ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!

By Shriram Bhat  |  First Published Jul 9, 2024, 11:38 AM IST

ನನ್ನ ಜೀವನದಲ್ಲಿ ಅವರಿಬ್ಬರೂ ಬೀರಿರುವ ಪ್ರಭಾವ ಅಪಾರ. ಹೀಗಾಗಿ ನಾನು ಅವರಿಬ್ಬರಿಗೆ ಮಾತ್ರವೇ ಬಾಸ್ ಎಂದು ಕರೆಯುತ್ತೇನೆ. ಅದನ್ನು ಸರಿ ಅಥವಾ ತಪ್ಪು ಎಂದು ಯಾರೂ ವಿಶ್ಲೇಷಣೆ ಮಾಡಬೇಕಾಗಿಯೇ ಇಲ್ಲ...


ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಬಗ್ಗೆ ಆಸಕ್ತಿಕರ ಸಂಗತಿಯೊಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದೇನೆಂದರೆ ನಟ ಸುದೀಪ್ ಯಾರನ್ನು ಬಾಸ್ ಎಂದು ಕರೆಯುತ್ತಾರೆ ಎಂಬ ಸಂಗತಿ. ಸಹಜವಾಗಿಯೇ ಇದು ಎಲ್ಲರಲ್ಲೂ ಆಸಕ್ತಿ ಹುಟ್ಟಿಸುವ ಮ್ಯಾಟರ್. ಏಕೆಂದರೆ, ಕನ್ನಡ ಚಿತ್ರಂಗದಲ್ಲಿ ನಟ ದರ್ಶನ್ ಅವರಿಗೆ ಅವರ ಫ್ಯಾನ್ಸ್ 'ಬಾಸ್' ಮತ್ತು 'ಡಿ ಬಾಸ್' ಎಂದು ಕರೆಯುತ್ತಾರೆ. ಅದೇ ರೀತಿ ಸಾಮಾನ್ಯ ಜನರು ಕೂಡ ತಮ್ಮ ತಮ್ಮ ಪ್ರೀತಿಪಾತ್ರರಿಗೆ, ಗೌರವಿಸುವ ಜನರಿಗೆ ಬಾಸ್ ಎಂದು ಕರೆಯುವುದು ವಾಡಿಕೆ. 

ಅದೇ ರೀತಿ ಕಿಚ್ಚ ಸುದೀಪ್ ಯಾರಿಗೆ 'ಬಾಸ್' ಎಂದು ಕರೆಯುತ್ತಾರೆ ಎಂದರೆ, ಅವರೇ ಹೇಳಿರುವಂತೆ, ಸುದೀಪ್ ತಮ್ಮ ತಂದೆಗೆ ಹಾಗೂ ನಟ ವಿಷ್ಣುವರ್ಧನ್ ಅವರಿಗೆ ಮಾತ್ರ ಬಾಸ್ ಎಂದು ಕರೆಯುತ್ತಾರಂತೆ. ಸ್ವತಃ ಸುದೀಪ್ ಹಲವಾರು ಬಾರಿ ವೇದಿಕೆಗಳಲ್ಲೇ ಈ ಮಾತನ್ನು ಹೇಳಿದ್ದಾರೆ. ನಮ್ಮ ತಂದೆಯನ್ನು ನಾನು ತುಂಬಾ ಗೌರವಿಸುತ್ತೇನೆ. ಅವರಿಗೆ ನಾನು ಯಾವತ್ತೂ ನನ್ನ ಬಾಸ್ ಸ್ಥಾನವನ್ನು ಕೊಟ್ಟಿದ್ದೇನೆ. ತಂದೆಯನ್ನು ಬಿಟ್ಟರೆ ನಂಗೆ ವಿಷ್ಣುವರ್ಧನ್ ಅವರನ್ನು ಕಂಡರೆ ತುಂಬಾ ಗೌರವ ಹಾಗೂ ಭಕ್ತಿ. 

Tap to resize

Latest Videos

ಮಾಡದೇ ಇರುವ ಕೊಲೆಗೆ ಜೈಲಿನಲ್ಲಿ ಇದ್ದಾರೆ, ನೋವು ಆಗಲ್ವಾ ಅಂದ್ರು ನಿರ್ಮಾಪಕ ಕೆ ಮಂಜು!

ನನ್ನ ಜೀವನದಲ್ಲಿ ಅವರಿಬ್ಬರೂ ಬೀರಿರುವ ಪ್ರಭಾವ ಅಪಾರ. ಹೀಗಾಗಿ ನಾನು ಅವರಿಬ್ಬರಿಗೆ ಮಾತ್ರವೇ ಬಾಸ್ ಎಂದು ಕರೆಯುತ್ತೇನೆ. ಅದನ್ನು ಸರಿ ಅಥವಾ ತಪ್ಪು ಎಂದು ಯಾರೂ ವಿಶ್ಲೇಷಣೆ ಮಾಡಬೇಕಾಗಿಯೇ ಇಲ್ಲ. ಕಾರಣ, ಅವರವರಿಗೆ ಅವರು ಗೌರವಿಸುವ ವ್ಯಕ್ತಿಗೆ ಹಾಗೆ ಕರೆಯಬೇಕು ಎನ್ನಿಸುತ್ತದೆ. ಆದರೆ, ಪ್ರತಿಯೊಬ್ಬರೂ ಗೌರವಿಸಲು ಬಯಸುವ ವ್ಯಕ್ತಿಗಳು ಬೇರೆಬೇರೆಯೇ ಆಗಿರುತ್ತಾರೆ. ಹೀಗಾಗಿ ಯೂನಿವರ್ಸಲ್ ಆಗಿ ಎಲ್ಲರೂ ಸೇರಿ ಒಬ್ಬರನ್ನು ಬಾಸ್ ಎಂದು ಕರೆಯಲಾಗುವುದಿಲ್ಲ' ಎಂದಿದ್ದಾರೆ ನಟ ಕಿಚ್ಚ ಸುದೀಪ್.

ತಂದೆ-ಮಗಳ ಬಾಂಧವ್ಯಕ್ಕೆ ಕಪ್ಪು ಚುಕ್ಕೆ ಇಟ್ಟ ಯೂಟ್ಯೂಬರ್ ವಿರುದ್ಧ ಕೇಸ್; ಸಾಯಿ ಧರಮ್ ತೇಜ ಗರಂ! 

ಸದ್ಯ ನಟ ಸುದೀಪ್ ಅವರು ಮ್ಯಾಕ್ಸ್ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾ ಪ್ರಚಾರಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮ್ಯಾಕ್ಸ್ ಇದು ಹೈ ಬಜೆಟ್ ಸಿನಿಮಾ ಹಾಗು ಹಲವು ಭಾಷೆಗಳಲ್ಲಿ ಒಟ್ಟಿಗೇ ಬಿಡುಗಡೆ ಕಾಣಲಿರುವ ಸಿನಿಮಾ. ಈ ಸಿನಿಮಾ ಮೂಲಕ ನಟ ಸುದೀಪ್ ಸದ್ಯದಲ್ಲಿಯೇ ತಮ್ಮ ಅಭಿಮಾನಿಗಳಿಗೆ ತೆರೆಯ ಮೇಲೆ ದರ್ಶನ ನೀಡಲಿದ್ದಾರೆ. ಮ್ಯಾಕ್ಸ್ ಟೀಮ್ ಘೋಷಿಸಿರುವ ಡೇಟ್ ಪ್ರಕಾರ್ ಸುದೀಪ್ ನಟನೆಯ ಈ ಚಿತ್ರವು 02 ಆಗಸ್ಟ್ 2024ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣಲಿದೆ. 

ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!

click me!