ಎರಡನೇ ಮಗುವನ್ನು ಬರ ಮಾಡಿಕೊಂಡ ಧ್ರುವ ಸರ್ಜಾ. ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ವಿಶ್‌ಗಳು....
ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಗಣೇಶ ಹಬ್ಬದ ದಿನವೇ ಬೆಳಗ್ಗೆ ನಾರ್ಮಲ್ ಡೆಲಿವರಿಯಾಗಿರುವುದು ಕುಟುಂಬಸ್ಥರಿಗೆ ಖುಷಿ ತಂದುಕೊಟ್ಟಿದೆ. ಮಗನ ಮುಖ ನೋಡಿ ಪತ್ನಿಯನ್ನು ಮಾತನಾಡಿಸಿಕೊಂಡು ಬರುತ್ತಿದ್ದಂತೆ ಧ್ರುವ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
'ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ ಈಗ ಚಿರು ಮಗನ ರೂಪದಲ್ಲಿ ಧ್ರುವ ಸರ್ಜಾ ಮಡಿಲು ಸೇರಿದ್ದಾರೆ ಎಂದು. ಜನರ ಮಾತಿನಂತೆ ಹಾಗೆ ನಡೆಯಲಿ. ನಮ್ಮ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಂಭ್ರಮ ಮನೆ ಮಾಡಿದ ಮೊದಲು ರಾಯನ್ ಆಮೇಲೆ ನನ್ನ ಮಗಳು ಈಗ ಮಗ. ತಾಯಿ ಗರ್ಭಿಣಿ ಆಗಿರುವಾಗ ಮಗುವಿಗೆ ನಾಮಕರಣ ಮಾಡಬಾರದು ಎಂದು ಹೇಳಿದ್ದರು ಅದಿಕ್ಕೆ ಹೆಸರಿಟ್ಟಿರಲಿಲ್ಲ ಹೀಗಾಗಿ ಒಟ್ಟಿಗೆ ಎರಡೂ ಮಾಡುತ್ತೇವೆ. ಫ್ಯಾಮಿಲಿಯಲ್ಲಿ ಮೂರು ಜನ ಮಕ್ಕಳಿದ್ದಾರೆ. ಎಲ್ಲರೂ ತುಂಬಾ ಹ್ಯಾಪಿ ಆಗಿದ್ದಾರೆ' ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.
ರಾಯನ್ ಜೊತೆ ಧ್ರುವ ಸರ್ಜಾ ಪುತ್ರಿ; ಸೀಮಂತದಲ್ಲಿ ಮೇಘನಾ ಇಲ್ಲ, ನೆಟ್ಟಿಗರ ಪ್ರಶ್ನೆಗೆ ಉತ್ತರವೇ ಇಲ್ಲ!
'ನಾನು ಮೊದಲು ಮೊಬೈಲ್ ಹಿಡಿದು Chi ಅಂತ ಟೈಪ್ ಮಾಡಿ ಓ ....ಆಮೇಲೆ ಅರ್ಜುನ್ ಅಂಕಲ್‌ಗೆ ಕಾಲ್ ಮಾಡಿದೆ. ಅಂಕಲ್ ನೋಡಿದರು ಖುಷಿ ಆಯ್ತು ಮೊದಲು ಅವರಿಗೆ ಹೇಳಿದ್ದು. ಅಣ್ಣನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ನಾನು ಮೂರು ವರ್ಷಗಳಿಂದ ನಾನು ಅಣ್ಣನ ಸಮಾಧಿ ಬಳಿ ಮಲಗುತ್ತೀನಿ ಯಾರೋ ಅದನ್ನು ಎಡಿಟ್ ಮಾಡಿ ಕೆಲವು ಕ್ಷಣಗಳನ್ನು ವೈರಲ್ ಮಾಡಿದ್ದಾರೆ. ನಾನು ಎಲ್ಲೂ ಅಣ್ಣನ ಮಿಸ್ ಮಾಡಿಕೊಳ್ಳುತ್ತೀನಿ ಆದರೆ ಎಲ್ಲೂ ತೋರಿಸಿಕೊಳ್ಳುವುದಿಲ್ಲ ಅಷ್ಟು ಖುಷಿ ಬೇಸರ ಮಾಡಿಕೊಂಡರೆ ನನ್ನ ತಂದೆತಾಯಿ ಬೇಸರ ಮಾಡಿಕೊಳ್ಳುತ್ತಾರೆ ಅದಿಕ್ಕೆ ಜಾಸ್ತಿ ಎಕ್ಸಪ್ರೆಸ್ ಮಾಡುವುದಿಲ್ಲ' ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಮಗನಿಗೆ ರಜನಿಕಾಂತ್-ಧ್ರುವ ಸರ್ಜಾ ಡೈಲಾಗ್ ಹೇಳಿಕೊಟ್ಟ ಮೇಘನಾ ರಾಜ್; ತಮಿಳು ಬೇಡ ಕನ್ನಡ ಕಲಿಸಿ ಎಂದ ನೆಟ್ಟಿಗರು!
'ಹಬ್ಬದ ನನಗೆ ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಎರಡನೇ ಮಗ. ನನ್ನ ಮಗಳಿಗೆ ಹೆಸರಿಟ್ಟಿಲ್ಲ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ದೊಡ್ಡ ಗಣ್ಯರ ಹುಟ್ಟುಹಬ್ಬದ ದಿನ ಹಬ್ಬದ ದಿನ ನನ್ನ ಪತ್ನಿ ಹುಟ್ಟುಹಬ್ಬ ದಿನ ಎಲ್ಲವೂ 18 ನಂಬರ್ ತುಂಬಾ ಖುಷಿಯಾಗುತ್ತದೆ. ಯಾವ ದಿನ ಮಗು ಹುಟ್ಟಿದ್ದರೂ ಓಕೆ ಯಾವ ಮಗು ಆಗಿದ್ದರೂ ಓಕೆ ಅಂತ ಇದ್ದೆ. ನಾರ್ಮಲರ್ ಡೆಲಿವರಿಯಲ್ಲಿ ತುಂಬಾ ಕಿರ್ಚಾಟ ಇರುತ್ತೆ ಅದಿಕ್ಕೆ ಗಾಬರಿ ಆಗಿದ್ದೆ' ಎಂದಿದ್ದಾರೆ ಧ್ರುವ.