ದೀಪಾವಳಿ ಹಬ್ಬದಂದು ವಿಶೇಷ ಪೋಟೋ ಹಂಚಿಕೊಂಡ ನಿಖಿಲ್ ಕುಮಾರ್

By Suvarna News  |  First Published Nov 5, 2021, 7:29 PM IST

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಕ್ಯಾಪ್ಷನ್ ಕೊಟ್ಟು ಅವರ ಮುದ್ದು ಮಗುವಿನ ಪುಟ್ಟದಾದ ಕೈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಕುಮಾರ್ ಶೇರ್ ಮಾಡಿಕೊಂಡಿದ್ದಾರೆ. 


ಸ್ಯಾಂಡಲ್‌ವುಡ್‌ನ (Sandalwood) ಯುವರಾಜ ನಟ ನಿಖಿಲ್ ಕುಮಾರಸ್ವಾಮಿ (Nikhil Kumar) ಅವರು  ಬೆಳಕಿನ ಹಬ್ಬ ದೀಪಾವಳಿಯ (Diwali) ಶುಭಾಶಯವನ್ನು ವಿಭಿನ್ನವಾಗಿ ಕೋರಿದ್ದಾರೆ. ಹೌದು! ನಿಖಿಲ್ 'ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಕ್ಯಾಪ್ಷನ್ ಕೊಟ್ಟು ಅವರ ಮುದ್ದು ಮಗುವಿನ ಪುಟ್ಟದಾದ ಕೈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನಿಖಿಲ್, ಪತ್ನಿ ರೇವತಿ ಹಾಗೂ ಅವರ ಮಗ ಈ ಮೂವರು ಕೈ ಇರುವ ಫೋಟೋ ಇದೆ. ಈ ಪೋಸ್ಟ್‌ಗೆ ನಿಖಿಲ್ ಅಭಿಮಾನಿಗಳು ದೀಪಾವಳಿ ಹಬ್ಬದ ಶುಭಾಶಯವನ್ನು ಕಾಮೆಂಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನಿಖಿಲ್ ಕುಮಾರಸ್ವಾಮಿ ತಂದೆಯಾಗಿರುವ ಸಂತೋಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ಇಡೀ ಜಗತ್ತಿಗೆ ಹಂಚಿಕೊಳ್ಳಲು ಸಂತೋಷವಾಗಿದೆ.  ಲವ್ ಯೂ ಮೈ ಸನ್ ಎಂದು ಬರೆದುಕೊಂಡು ಮಗುವನ್ನು ಎತ್ತಿಕೊಂಡಿರುವ ಮುದ್ದಾದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿ ಸಂತೋಷವನ್ನು ವ್ಯಕ್ತಪಡಿಸಿದ್ದರು. ಕೋವಿಡ್ ವೈರಸ್ ಹಾವಳಿ ಮೊದಲ ಲಾಕ್‌ಡೌನ್‌ ಏಪ್ರಿಲ್ 17,2020ರಲ್ಲಿ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಆರಂಭದಿಂದಲೂ ಸೆಲೆಬ್ರಿಟಿ ಕಪಲ್‌ಗಳು. ಮದುವೆಗೂ ಮುನ್ನ ನಿಖಿಲ್ ಪತ್ನಿ ಜೊತೆ ಹಂಚಿಕೊಳ್ಳುತ್ತಿದ್ದ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದವು. 

Tap to resize

Latest Videos

ಮರಿ ಮೊಮ್ಮಗನ ಎತ್ತಿ ಮುದ್ದಾಡಿದ ಮುತ್ತಾತ...ಸಂತಸಕ್ಕೆ ಪಾರವೇ ಇಲ್ಲ!

ಇನ್ನು ನಿಖಿಲ್  'ರೈಡರ್' (Rider)ಚಿತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ (Teaser), ಪೋಸ್ಟರ್ ಲುಕ್‌  (First Look) ಹಾಗೂ ಹಾಡುಗಳಿಗೆ ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.  'ರೈಡರ್' ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕುಮಾರ್ ಕೊಂಡ (Vijay Kumar Konda) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ (Kashmira Pardeshi) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ (Anusha Rai) ಅಭಿನಯಿಸಿದ್ದಾರೆ. ಚಿತ್ರಕ್ಕೆ ಲಹರಿ ಮ್ಯೂಸಿಕ್ ಹಾಗೂ ಟಿ-ಸಿರೀಸ್ ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗೀತ ನೀಡಿದ್ದಾರೆ. 

ರೈಡರ್‌ನ ರೊಮ್ಯಾಂಟಿಕ್ ಸಾಂಗ್ ರಿಲೀಸ್..!

'ರೈಡರ್'​ ಆ್ಯಕ್ಷನ್​ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ (Teaser) ಹಾಗೂ  ಪೋಸ್ಟರ್ ಲುಕ್‌ನ  (First Look)ಮೂಲಕ ವೀಕ್ಷಕರ ಗಮನ ಸೆಳೆಯುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಕೆ.ಎಮ್.ಪ್ರಕಾಶ್ ಸಂಕಲನ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ದತ್ತಣ್ಣ, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಈ ಹಿಂದೆ ಚಿತ್ರದ 'ಡವ್ವ ಡವ್ವ' ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಸಂಗೀತ ಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. ಚೇತನ್ ಕುಮಾರ್ ಸಾಹಿತ್ಯವಿರುವ ಈ ಹಾಡನ್ನು ಅರ್ಮಾನ್ ಮಲಿಕ್ (Armaan Malik) ಹಾಡಿದ್ದರು. ನಿಖಿಲ್ ಸ್ಟೈಲಿಶ್​ ಲುಕ್​ನಲ್ಲಿ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಈ ಹಾಡಿಗೆ ಬೊಂಬಾಟ್ ಸ್ಟೆಪ್ಸ್‌ ಹಾಕಿದ್ದರು.
 

click me!