'ನನ್ನ ಮೂರ್ತಿ ಮಾಡುವುದು ಗೊತ್ತಿದ್ದರೆ ಬೇಡ ಅಂತಿದ್ದೆ':ರಾಯಚೂರಿನಲ್ಲಿ ಕಿಚ್ಚ ಸುದೀಪ್

By Suvarna News  |  First Published Apr 27, 2022, 2:55 PM IST

ಮಹರ್ಷಿ ವಾಲ್ಮೀಕಿ ಹಾಗು ರಾಜ ವೀರ ಮದಕರಿ ನಾಯಕ ಮೂರ್ತಿ ಉದ್ಘಾಟನೆ ಮಾಡಲು ರಾಯಚೂರಿಗೆ ಹೆಲಿಕಾಪ್ಟರ್‌ ಮೂಲಕ ಬಂದ ಸುದೀಪ್.
 


ವರದಿ : ಜಗನ್ನಾಥ ‌ಪೂಜಾರ್, ಏಷ್ಯಾ ನೆಟ್ ‌ಸುವರ್ಣನ್ಯೂಸ್

ರಾಯಚೂರು ಜಿಲ್ಲೆ  ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ನಟ ಕಿಚ್ಚ ಸುದೀಪ್ ಮಹರ್ಷಿ ವಾಲ್ಮೀಕಿ ಹಾಗೂ ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದರು.‌‌ಆ ಬಳಿಕ ಕಾರ್ಯಕ್ರಮದ ವೇದಿಕೆ‌ ಮೇಲೆ ಕೆಲವರನ್ನು ಸನ್ಮಾನಿಸಲಾಯಿತು.ಆ ಬಳಿಕ ಅಭಿಮಾನಿಗಳನ್ನು ‌ಉದ್ದೇಶಿಸಿ ಮಾತನಾಡಿದ್ದಾರೆ. ನಟ ಸುದೀಪ್ 

Tap to resize

Latest Videos

'ನನ್ನ ಮೂರ್ತಿ ಪ್ರತಿಷ್ಠಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಶರಣು .ನನ್ನ ಮೂರ್ತಿ ಅನಾವರಣಕ್ಕೆ ನಾನು ಹೇಗೆ ಒಪ್ಪಿಕೊಳ್ಳಲಿ ಅದಕ್ಕೆ ಬೇಡ ಅಂದೆ. ತುಂಬಾ ಜನ ಸಾಧನೆ ಮಾಡಿದವರು ಇದ್ದಾರೆ ಅವರಿಗೆ ಗೌರವ ಸಲ್ಲಬೇಕು, ನಾನು ಅಷ್ಟು ದೊಡ್ಡವನಲ್ಲ. ನಾನು ಸಾಧನೆ ಮಾಡಬೇಕಾದದ್ದು ತುಂಬಾ ಇದೆ. ಮುಂದೆ ಅಂತ ದಿನ ಬಂದಾಗ ನನ್ನ ಮೂರ್ತಿ ಇಡಲಿ ನಾನೇ ಬರ್ತಿನಿ. ನನ್ನ ಮೂರ್ತಿ ನಿರ್ಮಾಣವಾದ ಮೇಲೆ ನನಗೆ ಗೊತ್ತಾಗಿದ್ದು, ಮೊದಲೇ ಬೇಡ ಅಂತಿದ್ದೆ ಎಂದರು. ಇದೇ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುದೀಪ್ ಕನ್ನಡದ ಚಂದು ಸಿನಿಮಾದ ಸೊಂಟದ ವಿಷಯ ಬೇಡವೋ ಶಿಷ್ಯ ಹಾಡು ಹೇಳಿ ಅಭಿಮಾನಿಗಳನ್ನ ರಂಜಿಸಿದ್ದರು.

ಪರಿಶಿಷ್ಟ ಜಾತಿಗೆ 7.5 ನೀಡುವ ವಿಚಾರ ಸುದೀಪ್ ಮಾತು

 ಪರಿಶಿಷ್ಟ ಪಂಗಡಕ್ಕೆ ಶೇ7.5 ಮೀಸಲಾತಿಗಾಗಿ ವಾಲ್ಮೀಕಿ ಸಮಾಜ ಶ್ರೀಗಳ ಹೋರಾಟಕ್ಕೆ ನನ್ನ ಬೆಂಬಲವಿದೆ.ನಾನು ಹೋರಾಟದಲ್ಲಿ ನೇರವಾಗಿ ಭಾಗವಹಿಸಬೇಕು ಅಂತೇನಿಲ್ಲಾ ಎಂದರು. ಪ್ರಸನ್ನಾನಂದಪುರಿ ಸ್ವಾಮಿಜಿ ನಾನು ಅವರ ಸಂಪರ್ಕದಿಲ್ಲ ಅಂತ ಅವರು ಮಾತಾಡಲಿ , ಈ ಬಗ್ಗೆ ಅವರು ಮಾತನಾಡಿಲ್ಲ, ನಾನು ಅವರ ಸಂಪರ್ಕದಲ್ಲಿದ್ದೇನೆ ಎಂದರು. ನಂದೂ ಅಂತ ನಾನು ಅಲ್ಲಿ ಕೂಡಕಾಗಲ್ಲ.. ದೇವರು ಕೊಟ್ಟಿರೋದು ಬಂದಿದೆ ,ಅದಕ್ಕೆ ಏನ್ ಮಾಡಬೇಕು ಮಾಡೋಣ.

ಹಿಂದಿ ರಾಷ್ಟ್ರಭಾಷೆಯಲ್ಲ, ಹಿಂದಿ ಸಿನಿಮಾಗಳನ್ನು ದಕ್ಷಿಣದಲ್ಲಿ ರಿಲೀಸ್ ಮಾಡಲು ಒದ್ದಾಡುತ್ತಿದ್ದಾರೆ- ಸುದೀಪ್

ಸಿನಿಮಾದಿಂದ ನಾನು ಇಷ್ಟೊಂದು ಸಂಪಾದನೆ ಮಾಡಿರುವುದು,ಅದರ ಬಗ್ಗೆ ಕಾಳಜಿಗಳು,ಜವಾಬ್ದಾರಿ ಇವೆ. ಇವತ್ತು ಏನೇ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು ಸಿನಿಮಾದಿಂದ ಬಂದ ದುಡ್ಡಲ್ಲಿ ಮಾಡುತ್ತಿದ್ದೇವೆ ಎಂದರು. ಇನ್ನೂ ಅಪ್ಪು ಬಗ್ಗೆ ನಾವು ಏನೇ ಮಾತನಾಡಿದರೂ ಅದು ಒಳ್ಳೆಯ ರೀತಿಯಲ್ಲೇ ಇರಬೇಕು. ಅವರ ಬಗ್ಗೆ ನಾವು ಏನ್ ಮಾತನಾಡಕೂಡದು ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಅದೇ ಜನರ ಮನಸ್ಸಿನಲ್ಲಿ ಕೂತಿರದು, ನಮ್ಮ ತಂದೆ ತಾಯಿ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಮನಸ್ಸಿಗೆ ಬಂದಿದ್ದನ್ನ ಮನಸ್ಪೂರ್ವಕವಾಗಿ ಮಾಡುತ್ತಿದ್ದೇವೆ ಅಂತ ಸುದೀಪ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಗೀತಾಂಜಲಿ ಹೆಸರಿನ ಲೇಡಿ ಪಿಎಸ್‌ಐ ಜೊತೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದಾರೆ.  ಕುರಕುಂದಾ ಗ್ರಾಮದ ಯುವಕನೊಬ್ಬ ಸುದೀಪ್ ಅಭಿಮಾನಿ ಎಂದು ಹೇಳಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದಾನೆ. ಪುಂಡಾಟ ಮಾಡಲು ಹೋಗಿ ಲೇಡಿ ಪಿಎಸ್‌ಐಯಿಂದ ಧರ್ಮದೇಟು ತಿಂದಿದ್ದಾನೆ. ಅನುಚಿತವಾಗಿ ವರ್ತನೆ ತೋರಿದಲ್ಲದೆ ಪೊಲೀಸ್ ಲಾಠಿ ಕಿತ್ತುಕೊಳ್ಳಲು ಯತ್ನ ಮಾಡಿದ್ದಾರೆ ಹೀಗಾಗಿ ಅತನನ್ನು ಚೇಸ್ ಪೊಲೀಸರು ಬಂಧಿಸಿದ್ದಾರೆ.

click me!