ದರ್ಶನ್ ಬಗ್ಗೆ ಕೇಳಿದ್ದ ಪ್ರಶ್ನೆಗೂ ಪ್ರಧಾನಿ ಮೋದಿ ಎಳೆದು ತಂದ ನಟ ಕಿಶೋರ್; ಯಾಕ್ ಹಿಂಗೆ ಅಂತಿದಾರೆ!

By Shriram Bhat  |  First Published Jul 15, 2024, 2:20 PM IST

ಮಾಧ್ಯಮ ಒಂದ್ ವ್ಯಾಪಾರ. ಸಿನಿಮಾ ಕೂಡ ಒಂದು ವ್ಯಾಪಾರ. ನಾವ್ ಹೇಳ್ತೀವಿ.. ಸಿನಿಮಾವನ್ನ ಎಂಟರ್‌ಟೈನ್‌ಮೆಂಟ್‌ಗೆ ಅಂತಾನೇ ಮಾಡ್ತೀವಿ. ಆದ್ರೆ, ಅದ್ರ ಒಳ್ಗಡೆ ನಮ್ಮ ಉದ್ದೇಶಗಳನ್ನ ಸಮಸ್ಯೆಗಳನ್ನ, ಜನಪರವಾಗಿರುವ ದನಿಯನ್ನ ಕಳ್ಕೋಬಾರ್ದು..


ಕನ್ನಡದ ನಟ ಕಿಶೋರ್ (Actor Kishore) ಅವರು ಕೊಲೆ ಕೇಸ್ ಆರೋಪಿ ದರ್ಶನ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ತಮ್ಮ ಮೌನ ಮುರಿದಿದ್ದಾರೆ. ಮೌನ ಮುರಿದಿದ್ದಾರೆ ಎಂದರೆ ಆ ಬಗ್ಗೆ ಮಾತನಾಡಿದ್ದಾರೆ ಎಂದಲ್ಲ, ಆ ವಿಷಯದ ಬಗ್ಗೆ ಕೆಲವೊಂದು ಸಂಗತಿ ಹೇಳಿದ್ದಾರೆ. ಅದೇನು ಎಂಬ ಕುತೂಹಲ ನಿಮಗಿದ್ರೆ ಮುಂದೆ ನೋಡಿ.. ಹೌದು, ನಟ ಕಿಶೋರ್ ದರ್ಶನ್ ವಿಚಾರವಾಗಿ 'ನಾನು ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಕಾನೂನು ತಜ್ಞನೂ ಅಲ್ಲ..' ಎಂದು ಮೊಟ್ಟಮೊದಲು ಒಂದು ವಾಕ್ಯದ ಉತ್ತರ ಕೊಟ್ಟಿದ್ದಾರೆ. 

ಬಳಿಕ, ತಮ್ಮ ಕಡೆ ಬಂದ ಪ್ರಶ್ನೆಗೆ ಉತ್ತರಿಸುತ್ತ ನಟ ಕಿಶೋರ್ ಅವರು ' ಗೊತ್ತಿಲ್ಲ, ಅದಕ್ಕೆ ಏನೇನು ಕಾರಣಗಳು ಅಂತ ಗೊತ್ತಿಲ್ಲ. ಅದನ್ನೆಲ್ಲ ಅನಲೈಸ್ ಮಾಡ್ಕೊತ ಕೂತ್ಕೊಳ್ಳೋದಕ್ಕಿಂತ ಬೇಕಾದಷ್ಟು ಜ್ವಲಂತ ಸಮಸ್ಯೆಗಳು ಬೇಕಾದಷ್ಟಿವೆ. ಆ ಬಗ್ಗೆ ಮಾತಾಡೋದು ಬೇಕಾದಷ್ಟಿವೆ ಅಂತ ನಂಗೆ ಅನ್ನಿಸುತ್ತೆ..' ಆ ಕೇಸ್‌ ಬಗ್ಗೆ, ಅದಕ್ಕೆ ಅಂತ ಒಂದ್ ಕಾನೂನು, ವ್ಯವಸ್ಥೆ ಅಂತ ಇದೆ.. ಕಾನೂನು ತನ್ನ ಕೆಲಸ ಮಾಡುತ್ತೆ.. ಇಲ್ಲಿ ನಿಷ್ಪಕ್ಷಪಾತವಾಗಿ ಆ ಕೆಲಸ ನಿರ್ವಹಿಸ್ತಾ ಇದಾರೆ ಅನ್ನೋದು ಕಣ್ಣಿಗೆ ಕಾಣಿಸ್ತಾ ಇದೆ. 

Tap to resize

Latest Videos

ಒಮ್ಮೆ ಅವ್ರು ಮತ್ತೊಂದು ಮದ್ವೆ ಆದ್ರೆ ನಿಮ್ ರಿಯಾಕ್ಷನ್ ಏನಿರ್ಬಹುದು ಅಂದಾಗ ಚಂದನ್ ಶೆಟ್ಟಿ ಏನಂದ್ರು..?

ಹೀಗಾಗಿ ನಾವು ಆ ಬಗ್ಗೆ ಮಾತಾಡ್ದೇ ಇರೋದು ಬೆಟರ್. ನಿರ್ಣಯ ಬರೋವರೆಗೂ ನಾವು ಯಾರ್ ಬಗ್ಗೆನೂ ಒಂದು ಒಪಿನಿಯನ್ ಫಾರ್ಮ್ ಮಾಡ್ಕೊಳ್ಳದೇ ಇರೋದು ಬೆಟರ್.. ಪೊಲೀಸ್ ವ್ಯವಸ್ಥೆ ಇದೆ, ಕೋರ್ಟ್ ವ್ಯವಸ್ಥೆ ಇದೆ.. ಅದನ್ನ ಮಾಡುತ್ತೆ.. ಆದ್ರೆ, ನಾವು ಇವತ್ತು ಮಾತಾಡ್ಬೇಕಾಗಿರುವಂಥ ವಿಷ್ಯಗಳು ಬೇಕಾದಷ್ಟಿವೆ. ಕಣ್ಣಿಗೆ ಕಾಣ್ತಾ ಇರುವಂತೆ ನಮ್ಮೆದುರು ನೀಟ್ ಸಮಸ್ಯೆ ಇದೆ, ರೈತರ ಸಮಸ್ಯೆ ಇದೆ, ನಿರುದ್ಯೋಗ ಸಮಸ್ಯೆ ಇದೆ.. ಇವೆಲ್ಲವೂ ನಮಗೆ ಮುಖ್ಯ ಎನಿಸುತ್ತವೆ. 

ನಮ್ಮ ಕಣ್ಣಿಗೆ ಕಾಣುವ ಹಲವು ಸಮಸ್ಯೆಗಳ ಬಗ್ಗೆಯೂ ನಾವು ಮಾತಾಡ್ಬೇಕಾಗುತ್ತೆ.. ಟಿಆರ್‌ಪಿ ಸಿಗುತ್ತೆ ಅನ್ನೋ ಕಾರಣಕ್ಕೆ ಮಾಧ್ಯಮ ಎವೆಲ್ಲವನ್ನೂ ಎತ್ತಿ ತೋರಿಸ್ಬೇಕಾಗುತ್ತೆ.. ಫೈನ್, ಅದನ್ನೂ ಮಾಡಿ.. ಆದ್ರೆ, ಸೌಜನ್ಯ ಕೇಸ್‌ನಲ್ಲಿ ಮಾಧ್ಯಮ ಯಾಕೆ ಇಷ್ಟು ಸಕ್ರಿಯ ಆಗಿಲ್ಲ..? ಅಲ್ಲೂ ಕೊಲೆ ಆಗಿತ್ತು, ಅಲ್ಲೂ ಅನ್ಯಾಯ ಆಗಿತ್ತಲ್ವ? ಸೋ, ಎಲ್ಲವನ್ನೂ ನಿಷ್ಪಕ್ಷಪಾತವಾಗಿ ನೋಡುವ ಗುಣ ಇವತ್ತು ಮಾಧ್ಯಮ ಬೆಳೆಸಿಕೊಳ್ಳಬೇಕು.. ನಿಜ, ಇವತ್ತು ಮಾಧ್ಯಮ ಒಂದ್ ವ್ಯಾಪಾರ. ಸಿನಿಮಾ ಕೂಡ ಒಂದು ವ್ಯಾಪಾರ. 

ಭಾರತಿ ಬಿಟ್ಟು ಬೇರೆ ಸಹನಟಿ ಒಬ್ರನ್ನು ಮದ್ವೆ ಆಗಿದ್ರಾ ವಿಷ್ಣುವರ್ಧನ್?

ನಾವ್ ಹೇಳ್ತೀವಿ.. ಸಿನಿಮಾವನ್ನ ಎಂಟರ್‌ಟೈನ್‌ಮೆಂಟ್‌ಗೆ ಅಂತಾನೇ ಮಾಡ್ತೀವಿ. ಆದ್ರೆ, ಅದ್ರ ಒಳ್ಗಡೆ ನಮ್ಮ ಉದ್ದೇಶಗಳನ್ನ ಸಮಸ್ಯೆಗಳನ್ನ, ಜನಪರವಾಗಿರುವ ದನಿಯನ್ನ ಕಳ್ಕೋಬಾರ್ದು. ಅದು ಆಗ್ಬೇಕಾಗಿದೆ.. ' ಎಂದಿದ್ದಾರೆ ನಟ ಕಿಶೋರ್. ಕಿಶೋರ್ ಅವರ ಮಾತಿಗೆ ಎಂದಿನಂತೆ ಸಾಕಷ್ಟು ಪರ-ವಿರೋಧ ಕಾಮೆಂಟ್‌ಗಳು ಬಂದಿವೆ. ಒಟ್ಟಿನಲ್ಲಿ, ನಟ ದರ್ಶನ್ ಕೇಸ್‌ ಬಗ್ಗೆ ಈಗ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಕೇಳಲಾದ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

click me!