ಮೊದಲ ಸಲ ಸಾಬೀತು ಮಾಡಿಲ್ಲ ಅಂದ್ರೆ ದಾರಿ ಗೊತ್ತಾಗದಂತೆ ಹೂಳುತ್ತಾರೆ: ಪುತ್ರಿಯರ ಬಗ್ಗೆ ದುನಿಯಾ ವಿಜಯ್

By Vaishnavi Chandrashekar  |  First Published Sep 23, 2023, 2:08 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ದುನಿಯಾ ವಿಜಯ್ ಪುತ್ರಿಯರ ಫೋಟೋ. ಸಿನಿಮಾ ಆಫರ್‌ಗಳು ಹರಿದು ಬರುತ್ತಿದೆ...ಈ ಬಗ್ಗೆ ವಿಜಯ್ ಮಾತನಾಡಿದ್ದಾರೆ. 


ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದುನಿಯಾ ವಿಜಯ್ ಪುತ್ರಿಯರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಣ್ಣದ ಲೋಕದಿಂದ ಸಾಕಷ್ಟು ಆಫರ್‌ಗಳು ಹರಿದು ಬರುತ್ತಿದೆ. ಈ ಬಗ್ಗೆ ವಿಜಯ್‌ನ ಕೇಳಿದ್ದಕ್ಕೆ 'ನನ್ನ ಹುಡುಗಿಯರು ಸಿನಿಮಾ ಮಾಡಲು ರೆಡಿಯಾಗುತ್ತಿದ್ದಾರೆ' ಎಂದಿದ್ದಾರೆ ವಿಜಯ್. 

'ನನ್ನ ಪುತ್ರಿ ಮೋನಿಕಾ ಮುಂಬೈನಲ್ಲಿ ಆಕ್ಟಿಂಗ್ ಕೋರ್ಸ್ ಮುಗಿಸಿಕೊಂಡು ಥಿಯೇಟರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿ ಆಕೆ ಡೆಬ್ಯೂ ಸಿನಿಮಾ ಬಗ್ಗೆ ಘೋಷಣೆ ಮಾಡುತ್ತೀನಿ. ನನ್ನ ಮಗಳ ಸಿನಿಮಾ ನಾನೇ ನಿರ್ದೇಶನ ಮಾಡಬಹುದು ಅಥವಾ ಒಳ್ಳೆ ಕಥೆ ನನ್ನ ಕೈಯಲ್ಲಿದ್ದರೆ ಮತ್ತೊಬ್ಬರಿಗೆ ಜವಾಬ್ದಾರಿ ಕೊಡಬಹುದು. ಕಿರಿಮಗಳ ಮೋನಿಷಾ ನ್ಯೂಯಾರ್ಕ್‌ ಫಿಲ್ಮಂ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಪ್ರಯಾಣ ಮಾಡುತ್ತಿದ್ದಾರೆ. ಈಗಲೇ ಆಕೆ ಡೆಬ್ಯೂ ಬಗ್ಗೆ ಯೋಚನೆ ಮಾಡುತ್ತಿರುವೆ' ಎಂದು ದುನಿಯಾ ವಿಜಯ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಅಣ್ತಮ್ಮ ಹೊಸ ಕ್ರಶ್‌ ಸಿಕ್ಕಿದ್ಲು; ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!

ಮೋನಿಷಾ ಮತ್ತು ಮೋನಿಕಾ ಈಗಾಗಲೆ ಸಾಕಷ್ಟು ಆಫರ್‌ಗಳನ್ನು ಪಡೆಯುತ್ತಿದ್ದಾರೆ ಆದರೆ ಮಾಡಲು ಒಪ್ಪಿಗೆಯನ್ನು ಅಪ್ಪ ಕೊಡಬೇಕು. 'ನಮ್ಮ ತಂದೆಯವರು ತಲೆಯಲ್ಲಿ ಕ್ಲಿಯರ್ ಹಾದಿ ಇದೆ' ಎನ್ನುತ್ತಾರೆ ಪುತ್ರಿಯರು. 'ಚಿತ್ರರಂಗಕ್ಕೆ ಬ್ಯಾಕ್ ಬೋನ್ ಅಗಿರುವಂತ ಪಾತ್ರಗಳನ್ನು ನನ್ನ ಮಕ್ಕಳ ಮಾಡಬೇಕು. ಗ್ಲಾಮರ್ ಪಾತ್ರಗಳಲ್ಲಿ ಬಂದು ಹೋಗುವುದು ಅರ್ಥವಿಲ್ಲ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಆಮೇಲೆ ಚಿತ್ರರಂಗದಲ್ಲಿ ಎಲ್ಲಿದ್ದಾರೆ ಅಂತಾನೇ ಗೊತ್ತಾಗುವುದಿಲ್ಲ. ಒಂದು ಸಲ ಗ್ಲಾಮರ್ ಪಾತ್ರ ಮಾಡಲು ಶುರು ಮಾಡಿದರೆ ಜನರು ಪದೇ ಪದೇ ಅದಕ್ಕೆ ಕೇಳಿ ಕೊಂಡು ಆಫರ್ ಮಾಡುತ್ತಾರೆ' ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಹೆಣ್ಣು ಮಕ್ಕಳು ಬೆಳಗ್ಗೆ ತಿಂಡಿಯಿಂದ ರಾತ್ರಿ ಊಟ ಮಾಡುವವರೆಗೂ ದುನಿಯಾ ವಿಜಯ್ ಡಯಟ್ ಚಾಟ್ ಬರೆದಿಟ್ಟಿದ್ದಾರೆ. ಶೂಟಿಂಗ್‌ನಲ್ಲಿದ್ದರೂ ಮಕ್ಕಳಯ broccoli ಸೂಪ್ ಮತ್ತು ಗ್ರಿಲ್ ಚಿಕನ್ ತಿನ್ನುತ್ತಾರೆ ವಿಜಯ್ ಬ್ಲ್ಯಾಕ್ ಕಾಫಿ ಕುಡಿಯುತ್ತಾರೆ. 'ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುತ್ತೀವಿ' ಎಂದು ಮೋನಿಕಾ ಹೇಳಿದ್ದಾರೆ. ನಟನೆ ಪಾತ್ರವಲ್ಲದೆ ಮಕ್ಕಳಿಗೆ ಡ್ಯಾನ್ಸ್‌ ಮತ್ತು ಜೀವನ ಪಾಠ ಗ್ರೂಮಿಂಗ್ ಮಾಡುತ್ತಿದ್ದಾರೆ. 'ಸಿನಿಮಾ ರಂಗದಲ್ಲಿ ಎರಡು ಚಾನ್ಸ್‌ ಇರುವುದಿಲ್ಲ. ಮೊದಲ ಸಿನಿಮಾದಲ್ಲಿ ಜನರನ್ನು ಮೆಚ್ಚಿಸಲು ಅವಕಾಶ ಸಿಗುತ್ತದೆ ಇಲ್ಲವಾದರೆ ಕಷ್ಟವಾಗುತ್ತದೆ. ಹೀಗಾಗಿ ವರ್ಕ್‌ ಆಗುವಂತೆ ನೋಡಿಕೊಳ್ಳಬೇಕು' ಹೇಳಿದ್ದಾರೆ ವಿಜಯ್.

ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ; ರಕ್ಷಿತ್ ಶೆಟ್ಟಿಗೆ ಎಚ್ಚರಿಗೆ ಕೊಟ್ಟ ನೆಟ್ಟಿಗರು!

'ಕಷ್ಟದ ರೀತಿಯಲ್ಲಿ ನಾವು ಪ್ರಪಂಚ ನೋಡಿ ಎಲ್ಲಾ ಕಲಿತಿರುವುದು. ಆರಂಭದಲ್ಲಿ ನಾನು ಸಾಭೀತು ಮಾಡಿಲ್ಲ ಅಂದ್ರೆ ದಾರಿನೇ ಗೊತ್ತಾಗದಂತೆ ಹೂಳುತ್ತಾರೆ. ಹೇಗೆ ಶೈನ್ ಆಗಬೇಕು ಹೇಗೆ ನಡೆದುಕೊಳ್ಳಬೇಕು ಎಂದು ಈಗಾಗಲೆ ಹೇಳಿಕೊಟ್ಟಿರುವೆ. ಏನೇ ಕೆಲಸ ಮಾಡಿದ್ದರೂ ಅವರ ಹಿಂದೆ ಸಪೋರ್ಟ್ ಆಗಿ ನಿಂತುಕೊಳ್ಳುವೆ. ಯಾವ ದೇವಸ್ಥಾಗಳಿಗೆ ಹೋದರೂ ಅವರನ್ನು ಕರೆದುಕೊಂಡು ಹೋಗುವರೆ...ಎರಡೂ ಪ್ರಪಂಚಗಳ ಬಗ್ಗೆ ಅವರಿಗೆ ಗೊತ್ತಾಗಬೇಕು' ಎಂದಿದ್ದಾರೆ ವಿಜಯ್. 

click me!