ಬ್ಯುಸಿ ಜೀವನದಲ್ಲಿ ಪ್ರೀತಿ ಮಾಡಲು ಸಮಯ ಹೇಗೆ ಸಿಕ್ತು? ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಫ್ಯಾಮಿಲಿ ಸಪೋರ್ಟ್ ಎಷ್ಟಿದೆ? ಅಭಿಷೇಕ್ ಅಂಬರೀಶ್ ಮಾತು...
ಬ್ಯಾಡ್ ಮ್ಯಾನರ್ಸ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅಭಿಷೇಕ್ ಅಂಬರೀಶ್ ಲವ್- ಫ್ರೆಂಡ್‌ಶಿಪ್-ಮದುವೆ ಆಂಡ್ ಫ್ಯಾಮಿಲಿ ಬಗ್ಗೆ ಹಂಚಿಕೊಂಡಿದ್ದಾರೆ.
'ನನ್ನ ಎಂಗೇಜ್‌ಮೆಂಟ್‌ನ ಬ್ರೇಕಿಂಗ್ ನ್ಯೂಸ್ ನಾನು ಮಾಡಿಲ್ಲ ಅದೇ ಲೀಕ್ ಅಗಿ ಹೋಯ್ತು. ಪ್ರೈವೇಟ್ ಆಗಿ ಮಾಡಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು. ನನ್ನ ಜೀವನದಲ್ಲಿ ಎಲ್ಲಾ ಪಬ್ಲಿಕ್ ಆಗಿದೆ ಬೆಳಗ್ಗಿನಿಂದ ರಾತ್ರಿವರೆಗೂ ಪಬ್ಲಿಕ್....ಚಿಕ್ಕ ವಯಸ್ಸಿನಿಂದ ಎಲ್ಲಾ ಪಬ್ಲಿಕ್ ಚಡ್ಡಿ ಹಾಕೊಂಡು ಬಂದ್ರೂ ಪಬ್ಲಿಕ್....ಏನೂ ಪ್ರೈವೇಟ್ ಆಗಿಲ್ಲ ನನ್ನ ಜೀವನದಲ್ಲಿ. ಸಾರ್ವಜನಿಕ ಜೀವನ ಹೀಗೆ ಬೇಕು ಎಂದು ನಾನು ಕೇಳಿಕೊಂಡು ಬಂದಿಲ್ಲ ಹುಟ್ಟಿದಾಗಿನಿಂದ ಅದಾಗದೇ ಬಂದಿರುವುದು' ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ಅಭಿ ಮಾತನಾಡಿದ್ದಾರೆ.
ಲವ್ ಹೇಗಾಯ್ತು?
'ಲವ್ ಹೇಗೆ ಆಯ್ತು ಅನ್ನೊದು ಹೇಳಲು ಆಗಲ್ಲ...ಜೀವನದಲ್ಲಿ ಎಲ್ಲವೂ ಬೇಕು ಎಲ್ಲನೂ ಆಗಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಬ್ಯುಸಿಯಾಗಿರುತ್ತಾರೆ ಎಲ್ಲರಿಗೂ ಲವ್ ಆಗಿರುತ್ತದೆ...ಎಲ್ಲದಕ್ಕೂ ಟೈಂ ಬರುತ್ತೆ ಆಗ ಅದಾಗಿ ಅದೇ ಆಗುತ್ತೆ. ಸೆಲೆಬ್ರಿಟಿ ಮಗ ಅಂತ ನಾನು ಮನೆಯಲ್ಲಿ ಕೂರುವುದಕ್ಕೆ ಆಗಲ್ಲ ಎಲ್ಲಾ ಕಡೆ ಓಡಾಡುತ್ತಿರುವೆ. ತುಂಬಾ ಜನರು ಇರುವ ಜಾಗದಲ್ಲಿ ನಾನು ಓಡಾಡಿರುವೆ...ವಿವಿ ಪುರಂ ಫುಡ್ ಸ್ಟ್ರೀಟ್, ಚಿಕ್ಕಪೇಟೆ, ಯುಬಿ ಸಿಟಿ ಮತ್ತು ಲ್ಯಾವೆಲ್ ರಸ್ತೆ..ಎಲ್ಲಾ ಕಡೆ ಭಯವಿಲ್ಲದೆ ನೆಮ್ಮದಿಯಾಗಿ ಓಡಾಡುವ ವ್ಯಕ್ತಿ ನಾನು.
ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ರೊಮ್ಯಾಂಟಿಕ್ ಫೋಟೋ ವೈರಲ್
ಅವಿವಾ ರಿಯಾಕ್ಷನ್?
ನಿಶ್ಚಿತಾರ್ಥ ಆದ ಮೇಲೆ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದಾಗಿರುವ ಕಾರಣ ಅವಿವಾಗೆ ಯಾವ ನಿರೀಕ್ಷೆನೂ ಇಲ್ಲ ಎನ್ನುತ್ತಾರೆ ಅಭಿ. 'ನಮ್ಮನ್ನು ಪ್ರೀತಿಸುವವರು ಯಾವತ್ತಿದ್ದರೂ ನಾವು ಮಾಡಿರುವುದನ್ನು ಪ್ರೀತಿಸುತ್ತಾರೆ.ಹೀಗಾಗಿ ಅವಿವಾ ಯಾವುದಕ್ಕೂ ರಿಯಾಕ್ಷನ್ ಕೊಡುವುದಿಲ್ಲ.ಖಡಕ್ ವಿಮರ್ಶೆ ನನ್ನ ತಾಯಿ ಕೊಡಬಹುದು ಬೇರೆ ಅವರು ಏನೂ ಹೇಳುವುದಿಲ್ಲ. ಅವಿವಾ ನನಗೆ ತುಂಬಾ ಸಪೋರ್ಟ್ ಮಾಡುತ್ತಾಳೆ ಮಾಡಿದ ಎಲ್ಲಾ ಕೆಲಸಗಳನ್ನು ಖುಷಿ ಖುಷಿಯಾಗಿ ನೋಡುತ್ತಾಳೆ. ನನ್ನ ಸ್ನೇಹಿತರು ಎಲ್ಲಾ ಒಳ್ಳೆಯದನ್ನು ಹೇಳುವುದು ಆದರೆ ಮಾಡಿರುವುದನ್ನೆಲ್ಲಾ ಕಳಪೆ ಎಂದು ಹೇಳುವವರೂ ಇದ್ದಾರೆ ಅವರನ್ನು ತುಂಬಾ ಹತ್ತಿರ ಇಟ್ಟುಕೊಂಡಿರುವೆ. ಎಷ್ಟೇ ಸರಿ ಮಾಡಿದ್ದರೂ ತಪ್ಪು ಕಂಡು ಹಿಡಿಯುವವರು ಇದ್ದಾರೆ ಅಂದ್ರೆ ಅಂತವರು ನನಗೆ ಬೇಕು ಅವರನ್ನು ನಾನು ಎದುರಿಸಿದರೆ ನೆಗೆಟಿವ್ ಟ್ರೋಲ್ ಮಾಡುವವರ ಬಗ್ಗೆ ಏನೂ ಅನಿಸುವುದಿಲ್ಲ' ಎಂದು ಅಭಿ ಹೇಳಿದ್ದಾರೆ.
ಸ್ವಿಮ್ ಸೂಟ್ ಬ್ರ್ಯಾಂಡ್ ಒಡತಿ ಅವಿವಾ ಬಿದ್ದಪ್ಪ ಈಗ ಅಭಿಷೇಕ್ ಅಂಬರೀಶ್ ಪತ್ನಿ ಆಗ್ತಿದ್ದಾರೆ?
'ರಿಲೇಷನ್‌ಶಿಪ್ ಅಂದ್ಮೇಲೆ ಕೆಲವೊಂದು ಕಾಮನ್ ಇಂಟ್ರೆಸ್ಟ್‌ಗಳು ಇದ್ದೇ ಇರುತ್ತದೆ. ಒಂದೇ ಗುಣಗಳಿಗಿಂತ ನಮ್ಮ ಡಿಫರೆನ್ಸ್‌ಗಳನ್ನು ಹೆಚ್ಚಿಗೆ ಸೆಲೆಬ್ರೇಟ್ ಮಾಡುತ್ತೀವಿ. ಎಷ್ಟೇ ವ್ಯತ್ಯಾಸವಿದ್ದರೂ ನಮಗೆ ಖುಷಿನೇ. ನನ್ನಂತ ಹುಡುಗನನ್ನು ಮದುವೆ ಮಾಡಿಕೊಳ್ಳುತ್ತಿರುವಾಗ ವಾರಕ್ಕೊಂದು ವಿಚಾರಕ್ಕೆ ಜಗಳ ಆಗುವುದು ತುಂಬಾ ಕಾಮನ್.ಕಪಲ್ ಅಂದ್ಮೇಲೆ ಜಗಳ ಸಹಜ, ಜಗಳ ಮಾಡಿದ್ದರೂ ಬಿಟ್ಟು ಹೋಗದೇ ಇರುತ್ತೀನಿ ಎನ್ನುವವರನ್ನು ಮದುವೆ ಮಾಡಿಕೊಳ್ಳಬೇಕು ಅಂತ ನನ್ನ ತಾಯಿ ಹಾಗೂ ಅವಿವಾ ತಂದೆ-ತಾಯಿ ಹೇಳುತ್ತಾರೆ. ಎರಡು ದಿನ ನನ್ನ ಜೊತೆಗಿದ್ರೆ ನನ್ನ ಗುಣ ಎನೆಂದು ಅರ್ಥ ಮಾಡಿಕೊಳ್ಳಬಹುದು. ನಮ್ಮ ನಡುವೆ ಜಗಳ ನಡೆದರೆ ತಪ್ಪು ಮಾಡಿರುವವರು ಮೊದಲು ಕ್ಷಮೆ ಕೇಳುವುದು...ನಾನು ತಪ್ಪು ಮಾಡಿದರೆ ಅವಿವಾ ಕಾಂಪ್ರಮೈಸ್ ಅಗುತ್ತಾರೆ ಅವರು ತಪ್ಪು ಮಾಡಿದ್ದರೂ ಅವರೇ ಕಾಂಪ್ರಮೈಸ್ ಆಗುತ್ತಾರೆ. ಮನೆಯಲ್ಲಿ ಸಪೋರ್ಟ್ ಚೆನ್ನಾಗಿದ್ದರೆ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಬಹುದು ಅದಕ್ಕೆ ನನ್ನ ತಂದೆ ತಾಯಿನೇ ಸಾಕ್ಷಿ. ಮನೆ ನೋಡಿಕೊಂಡು ಕೆಲಸ ಮತ್ತು ನನ್ನನ್ನು ನೋಡಿಕೊಂಡಿದಕ್ಕೆ ಸಾಧನೆ ಮಾಡಿದ್ದು...ಹೀಗಾಗಿ Behind every successful man there is a great women' ಎಂದಿದ್ದಾರೆ ಅಭಿ.