ಮೈಸೂರಿನಲ್ಲಿ ಪೊಗರು’ ಜೋಡಿಯ ಸೀಕ್ರೆಟ್ ಶೂಟ್: ಧ್ರುವ ಸರ್ಜಾ-ನಂದ ಕಿಶೋರ್ ಮಾಡ್ತಿರೋದೇನು?

Published : Oct 01, 2026, 05:01 PM IST
Dhruva Sarja Nanda Kishore

ಸಾರಾಂಶ

‘ಪೊಗರು’ ಬಳಿಕ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಮತ್ತೆ ಒಂದಾಗಿದ್ದಾರೆ. ಮೈಸೂರಿನಲ್ಲಿ ಸ್ಪೆಷಲ್ ಪ್ರೊಮೋ ಶೂಟ್ ನಡೆಯುತ್ತಿದ್ದು, ಧ್ರುವ ಸರ್ಜಾ ಹುಟ್ಟುಹಬ್ಬದಂದು ಹೊಸ ಪ್ರಾಜೆಕ್ಟ್‌ ರಿವೀಲ್ ಆಗುವ ಸಾಧ್ಯತೆ ಇದೆ.

ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವು ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆಯಿದ್ದು, ಇದೀಗ ಅವರ ಹೊಸ ಪ್ರಾಜೆಕ್ಟ್‌ವೊಂದಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಮೂಲಗಳ ಪ್ರಕಾರ, ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಮತ್ತೊಮ್ಮೆ ಕೈಜೋಡಿಸಿದ್ದಾರೆ.

‘ಪೊಗರು’ ಬಳಿಕ ಮತ್ತೆ ಒಂದಾದ ಧ್ರುವ-ನಂದ ಕಿಶೋರ್

ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಈ ಹಿಂದೆ 2021ರಲ್ಲಿ ಬಿಡುಗಡೆಯಾದ ‘ಪೊಗರು’ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಹೈವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದ ಈ ಚಿತ್ರದಲ್ಲಿ ಧ್ರುವ ಸರ್ಜಾ ರಗಡ್ ಹಾಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಗಾಗಿ ಧ್ರುವ ಸರ್ಜಾ ಮಾಡಿಕೊಂಡಿದ್ದ ದೈಹಿಕ ಪರಿವರ್ತನೆ, ಪಂಚ್ ಡೈಲಾಗ್‌ಗಳು ಮತ್ತು ಮಾಸ್ ಪ್ರೆಸೆಂಟೇಷನ್ ಪ್ರೇಕ್ಷಕರ ಗಮನ ಸೆಳೆದಿತ್ತು. ಬಿ.ಕೆ. ಗಂಗಾಧರ್ ನಿರ್ಮಾಣದ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ನಟಿಸಿದ್ದರು.

ಹುಟ್ಟುಹಬ್ಬದಂದು ಬರಲಿದೆ ಸ್ಪೆಷಲ್ ಪ್ರೊಮೋ?

ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಪ್ರಾಜೆಕ್ಟ್‌ಗಾಗಿ ವಿಶೇಷ ಪ್ರೊಮೋ ಶೂಟ್ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಈ ವಿಶೇಷ ಪ್ರೊಮೋ ಚಿತ್ರೀಕರಣ ನಡೆಯುತ್ತಿದ್ದು, ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಇದನ್ನು ಫಸ್ಟ್ ಗ್ಲಿಂಪ್ಸ್ ರೂಪದಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎನ್ನಲಾಗಿದೆ.

ಆದರೆ ಈ ಹೊಸ ಸಿನಿಮಾದ ಕಥೆ, ಪಾತ್ರ, ತಾರಾಬಳಗ ಸೇರಿದಂತೆ ಯಾವುದೇ ಪ್ರಮುಖ ವಿವರಗಳನ್ನು ಸದ್ಯಕ್ಕೆ ಚಿತ್ರತಂಡ ಬಹಿರಂಗಪಡಿಸಿಲ್ಲ. ಹೀಗಾಗಿ ‘ಪೊಗರು’ ಬಳಿಕ ಧ್ರುವ-ನಂದ ಕಿಶೋರ್ ಜೋಡಿ ಯಾವ ರೀತಿಯ ಕಥೆಯೊಂದಿಗೆ ವಾಪಸಾಗಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

‘ಪೊಗರು’ ನಂತರ ಧ್ರುವ-ನಂದ ಕಿಶೋರ್ ಜರ್ನಿ

‘ಪೊಗರು’ ಬಳಿಕ ಧ್ರುವ ಸರ್ಜಾ ‘ಮಾರ್ಟಿನ್’ ಹಾಗೂ ‘ಕೆಡಿ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ನಂದ ಕಿಶೋರ್ ಅವರು ಮೋಹನ್‌ಲಾಲ್ ಮತ್ತು ಸಮರ್ಜಿತ್ ಲಂಕೇಶ್ ಅಭಿನಯದ ಮಲ್ಟಿಲಿಂಗ್ವಲ್ ಫ್ಯಾಂಟಸಿ-ಆ್ಯಕ್ಷನ್ ಡ್ರಾಮಾ ‘ವೃಷಭ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿರುವ ಈ ಜೋಡಿಯ ಹೊಸ ಸಿನಿಮಾ ಹೇಗಿರಲಿದೆ ಎಂಬುದು ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.

ಧ್ರುವ ಹುಟ್ಟುಹಬ್ಬದಂದು ಮತ್ತೊಂದು ಬಿಗ್ ಅನೌನ್ಸ್‌ಮೆಂಟ್

ಇದರ ನಡುವೆ ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದೇ ಮತ್ತೊಂದು ಮಹತ್ವದ ಸಿನಿಮಾ ಘೋಷಣೆಯಾಗಲಿದೆ. ನಿರ್ದೇಶಕ ವಿಶಾಲ್ ಅತ್ರೇಯ ಅವರೊಂದಿಗೆ ಧ್ರುವ ಸರ್ಜಾ ಕೈಜೋಡಿಸಿರುವ ಹೊಸ ಸಿನಿಮಾವನ್ನು ಇದೇ ದಿನ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಟಿ.ಜಿ. ವಿಶ್ವ ಪ್ರಸಾದ್ ಅವರ ನಿರ್ಮಾಣದಲ್ಲಿ, ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಈ ಪ್ರಾಜೆಕ್ಟ್ ಮೂಡಿಬರಲಿದೆ. ‘ತತ್ಸಮ ತದ್ಭವ’ ಖ್ಯಾತಿಯ ನಿರ್ದೇಶಕ ವಿಶಾಲ್ ಅತ್ರೇಯ ಅವರಿಗೆ ಇದು ದೊಡ್ಡ ನಿರ್ಮಾಣದ ಕ್ಯಾನ್ವಾಸ್ ಒದಗಿಸಲಿರುವ ಸಿನಿಮಾವಾಗಿದೆ.

ಇನ್ನು ಈ ಚಿತ್ರವನ್ನು ಧ್ರುವ ಸರ್ಜಾ ಅವರ ಹಿಂದಿನ ಮಾಸ್ ಸಿನಿಮಾಗಳಿಗಿಂತ ವಿಭಿನ್ನ ಹಾಗೂ ಫ್ರೆಶ್ ನ್ಯಾರೇಟಿವ್ ಹೊಂದಿರುವ ಎಂಗೇಜಿಂಗ್ ಎಂಟರ್‌ಟೈನರ್ ಆಗಿ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಒಂದಲ್ಲ, ಎರಡು ಪ್ರಮುಖ ಪ್ರಾಜೆಕ್ಟ್‌ಗಳ ಕುರಿತಾದ ಘೋಷಣೆಗಳು ಹೊರಬರುವ ನಿರೀಕ್ಷೆ ಮೂಡಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ರಚಿತಾ ರಾಮ್; 5 ಗಂಟೆ ಕಾದರೂ ಮೀಟ್ ಮಾಡದೇ ವಾಪಸ್ ಹೋಗಿದ್ದೇಕೆ?
ಇದು ಕನ್ನಡ ಸಿನಿಮಾ ಪವರ್: ಕೇವಲ 45ರಿಂದ 350+ ಶೋಗಳಿಗೆ ಜಿಗಿತ ಕಂಡ ‘ಪ್ರೇಮದ ಊರಲಿ’