'ಮಹಾಪ್ರಭುಗಳೇ ನೀವೇನು ಇಲ್ಲಿ' ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ

By Suvarna News  |  First Published May 13, 2020, 9:46 PM IST

ಕನ್ನಡದ ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ/ ಊಟ ಮಾಡಿ ಕುಳಿತಿದ್ದ ಮಧು ಕುಸಿದು ಬಿದ್ದಿದ್ದರು/ ಸೂರ್ಯವಂಶ , ಓಂ ,ಶ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ


ಬೆಂಗಳೂರು(ಮೇ. 13)  ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ನಿಧನರಾಗಿದ್ದಾರೆ.   ಊಟ ಮಾಡಿ ಕುಳಿತಿದ್ದ ಮಧು ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ 

ಸೂರ್ಯವಂಶ , ಓಂ , ಶ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ. ಸೂರ್ಯವಂಶದ ಮಹಾಪ್ರಭು ನೀವೇನು ಇಲ್ಲಿ ಇಂದಿಗೂ ಫೇಮಸ್.   ಪಾಪಿಗಳ ಲೋಕದಲ್ಲಿ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಸಿನಿಮಾದಲ್ಲಿಯೂ ಪಾತ್ರ ನಿರ್ವಹಿಸಿದ್ದರು .

Tap to resize

Latest Videos

undefined

ಬುಲೆಟ್ ಜವಾಬ್ದಾರಿ ನನಗೆ ಬಿಡಿ ಎಂದು ದರ್ಶನ್

ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದು ಮೈಕಲ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಒದ್ದಾಡಿದ್ದರು.   ಗುರುವಾರ ಬೆಳಿಗ್ಗೆ ಕುಟುಂಬದವರಿಗೆ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗುವುದು ಎಂದು ಆಸ್ಪತ್ರೆ ತಿಳಿಸಿದೆ. 

ಕಾಶಿನಾಥ್, ಉಪೇಂದ್ರ, ಕುಮಾರ್ ಗೋವಿಂದ್ ಅವರ ಜತೆ ಸ್ಕೀನ್ ಶೇರ್ ಮಾಡಿಕೊಂಡಿದ್ದ ನಟ ಇನ್ನು ನೆನಪು ಮಾತ್ರ. .

click me!