ಹಾರ್ಟ್‌ನಲ್ಲಿ ಸ್ವಲ್ಪ ಜಾಗ ಮಾಡ್ಕೊಳ್ರಿ.. ಶಿವಣ್ಣನ ಜೊತೆ ಸ್ಟೆಪ್ ಹಾಕೋಕೆ ಬರ್ತಿದ್ದಾಳೆ ನಿವಿ ಕುಮಾರಿ!

Published : Sep 12, 2026, 08:45 AM IST
Shivarajkumar Niveditha Gowda

ಸಾರಾಂಶ

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಬೇಲ್’ ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 12ರಂದು ಸಂಜೆ 5.05ಕ್ಕೆ ಹಾಡು ಬಿಡುಗಡೆಯಾಗಲಿದೆ.

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬೇಲ್’ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾದ ಟೀಸರ್ ಹಾಗೂ ಪಾತ್ರಗಳ ಝಲಕ್ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಇದೀಗ ಮತ್ತೊಂದು ಸರ್ಪ್ರೈಸ್ ನೀಡಿದೆ. ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಶಿವಣ್ಣ ಜೊತೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಹೌದು, ‘ಬೇಲ್’ ಸಿನಿಮಾದ ವಿಶೇಷ ಹಾಡಿನಲ್ಲಿ ನಿವೇದಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾಗಿ ಚಿತ್ರತಂಡ ಅಧಿಕೃತ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಾರ್ಟ್‌ನಲ್ಲಿ ಸ್ವಲ್ಪ ಜಾಗ ಮಾಡ್ಕೊಳ್ರಿ...

ನಿವೇದಿತಾ ಗೌಡ ಅವರ ಪೋಸ್ಟರ್‌ನ್ನು ಹಂಚಿಕೊಂಡಿರುವ ಚಿತ್ರತಂಡ, 'ಹಾರ್ಟ್ ಅಲ್ಲಿ ಸಲ್ಪ ಜಾಗ ಮಾಡ್ಕೊಳ್ರಿ... ಬರ್ತಿದಾಳೆ ನಮ್ಮ ಕುಮಾರಿ' ಎಂಬ ಕ್ಯಾಪ್ಶನ್ ನೀಡಿದೆ. ಈ ಮೂಲಕ ಬಿಗ್‌ಬಾಸ್ ಬೆಡಗಿ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದೆ. ಈ ಸ್ಪೆಷಲ್ ಸಾಂಗ್ ಸೆಪ್ಟೆಂಬರ್ 12ರಂದು ಸಂಜೆ 5.05ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಶಿವಣ್ಣ ಹಾಗೂ ನಿವೇದಿತಾ ಗೌಡ ಅವರ ಕಾಂಬಿನೇಷನ್‌ನಲ್ಲಿ ಹಾಡು ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಸ್ಪೆಷಲ್ ಸಾಂಗ್‌ನಲ್ಲಿ ನಿವೇದಿತಾ ಗೌಡ

‘ಬೇಲ್’ ಸಿನಿಮಾದ ಈ ವಿಶೇಷ ಹಾಡಿನಲ್ಲಿ ನಿವೇದಿತಾ ಗೌಡ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫ್ರೀ ಹೇರ್‌ಸ್ಟೈಲ್, ಆಕರ್ಷಕ ಬ್ಲೌಸ್ ಹಾಗೂ ಮುದ್ದಾದ ನಗುವಿನೊಂದಿಗೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ನಿವೇದಿತಾ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬಿಗ್‌ಬಾಸ್ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಿವೇದಿತಾ ಗೌಡ, ಇದೀಗ ಸಿನಿಮಾದ ಸ್ಪೆಷಲ್ ಸಾಂಗ್ ಮೂಲಕ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡು ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

‘ಬೇಲ್’ನಲ್ಲಿ ಖಡಕ್ ಪೊಲೀಸ್ ಆಗಿ ಶಿವಣ್ಣ

ಇನ್ನು ‘ಬೇಲ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಲುಕ್ ಹಾಗೂ ಗಂಭೀರ ಅಭಿನಯದ ಮೂಲಕ ಶಿವಣ್ಣ ಈಗಾಗಲೇ ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಜಯರಾಮ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದು, ಇವರ ಪಾತ್ರಗಳ ಝಲಕ್ ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಕಾಣಿಸಿಕೊಂಡಿದೆ. ಗಂಭೀರ ಕಥಾಹಂದರದ ಜೊತೆಗೆ ಕಾಮಿಡಿ ಹಾಗೂ ಮನರಂಜನೆಯ ಅಂಶಗಳೂ ಸಿನಿಮಾದಲ್ಲಿವೆ ಎನ್ನುವುದು ಟೀಸರ್‌ನಿಂದ ತಿಳಿದುಬಂದಿದೆ.

ನಿವೃತ್ತ ಪೊಲೀಸ್ ಅಧಿಕಾರಿಗಳ ಸುತ್ತ ಹೆಣೆದ ಕಥೆ

‘ಬೇಲ್’ ಸಿನಿಮಾದ ಕಥೆ ನಿವೃತ್ತ ಪೊಲೀಸ್ ಅಧಿಕಾರಿಗಳ ಸುತ್ತ ಸಾಗುತ್ತದೆ ಎನ್ನಲಾಗಿದೆ. ಹೀಗಾಗಿ ಚಿತ್ರದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ಅವರ ಜೀವನಕ್ಕೆ ಸಂಬಂಧಿಸಿದ ಹಲವು ಕುತೂಹಲಕಾರಿ ವಿಚಾರಗಳು ಇರಲಿವೆ ಎಂಬ ನಿರೀಕ್ಷೆ ಇದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಅವರ ಪಾತ್ರದ ಝಲಕ್ ಕೂಡ ಗಮನ ಸೆಳೆದಿದ್ದು, ‘ಗೊತ್ತಾಗಲ್ವೇನ್ರೀ ಮೀಡಿಯಾ’ ಎಂಬ ಡೈಲಾಗ್ ಕೂಡ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.

ಎರಡು ಟೀಸರ್‌ಗಳಿಂದ ಹೆಚ್ಚಿದ ನಿರೀಕ್ಷೆ

‘ಬೇಲ್’ ಸಿನಿಮಾದ ಮೊದಲ ಟೀಸರ್ ಮುಖ್ಯವಾಗಿ ಶಿವರಾಜ್‌ಕುಮಾರ್ ಅವರ ಪಾತ್ರವನ್ನು ಪರಿಚಯಿಸಿತ್ತು. ಬಳಿಕ ಬಿಡುಗಡೆಯಾದ ಎರಡನೇ ಟೀಸರ್‌ನಲ್ಲಿ ಸಿನಿಮಾದ ಇತರ ಪ್ರಮುಖ ಪಾತ್ರಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲಾಗಿದೆ. ವಿಶೇಷವಾಗಿ ಸಾಯಿಕುಮಾರ್ ಹಾಗೂ ಜಯರಾಮ್ ಅವರ ಪಾತ್ರಗಳ ಖದರ್ ಹೇಗಿರಲಿದೆ ಎಂಬುದರ ಝಲಕ್ ಎರಡನೇ ಟೀಸರ್‌ನಲ್ಲಿ ಸಿಕ್ಕಿದೆ.

ಸುಮಾರು 1 ನಿಮಿಷ 36 ಸೆಕೆಂಡ್‌ಗಳ ಈ ಟೀಸರ್ ಸಿನಿಮಾದ ಪ್ರಮುಖ ಪಾತ್ರಗಳ ಪರಿಚಯ ಮಾಡಿಕೊಡುವ ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇದೀಗ ಶಿವಣ್ಣ ಜೊತೆ ನಿವೇದಿತಾ ಗೌಡ ಕಾಣಿಸಿಕೊಳ್ಳಲಿರುವ ಸ್ಪೆಷಲ್ ಸಾಂಗ್ ಸೆಪ್ಟೆಂಬರ್ 12ರಂದು ಬಿಡುಗಡೆಯಾಗಲಿದ್ದು, ಈ ಹಾಡು ‘ಬೇಲ್’ ಸಿನಿಮಾದ ಹೈಪ್‌ಗೆ ಮತ್ತಷ್ಟು ಬೂಸ್ಟ್ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಸ್ಟಾರ್ ಹೀರೋಗಳಿಗಿಂತ ನನಗೆ ಪಾತ್ರವೇ ಮುಖ್ಯ': ಕ್ಯೂಟ್ ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ದೇಕೆ?
ಕೋಟಿ ಹಣಕ್ಕಿಂತ ಬಡ ಜನರು ಕೊಟ್ಟ ₹10, ₹20 ಬೆಲೆ ಹೆಚ್ಚು: ಮೋಹಕ ತಾರೆ ರಮ್ಯಾ ಹೇಳಿದ್ದೇನು?