ಆರು ವರ್ಷದ ಹಿಂದೆ 'ಇದನ್ನು ಓದ್ಬೇಡಿ' ಅಂದಿದ್ರು ಉಪೇಂದ್ರ: ಈಗ ವೈರಲ್ ಆಗಿರೋ ಸೀಕ್ರೆಟ್..!?

Published : Jan 12, 2025, 04:43 PM ISTUpdated : Jan 12, 2025, 04:47 PM IST
ಆರು ವರ್ಷದ ಹಿಂದೆ 'ಇದನ್ನು ಓದ್ಬೇಡಿ' ಅಂದಿದ್ರು ಉಪೇಂದ್ರ: ಈಗ ವೈರಲ್ ಆಗಿರೋ ಸೀಕ್ರೆಟ್..!?

ಸಾರಾಂಶ

ಉಪೇಂದ್ರ ಅವರ ೨೦೧೭ರ 'ಇದನ್ನು ಓದ್ಬೇಡಿ' ಪುಸ್ತಕ ಮತ್ತೆ ಸುದ್ದಿಯಲ್ಲಿದೆ. 'ಯುಐ' ಚಿತ್ರದ ಯಶಸ್ಸಿನಿಂದಾಗಿ ಪುಸ್ತಕದ ಜನಪ್ರಿಯತೆ ಹೆಚ್ಚಿದೆ. ಪುಸ್ತಕದಲ್ಲಿ ಉಪೇಂದ್ರ ಅವರ ಜೀವನ ಚರಿತ್ರೆ, ಪ್ರಜಾಕೀಯದ ಬಗೆಗಿನ ಆಲೋಚನೆಗಳಿವೆ. ಚಿತ್ರದಲ್ಲಿನ ಕೆಲವು ವಿಷಯಗಳು ಪುಸ್ತಕದಲ್ಲೂ ಇರುವುದರಿಂದ ಓದುಗರ ಆಸಕ್ತಿ ಹೆಚ್ಚಿದೆ.

ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ ಉಪೇಂದ್ರ (Real Star Upendra) ಅವರು ಪುಸ್ತಕವೊಂದನ್ನು ಬರೆದಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತು. 'ಇದನ್ನು ಓದ್ಬೇಡಿ' ಹೆಸರಿನ ಪುಸ್ತಕವನ್ನು 21 ನವೆಂಬರ್ 2017 (21 November 2017) ರಂದು ಪಬ್ಲಿಶ್  ಮಾಡಿದ್ದರು ನಟ ಉಪೇಂದ್ರ. ಆಗ ಆ ಪುಸ್ತಕ ಸಾಕಷ್ಟು ಸದ್ದು ಮಾಡಿತ್ತು. ಈಗ ಮತ್ತೆ ಆ ಸಂಗತಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡತೊಡಗಿದೆ. ಅದಕ್ಕೆ ಕಾರಣವೇನು? ಸೋ ಸಿಂಪಲ್.. ಈಗ ಬಿಡುಗಡೆ ಆಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ಯುಐ' ಯಾರಿಗೂ ಅದು ನೆನಪಾಗಿದೆ, ಈ ಸುದ್ದಿ ಹರಡಿದ್ದಾರೆ. 

ಹೌದು, ಉಪೇಂದ್ರ ಅವರು ಆರು ವರ್ಷಗಳ ಮೊದಲು 'ಇದನ್ನು ಓದ್ಬೇಡಿ' ಅನ್ನೋ ಪುಸ್ತಕ ಬರೆದಿದ್ದರು. ಅದರಲ್ಲಿ ಅದೇನಿತ್ತು? ಮೊದಲ ಭಾಗದಲ್ಲಿ ನಟ ಉಪೇಂದ್ರ ಅವರ ಬಾಲ್ಯ, ವಿದ್ಯಾಭ್ಯಾಸ ಹಾಗೂ ಚಿತ್ರರಂಗದ ಸೆಳೆತಗಳ ಬಗ್ಗೆ ಬರೆಯಲಾಗಿತ್ತು. ಬಳಿಕ ಅವರು ಸಿನಿಮಾರಂಗಕ್ಕೆ ಅಸಿಸ್ಟಂಟ್ ಡೈರೆಕ್ಟರ್ ಹಾಗೂ ಬರಹಗಾರರಾಗಿ ಬಂದಿದ್ದು, ಹಾಗೇ ನಿಧಾನವಾಗಿ ಒಂದೊಂದೇ ಹಂತ ಬೆಳೆದು ನಿರ್ದೇಶಕರಾದ ಬಗ್ಗೆ ಬರೆಯಲಾಗಿದೆ. ಆದರೆ ಎರಡನೇ ಭಾಗವನ್ನು ಮತ್ತೊಂದು ಸಂಗತಿಗೆ ಮೀಸಲಾಗಿಟ್ಟಿದ್ದಾರೆ. 

ಹೇಳಲೇಬಾರದ ದೀಪಿಕಾಗೆ ಮೂಡ್ ತರಿಸುವ ಗುಟ್ಟು ಹೇಳಿದ ರಣವೀರ್ ಸಿಂಗ್; ಅದೀಗ ವೈರಲ್!

ಹೌದು, ಎರಡನೇ ಭಾಗದಲ್ಲಿ ಉಪೇಂದ್ರ ಅವರು ತಮ್ಮ ಪ್ರಜಾಕೀಯ ಪಕ್ಷದ ಬಗ್ಗೆ ಬರೆದಿದ್ದಾರೆ. ರಾಜಕೀಯಕ್ಕಿಂತ ಪ್ರಜಾಕೀಯ ಹೇಗೆ ವಿಭಿನ್ನ? ಪ್ರಜಾಕೀಯದ ಮೂಲಕ ನಮ್ಮ ಭಾರತದ ಜನರನ್ನು ಹೇಗೆ ಉದ್ದಾರ ಮಾಡಬಹುದು? ರಾಜಕೀಯ ನಾಯಕರು ದೇಶದ ಜನರಿಗೆ ಮಾಡುತ್ತಿರುವ ಅನ್ಯಾಯ ಹಾಗೂ ಹಾನಿ ಏನು? ಈ ಎಲ್ಲ ವಿಷಯಗಳ ಬಗ್ಗೆ ಸವಿವರವಾಗಿ ನಟ ಉಪೇಂದ್ರ ಅವರು 'ಇದನ್ನು ಓದ್ಬೇಡಿ' ಪುಸ್ತಕದ ಎರಡನೇ ಭಾಗದಲ್ಲಿ ವಿವರಿಸಿದ್ದಾರೆ. ಅಂದರೆ ಇದು ನಟ ಉಪೇಂದ್ರ ಅವರ 'ಜೀವನ ಚರಿತ್ರೆ' ಅಥವಾ ಆಟೋ 'ಬಯಾಗ್ರಫಿ' ಎನ್ನಬಹುದು. 

ಈ ಪುಸ್ತಕದ ನಿರೂಪಣೆ ಕೂಡ ಉಪೇಂದ್ರ ಅವರ ನಿರ್ದೇಶನದ ಸಿನಿಮಾಗಳಂತೆಯೇ ವಿಭಿನ್ನವಾಗಿಯೇ ಇದೆ. ತಮ್ಮದೇ ಆದ ಶೈಲಿಯಲ್ಲಿ, ಸ್ವತಃ ಜನರೆದುರು ಮಾತನಾಡಿದಂತೆ ಈ ಪುಸ್ತಕವನ್ನು ರಿಯಲ್ ಸ್ಟಾರ್ ಬರೆದಿದ್ದಾರೆ. ಈ ಪುಸ್ತಕವನ್ನು ಓದಿ ಹಲವರು ಮೆಚ್ಚಿಕೊಂಡಿದ್ದು ಈಗ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನ್ನಾಡತೊಡಗಿದ್ದಾರೆ. ಕಾರಣ, ಯುಐ ಸಿನಿಮಾ. ಈ ಸಿನಿಮಾದಲ್ಲಿ ಬಂದಿರುವ ಹಲವು ವಿಷಯಗಳು ಈ ಪುಸ್ತಕದಲ್ಲಿ ಕೂಡ ಇದೆ, ಹೀಗಾಗಿ ಈ ಪುಸ್ತಕವನ್ನು ಓದಲೇಬೇಕು ಎನ್ನುತ್ತಿದ್ದಾರೆ. 

ಮೈಯೋಸಿಟಿಸ್ ಮುಗಿಸಿ ಮತ್ತೊಂದು ಮಹಾ ಕಾಯಿಲೆಗೆ ತುತ್ತಾದ ಸಮಂತಾ; ಏನಿದು ಕರ್ಮ?

ಅಂದಹಾಗೆ, ಇನ್ನು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿದ್ದಾರೆ. ಉಪ್ಪಿ ನಟನೆ-ನಿರ್ದೇಶನದ 'ಯುಐ' ಸಿನಿಮಾ ತನ್ನ ವಿಭಿನ್ನತೆಯಿಂದ ಜನಮನ ಸೂರೆಗೊಂಡಿದ್ದು ಈಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ತುಂಬಾ ವರ್ಷಗಳ ಬಳಿಕ ಉಪೇಂದ್ರ ನಟನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಯುಐ ಸಿನಿಮಾ ಜಗತ್ತಿನಾದ್ಯಂತ 2200ಕ್ಕೂ ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡು ಬಹಳಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಾಮಾಜಿಕ ಕಳಕಳಿ ಮೆರೆದಿರುವ ಯುಐ ಸಿನಿಮಾ, ಸದ್ಯ ಟ್ರೆಂಡ್ ಸೆಟ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್