ಮಾಸ್‌ ಹಾಡುಗಳು, ಜಾನಪದ ಸೊಗಡು.. ಸಿನಿಮಾ ಪ್ರಿಯರಿಗೆ ಕಿಕ್‌ ಎಂದಿದ್ಯಾಕೆ ದುನಿಯಾ ವಿಜಯ್‌!

Published : Sep 12, 2026, 04:23 PM IST
Duniya Vijay City Lights

ಸಾರಾಂಶ

ಸಿಟಿ ಲೈಟ್ಸ್‌ ಸಿನಿಮಾ ಸೆ.18ಕ್ಕೆ ರಿಲೀಸ್‌ ಆಗಲಿದೆ. ದುನಿಯಾ ವಿಜಯ್‌ ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ ಹಾಗೂ ಮೋನಿಷಾ ವಿಜಯ್‌ಕುಮಾರ್‌ ನಟಿಸಿದ್ದಾರೆ. ಈಗಾಗಲೇ ಐದು ಹಾಡುಗಳು ಮೆಚ್ಚುಗೆ ಗಳಿಸಿದೆ.

ದುನಿಯಾ ವಿಜಯ್‌ ನಿರ್ದೇಶಿಸಿ, ವಿನಯ್‌ರಾಜ್‌ಕುಮಾರ್‌ ಹಾಗೂ ಮೋನಿಷಾ ವಿಜಯ್‌ಕುಮಾರ್‌ ಜೋಡಿಯಾಗಿ ನಟಿಸಿರುವ ‘ಸಿಟಿ ಲೈಟ್ಸ್‌’ ಚಿತ್ರವು ಸೆ.18ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಐದು ಹಾಡುಗಳು ಆನಂದ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿವೆ. ಈಗಷ್ಟೇ ಬಿಡುಗಡೆ ಆಗಿರುವ ‘ಅಲಕ್‌ ನಿರಂಜನ್‌’ ಹಾಡು ಟ್ರೆಂಡಿಂಗ್‌ನಲ್ಲಿದೆ.

ಈ ಕುರಿತು ದುನಿಯಾ ವಿಜಯ್‌, ‘ಯಾವುದೇ ಸಿನಿಮಾಗೆ ಹಾಡುಗಳೇ ಮೊದಲ ಇನ್ವಿಟೇಷನ್‌. ಅಲ್ಲದೆ ಹಾಡುಗಳು ಮಾಸ್‌ ಮತ್ತು ಜಾನಪದ ಸೊಗಡು ಎರಡೂ ಒಳಗೊಂಡರೆ ಅದನ್ನು ಕೇಳುವಾಗ ಸಿಗೋ ಕಿಕ್ಕೇ ಬೇರೆ. ಸಿಟಿ ಲೈಟ್ಸ್‌ ಚಿತ್ರದ ಹಾಡುಗಳು ಸಿನಿಮಾ ಪ್ರಿಯರಿಗೆ ಕಿಕ್‌ ಕೊಡುತ್ತೇವೆ. ಸಿನಿಮಾ ಬಗ್ಗೆ ನಿರೀಕ್ಷೆ ಹಾಗೂ ಕುತೂಹಲ ಮೂಡಿಸುವುದಕ್ಕೆ ಕಾರಣವಾಗುತ್ತಿವೆ. ಚರಣ್‌ ರಾಜ್‌ ಸಂಗೀತ ಎಲ್ಲಾ ಹಾಡುಗಳನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ’ ಎನ್ನುತ್ತಾರೆ.

ಸಿಟಿ ಲೈಟ್ಸ್ ಸಂಪೂರ್ಣ ಹೆಣ್ಣು ಮಕ್ಕಳ ಬಗೆಗಿನ ಕಥೆ. ಬೆಂಗಳೂರಿನಲ್ಲಿ ಹುಡುಗಿಯರು ಜೀವನ ಸಾಗಿಸೋದಕ್ಕೆ ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂಬುದುರ ಬಗ್ಗೆ ಹೇಳೋದಕ್ಕೆ ಹೊರಟಿದ್ದೇನೆಂದು ಈ ಹಿಂದೆ ಸ್ವತಃ ದುನಿಯಾ ವಿಜಯ್​ ಹೇಳಿಕೊಂಡಿದ್ದರು.

ಪಕ್ಕಾ ಮಾಸ್ ಅವತಾರದಲ್ಲಿ ದೊಡ್ಮನೆ ಕುಡಿ

ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಸಂಗೀತವಿದೆ. ವಿನಯ್ ರಾಜ್​​ಕುಮಾರ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಸುತ್ತಲಿನ ಕುತೂಹಲ ದೊಡ್ಡ ಮಟ್ಟದಲ್ಲಿದೆ. ಇನ್ನು ವಿಜಯ್‌ ಕುಮಾರ್‌ ಹಾಗೂ ವಿಕ್ರಂ ಆರ್ಯ ಸಿನಿಮಾವನ್ನು ನಿರ್ಮಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Video Review: ತಾಂತ್ರಿಕ ಶ್ರೀಮಂತ ಕುತೂಹಲಕರ ರುದ್ರ ಭಯಾನಕ ಜಾಗದಲ್ಲಿ ವ್ಲಾಗರ್‌ಗಳು!
ಕೋಟಿ ಕೋಟಿ ಹಣದ ಕನಸು, ಸಾಲದ ಬೆಟ್ಟ: ಹೇಗಿದೆ ನಗಿಸುವ 'ಸಾಲಗಾರರ ಸಹಕಾರ ಸಂಘ' ಸಿನಿಮಾ?