋಟೋಗಳು. ಪರಿಸರದ ನಡುವೆ ಹೆಚ್ಚಿನ ಸಮಯ ಕಳೆಯಲು ಇಬ್ಬರೂ ಬಯಸುತ್ತಾರೆ. ಇತ್ತೀಚಿಗೆ ಇಬ್ಬರು ವ್ಯಾಯಾಮ ಹಾಗೂ ಧ್ಯಾನ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದ್ದರು. 'ಕಪಲ್ ಗೋಲ್ಸ್' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.