6 ವರ್ಷದಲ್ಲಿ ಅಮೂಲ್ಯ ಬದಲಾಗಿದ್ದಾರೆ, ನನ್ನ ಹೇರ್‌ಸ್ಟೈಲ್‌ ಡ್ರೆಸ್‌ ಸರಿ ಮಾಡಲ್ಲ: ಪತ್ನಿ ಬಗ್ಗೆ ಜಗದೀಶ್ ಆರೋಪ

Published : Mar 24, 2023, 03:40 PM ISTUpdated : Mar 24, 2023, 03:52 PM IST
6 ವರ್ಷದಲ್ಲಿ ಅಮೂಲ್ಯ ಬದಲಾಗಿದ್ದಾರೆ, ನನ್ನ ಹೇರ್‌ಸ್ಟೈಲ್‌ ಡ್ರೆಸ್‌ ಸರಿ ಮಾಡಲ್ಲ: ಪತ್ನಿ ಬಗ್ಗೆ ಜಗದೀಶ್ ಆರೋಪ

ಸಾರಾಂಶ

ಯುಗಾದಿ ಸಂಭ್ರಮದಲ್ಲಿ ಕಾಣಿಸಿಕೊಂಡ ಅಮೂಲ್ಯ ಮತ್ತು ಜಗದೀಶ್. ತಮ್ಮ ಜೀವನದ ಶುಭಾರಂಭದ ಬಗ್ಗೆ ಮಾತನಾಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಯುಗಾದಿ ಶುಭಾರಂಭ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ಚೆಲುವಿನ ಚಿತ್ತಾರ ಅಮೂಲ್ಯ ಮತ್ತು ಜಗದೀಶ್ ಸ್ಪೆಷಲ್ ಗೆಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಜೀವನ ಹೇಗಿದೆ? ಅವಳಿ ಮಕ್ಕಳನ್ನು ಹೇಗೆ ಕಂಡು ಹಿಡಿಯುತ್ತಾರೆ ಎಂದು ಹಂಚಿಕೊಂಡಿದ್ದಾರೆ. ಇಬ್ಬರೂ ಸೇರಿಕೊಂಡು ಒಬಟ್ಟು ಮಾಡಿದ್ದಾರೆ.

ಮಾಸ್ತಿಗುಡಿ ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಮೂಲ್ಯ ಮತ್ತು ಜಗದೀಶ್ ವೇದಿಕೆ ಮೇಲೆ ಎಂಟ್ರಿ ಕೊಟ್ಟರು. ಆನಂತರ ನಿರೂಪಕ ಅಕುಲ್ ಬಾಲಾಜಿ ತಮ್ಮ ಜೀವನ ಶುಭಾರಂಭದ ಬಗ್ಗೆ ಹೇಳಿ ಎಂದಿದ್ದಾರೆ. 'ಅವಳಿ ಮಕ್ಕಳ ಎಂಟ್ರಿಯಿಂದ ನಮ್ಮ ಜೀವನದಲ್ಲಿ ಶುಭಾರಂಭವಾಗಿದೆ. ಮಕ್ಕಳು ಚೆನ್ನಾಗಿದ್ದಾರೆ. ಒಬ್ಬ ಅಥರ್ವ್‌ ಮತ್ತೊಬ್ಬ ಆಧವ್ ಎಂದು. ಅವರು ಅವಳಿ ಆಗಿದ್ದರೂ ನೋಡಲು ಡಿಫರೆಂಟ್ ಅಗಿದ್ದಾರೆ ಒಂದೇ ರೀತಿ ಇಲ್ಲ. ಹೀಗಾಗಿ ಸುಲಭವಾಗಿ ಕಂಡು ಹಿಡಿಯಬಹುದು' ಎಂದು  ಅಮೂಲ್ಯ ಮಾತನಾಡಿದ್ದಾರೆ.

ಅವಳಿ ಮಕ್ಕಳ ಜೊತೆ ಅದ್ಧೂರಿಯಾಗಿ ಯುಗಾದಿ ಆಚರಿಸಿದ ಅಮೂಲ್ಯ; ಏನೇ ಇರ್ಲಿ ಹೆಣ್ಮಕ್ಕಳಿಗೆ ಸೀರೆ ಮೇಲೇ ಕಣ್ಣು!!

'ಜೀವನ ತುಂಬಾ ಚೆನ್ನಾಗಿ ಆದರೆ 100% ಪ್ರೈವಸಿ ಹೋಗಿದೆ. ಒಂದು ವರ್ಷದಿಂದ ತಾಯಿ ಮನೆಯಲ್ಲಿದ್ದರು. ಒಂದು ವಾರ ಆಯ್ತು ಅಷ್ಟೆ ನಮ್ಮ ಮನೆಗೆ ಬಂದು. ಮನೆಯಲ್ಲಿ ನನಗೆ ಸ್ಪೇಸ್‌ ಸಿಗುತ್ತಿಲ್ಲ. ಅಮೂಲ್ಯಗೆ ಕ್ರಿಡಿಟ್‌ ಕೊಡಬೇಕು ಏಕೆಂದರೆ ಮಕ್ಕಳ ಜೀವನದಲ್ಲಿ ಒಳ್ಳೆ ಮೆಮೋರಿಗಳನ್ನು ಕ್ರಿಯೇಟ್ ಮಾಡಿದ್ದಾರೆ, ಪ್ರತಿ ತಿಂಗಳು ತಪ್ಪದೆ ಫೋಟೋ ಕ್ಲಿಕ್ ಮಾಡಿಸಿದ್ದಾರೆ'  ಎಂದು ಜಗದೀಶದ ದೂರು ಹೇಳಿದ್ದಾರೆ.

'ಅಮೂಲ್ಯ ಅವರ ಬಗ್ಗೆ ನನಗೆ ಒಂದು ಕಂಪ್ಲೇಂಟ್‌ ಇದೆ. 6 ವರ್ಷಗಳ ಹಿಂದೆ ಅಕುಲ್ ಬಾಲಾಜಿ ಅವರ ಶೋನಲ್ಲಿ ಭಾಗಿಯಾಗಿದ್ದೆ ಆಗ ನನ್ನ ಹೇರ್‌ಸ್ಟೈಲ್ ಸರಿ ಮಾಡುತ್ತಿದ್ದರು ನನ್ನ ಡ್ರೆಸ್ ಸರಿ ಮಾಡುತ್ತಿದ್ದರು ಈಗ ಏನೂ ಮಾಡುತ್ತಿಲ್ಲ. 6 ವರ್ಷಗಳ ಹಿಂದೆ ಮಾಡುತ್ತಿದ್ದೆ ಈಗ ಯಾಕೆ ಮಾಡುತ್ತಿಲ್ಲ ಎಂದು ರೇಗಿಸಿದಕ್ಕೆ ಈಗ ನನಗೆ ಮಕ್ಕಳ ಬಗ್ಗೆ ಮಾತ್ರ ಯೋಚನೆ ಇರುವುದು' ಎಂದ್ರು ಜಗದೀಶ್ ದೂರು ಹೇಳಿದ್ದಾರೆ.  ಹೀಗಾಗಿ ಅಮೂಲ್ಯ ಬಗ್ಗೆ ಜಗ್ಗಿಗೆ ಎಷ್ಟು ಗೊತ್ತು ಎಂದು ಟೆಸ್ಟ್‌ ಮಾಡಲು ಅಕುಲ್ ಒಂದಿಷ್ಟು ಪ್ರಶ್ನೆ ಕೇಳಿದ್ದಾರೆ.

ಅಮೂಲ್ಯ ಅವಳಿ ಮಕ್ಕಳಿಗೆ ಬರ್ತಡೇ ಸಂಭ್ರಮ; ಹೃದಯಸ್ಪರ್ಶಿ ಸಾಲು ಹಂಚಿಕೊಂಡ ನಟಿ

ಅಮೂಲ್ಯ ಪುಟ್ಟ ವಯಸ್ಸಿನಲ್ಲಿ ಅಭಿನಯಿಸಿರುವ ಮೂರು ಸಿನಿಮಾಗಳ ಹೆಸರು ಕೇಳಿದ್ದಾರೆ. ಆಗ ಮಹಾರಾಜ, ಕಲ್ಲಲ್ಲಿ ಹೂವಾಗಿ ಎಂದು ಎರಡು ಹೇಳಿ ಮೂರನೇ ಹೆಸರನ್ನು ಗೆಸ್ ಮಾಡಿದ್ದಾರೆ. ಹೀರೋಯಿನ್ ಅಗಿ ನಟಿಸಿರುವ ಮೊದಲ  ಚಿತ್ರ ಯಾವುದು ಎಂದಾಗ ಚೆಲುವಿನ ಚಿತ್ತಾರ ಎಂದಿದ್ದಾರೆ. ಎರಡನೇ ಚಿತ್ರದ ಹೆಸರನ್ನು ಯೋಚನೆ ಮಾಡುತ್ತಿದ್ದರು ಸ್ವಲ್ಪ ಸಮಯದ ನಂತರ ಚೈತ್ರದ ಚಂದ್ರಮ ಎಂದು ಹೇಳಿದ್ದಾರೆ. ಗಜಕೇಸರಿ ಸಿನಿಮಾದಲ್ಲಿ ಅಮೂಲ್ಯ ಪಾತ್ರದ ಹೆಸರು ಏನು ಎಂದು ಪ್ರಶ್ನೆ ಬಂತು..'ಜಗ್ಗಿ ಸಿನಿಮಾ ನೋಡಿದ್ದಾರೆ ಆದರೆ ಹೆಸರು ನೆನಪಿಲ್ಲ. ಮದುವೆ ನಂತರ ಕೂರಿಸಿ ಸಿನಿಮಾ ತೋರಿಸಿಲ್ಲ' ಎಂದು ಅಮೂಲ್ಯ ಹೇಳಿದ್ದಾರೆ. 'ಅಮೂಲ್ಯ ಪಾತ್ರದ ಹೆಸರು ನನಗೆ ನೆನಪಿತ್ತು ಮದ್ವೆ ಆದ್ಮೇಲೆ ಮರೆತಿರುವೆ' ಎಂದು ಜಗದೀಶ್ ಹೇಳುತ್ತಿದ್ದಂತೆ ಟಗರು ಪುಟ್ಟಿ ಎಂದು ಕಿರುತೆರೆ ಕಲಾವಿದರು ಹೇಳಿದ್ದಾರೆ.

ಜಗದೀಶ್ ಮಾತ್ರವಲ್ಲ ನಾನು ದೂರು ಹೇಳುವೆ ಎಂದಿದ್ದಾರೆ ಅಮೂಲ್ಯ. 'ಜಗ್ಗಿ ವಿಡಿಯೋ ಕಾಲ್ ಮಾಡ್ತಾರೆ ಆಗ ಮಗು ತೋರಿಸು ಎಂದು ಹೇಳಿ ಮಗುನ ಮಾತ್ರ ನೋಡುತ್ತಾರೆ ನಾನು ತೋರಿಸುವೆ' ಎಂದು ಅಮೂಲ್ಯ ಹೇಳಿದ್ದಾರೆ. ಅದಕ್ಕೆ ಜಗದೀಶ್ 'ಒಂದೆರಡು ದಿನ ನಾನು ಮಗು ನೋಡಲು ಹೋಗಿರಲಿಲ್ಲ ಮೂರನೇ ದಿನ ಹೋದರೆ ನನ್ನನ್ನು ಕಂಡು ಹಿಡಿಯುತ್ತಿರಲಿಲ್ಲ ಏನು ಹೇಳಿದ್ದರೂ ರಿಯಾಕ್ಟ್‌ ಮಾಡುತ್ತಿರಲಿಲ್ಲ. ಹೀಗಾಗಿ ಪ್ರತಿ ದಿನ ನನ್ನನ್ನ  ನೋಡಬೇಕು ಎಂದು ವಿಡಿಯೋ ಕಾಲ್ ಮಾಡುವುದು ಖಂಡಿತಾ ಅಮೂಲ್ಯ ನನ್ನನ್ನು ಮರೆಯುವುದಿಲ್ಲ ಅದಿಕ್ಕೆ ಕಾಲ್ ಮಾಡಿ ಮಗು ತೋರಿಸು ಎನ್ನುವೆ' ಎಂದು ಜಗದೀಶ್ ಉತ್ತರಿಸಿದ್ದಾರೆ. ಯುಗಾದಿ ಹಬ್ಬ ಎನ್ನುವ ಕಾರಣ ಇಬ್ಬರು ತಮ್ಮ ಒಂದೊಂದು ಕೈ ಬಳಸಿ ಒಬಟ್ಟು ಮಾಡಿ ರುಚಿ ನೋಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ