ಹಗ್ಗ ಕಟ್ಟಿ ಸುದೀಪ್‌ನ ನೇತಾಡಿಸಿರುವ ಪೋಟೋ ಫುಲ್‌ ವೈರಲ್!

Published : Dec 09, 2019, 03:07 PM IST
ಹಗ್ಗ ಕಟ್ಟಿ ಸುದೀಪ್‌ನ ನೇತಾಡಿಸಿರುವ ಪೋಟೋ ಫುಲ್‌ ವೈರಲ್!

ಸಾರಾಂಶ

ಜಾಹಿರಾತು ಶೂಟಿಂಗ್ ವೇಳೆ ಕಿಚ್ಚ ಸುದೀಪ್‌ರನ್ನು ಬಿಗಿಯಾಗಿ ಹಗ್ಗ ಕಟ್ಟಿ ನೇತಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.   

ಕನ್ನಡಿಗರ ಪ್ರೀತಿಯ 'ಕೆಂಪೇಗೌಡ' ಕಿಚ್ಚ ಸುದೀಪ್‌ ಕೆಲ ದಿನಗಳ ಹಿಂದೆ 'ರಮ್ಮಿ ಸರ್ಕಲ್' ಜಾಹಿರಾತಿಗೆ ಶೂಟಿಂಗ್ ಮಾಡಿದ್ದಾರೆ.  ಆ ಫೋಟೋವನ್ನು ಟ್ಟಿಟರ್ ಖಾತೆಯಲ್ಲಿ 'ರಮ್ಮಿ ಸರ್ಕಲ್ ಜಾಹಿರಾತಿಗೆ ಶೂಟಿಂಗ್ ಮಾಡಿ ಸಿಕ್ಕಾಪಟ್ಟೆ ಮಜವಿತ್ತು.  ಸಂಜೀವ ಶರ್ಮಾ ಸರ್ ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. Awesome ತಂತ್ರಜ್ಞರು.  ಥ್ಯಾಂಕ್ಸ್‌ ' ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. 

 

ದಬಾಂಗ್‌-3 ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಬ್ಯುಸಿ ಶೆಟ್ಯೂಲ್ ನಡುವೆಯೂ ಸಮಯ ಮಾಡಿಕೊಂಡು ಇಂತಹ ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್‌-7ರಲ್ಲಿ 'ವೀಕೆಂಡ್ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ವಾಸುಕಿ ವೈಭವ್‌ ಸಂಯೋಜನೆ ಮಾಡಿರುವ ' ಮನಸ್ಸಿಂದ ಯಾರೂನೂ ಕೆಟ್ಟೋರಲ್ಲ' ಎಂಬ ಹಾಡಿಗೆ ಧ್ವನಿ ನೀಡಿದ್ದಾರೆ. ಈಗಾಗಲೆ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?