ಸಂಪಿಗೆ ರಸ್ತೆಯಲ್ಲಿ ನಟ ನಾಗೇಶ್ ಮಯ್ಯ ಭೀಕರ ರಸ್ತೆ ಅಪಘಾತ; ಸಂಪೂರ್ಣ ಘಟನೆ ಬಿಚ್ಚಿಟ್ಟ ನಟ

By Vaishnavi ChandrashekarFirst Published Mar 24, 2023, 5:32 PM IST
Highlights

ಹಲವು ವರ್ಷಗಳ ಹಿಂದೆ ನಡೆದ ರಸ್ಥೆ ಅಪಘಾತದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡ ಕಲಾವಿದ ನಾಗೇಶ್ ಮಯ್ಯ. ಬಿಸಿ ಪಾಟೀಲ್ ಸಹಾಯ ಮರೆತಿಲ್ಲ....
 

ಕನ್ನಡ ಚಿತ್ರರಂಗ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟ ನಾಗೇಶ್ ಮಯ್ಯ ಅವರ ಜೀವನದಲ್ಲಿ ಒಂದು ದಿನ ಮರೆಯಲಾಗದ ಘಟನೆ ನಡೆಯುತ್ತದೆ. ಅದುವೇ ಸಂಪಿಗೆ ರಸ್ತೆ ಆಕ್ಸಿಡೆಂಟ್. ಬೈಕ್‌ ಮತ್ತು ಮೆಟಡೋರ್‌ ನಡುವೆ ಆಗುವ ಅಪಘಾತದಿಂದ ಒಂದು ವರ್ಷ ಸಿನಿಮಾ ಅವಕಾಶವಿಲ್ಲ ಸುಮ್ಮನಿರುವ ಪರಿಸ್ಥಿತಿ ಎದುರಾಗುತ್ತದೆ....

'ರಾತ್ರಿ 11 ಗಂಟೆ ಸಮಯಕ್ಕೆ ಸಂಪಿಗೆ ರಸ್ತೆಯಲ್ಲಿ ಅಪಘಾತವಾಗುತ್ತದೆ. ಆಗಿನ ಕಾಲದಲ್ಲಿ ಸಿನಿಮಾ ಮುಹೂರ್ತ ನಾಳೆ ಅಂದ್ರೆ ಲಾಡ್ಜ್‌ನಲ್ಲಿ ರೂಮ್ ಹಾಕಿರುತ್ತಾರೆ ಅದರಲ್ಲಿ ಸಿನಿಮಾ ಕೆಲಸಗಳು ಶೆಡ್ಯೂಲ್‌ ಬಗ್ಗೆ ಹಾಕಿರುತ್ತಿದ್ದರು. ಪ್ರೊಡಕ್ಷನ್‌ ಆಫೀಸ್‌ ಅಲ್ಲ ಆದರೆ ಒಂದು ರೂಮ್ ರೀತಿ ಇರುತ್ತಿತ್ತು. ಮಾರನೇ ದಿನ ಮುಹೂರ್ತ ದಿನ ಕಾರಣ ಅವತ್ತು ರಾತ್ರಿ ಅಲ್ಲಿ ಲೇಟ್ ಅಗಿ ಕೆಲಸ ಮುಗಿಯಿತ್ತು. ಆಗ ನಾನು ಬ್ಯಾಚುಲರ್ ಆಗಿದ್ದ ಕಾರಣ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಹೋಗಬೇಕಿತ್ತು. ನನ್ನ ಬಳಿ ಇದ್ದ ರೂಡ್‌ ಕಿಂಗ್ ಬೈಕ್‌ ನನ್ನ ಸಾರ್ಥಿಯಾಗಿತ್ತು. ರಾತ್ರಿ ರಸ್ತೆ ಕಾಲಿ ಇದ್ದ ಕಾರಣ ವೇಗವಾಗಿ ಚಲಿಸುತ್ತಿದ್ದೆ..ಸಂಪಿಗೆ ರಸ್ತೆಯಲ್ಲಿರುವ ಗಣೇಶ್ ಲಾಡ್ಜ್‌ನ ಮುಂದೆ ಸಾಗುವಾಗ ಮತ್ತೊಂದು ರಸ್ತೆಯಿಂದ ಮೆಟಡೋರ್‌ ಬಂತ್ತು. ಎರಡೂ ಗಾಡಿ ತುಂಬಾ ವೇಗವಾಗಿತ್ತು ಅಗ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದೆ ಪೆಟ್ಟು ಆಗಬಾರದು ಎನ್ನುವ ಕಾರಣಕ್ಕೆ ಗಾಡಿಯಿಂದ ಮೇಲೆ ಜಂಪಲ್ ಮಾಡಿದೆ' ಎಂದು ನಟ ರಘುರಾಮ್ ಯುಟ್ಯೂಬ್ ಸಂದರ್ಶನದಲ್ಲಿ ನಾಗೇಶ್ ಮಾತನಾಡಿದ್ದಾರೆ.

ತಿನ್ಸ್‌ಬೇಕು, ಕುಡ್ಸ್ಬೇಕು ಒಂದಷ್ಟು ಮಜಾ ಮಾಡ್ಸ್ಬೇಕು, ಚಿತ್ರರಂಗದಲ್ಲಿ ಬಕೆಟ್ ಹಿಡಿಬೇಕು: ಮಯೂರ್ ಪಟೇಲ್

'ಗಾಡಿ ಮೆಟಡೋರ್‌ಗೆ ಹಿಟ್ ಆಯ್ತು ಆದರೆ ನಾನು ಜಂಪ್‌ ಮಾಡಿದೆ ಆದರೆ ನಾನು ಪುಟ್‌ಪಾತ್‌ ಮೇಲೆ ಬಿದ್ದೆ ಆಗ ಆ ಕಲ್ಲು ತಲೆಗೆ ತಾಗಿತ್ತು. ಕೂದಲು ಹೋಗುತ್ತದೆ ಎಂದು ಆಗ ಹೆಲ್ಮೆಟ್ ಹಾಕುತ್ತಿರಲಿಲ್ಲ..ಸ್ವಿಮಿಂಗ್ ಪೂಲ್‌ ರೀತಿ ಡೈವ್ ಹಾಕಿದ ಕಾರಣ ತಲೆ ಮುಂದಿನ ಭಾಗ ಫುಲ್ ಓಪನ್ ಅಯ್ತು. ನೇರವಾಗಿ ಹಿಟ್ ಆಗಿದ್ದರೆ ಮೆಟಡೂರ್‌ ನಿಲ್ಲಿಸುತ್ತಿದ್ದ ಅಂದುಕೊಳ್ಳುವೆ ಆದರೆ ಗಾಡಿಗೆ ಎನ್ನುವ ಕಾರಣ ಹೋಗಿಬಿಟ್ಟ. ನನ್ನ ಪುಣ್ಯಕ್ಕೆ ನಾನು ಎದ್ದು ಗಾಡಿ ಸ್ಟಾರ್ಟ್‌ ಮಾಡಿದೆ ಏನಾಗುತ್ತಿದೆ ಎಂದು ಸಂಪೂರ್ಣವಾಗಿ ಗೊತ್ತಿತ್ತು. ಮತ್ತಿಕರೆಯಲ್ಲಿ ಮನೆ ಮಾಡಿಕೊಂಡಿದ್ದ ಕಾರಣ ಅಲ್ಲಿಗೆ ಹೋಗಿ ಗಾಡಿ ನಿಲ್ಲಿಸಿದೆ ಮೈ ತುಂಬಾ ರಸ್ತೆ ಆಗಿತ್ತು ಕನ್ನಡಿಯಲ್ಲಿ ನೋಡಿದರೆ ಓಪನ್ ಆಗಿ ಬಿಳಿ ಬಿಳಿ ಕಾಣಿಸುತ್ತಿತ್ತು.  ದೇವರ ದಯೇ ತಲೆ ಸುತ್ತು ಏನೂ ಇರಲಿಲ್ಲ' ಎಂದು ನಾಗೇಶ್ ಹೇಳಿದ್ದಾರೆ.

ಮನೆಯಲ್ಲಿ ಅಪ್ಪ ಸರಿಯಾಗಿದ್ದರೆ ಸಿನಿಮಾ ಮಾಡ್ತಿರಲಿಲ್ಲ; ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ ಎಂದ ನಟಿ ಮಾಧುರಿ

'ನಮ್ಮ ಮನೆಯಲ್ಲಿ ಎರಡು ರಸ್ತೆ ಮುಂದೆ ಕಲಾವಿದ ಮೋಹನ್ ಜುನೇಜಾ ವಾಸಿಸುತ್ತಿದ್ದರು ಅವರಿಗೆ ಕರೆ ಮಾಡಿದ ತಕ್ಷಣ ಬಂದ್ರು. ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಎಮ್‌ಎಸ್‌ ರಾಮಯ್ಯ ಆಸ್ಪತ್ರೆಗೆ ಹೋದಾಗ ಇಲ್ಲ ನೀವು ಮತ್ತೊಂದು ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದರು ಅಲ್ಲಿ ಮಲ್ಯ ಆಸ್ಪತ್ರೆಯಲ್ಲಿ  ಅಡ್ಮಿಟ್ ಮಾಡಿಕೊಂಡರು. ಬಿಸಿ ಪಾಟೀಲ್‌ ಅಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದರು ಹೀಗಾಗಿ ಭಯದಿಂದ ಚಿಕಿತ್ಸೆ ಕೊಟ್ಟರು ಮಾರನೇ ದಿನ ವೈದ್ಯರು ಕನ್ನಡಿ ಕೊಟ್ಟು ಮುಖ ನೋಡಿಕೊಳ್ಳಲು ಹೇಳಿದ್ದರು. ಆಗ ಮುಖ ಫುಲ್ ಊದಿಕೊಂಡಿತ್ತು ನನ್ನನ್ನು ನಾನು ನೋಡಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಾವು ಚಿಕಿತ್ಸೆ ಕೊಡ್ತೀವಿ ಎಂದು ಧೈರ್ಯ ಹೇಳಿದರು ತೊಡೆಯಿಂದ ಚರ್ಮ ತೆಗೆದು ಚಿಕಿತ್ಸೆ ಕೊಟ್ಟರು. ಓಪನ್ ಆಗಿತ್ತು ಅಂತ ಮತ್ತೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದರು. ಬಿಸಿ ಪಾಟೀಲ್ ಅವರು ಬಂದು ನಮ್ಮ ಹುಡುಗ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದರು. ಆ ಸಮಯದಲ್ಲಿ ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ ಆದರೆ ಈ ಘಟನೆಯಿಂದ ಒಂದು ವರ್ಷ ಸಿನಿಮಾ ಸಿಗಲಿಲ್ಲ. ಈ ಅವಧಿಯಲ್ಲಿ ಕಿರುತೆರೆಗೆ ಕಾಲಿಟ್ಟಿ' ಎಂದಿದ್ದಾರೆ ನಾಗೇಶ್.  

 

click me!