ನಟ ದರ್ಶನ್‌ ಮಧ್ಯಂತರ ಬೇಲ್‌ಗೆ ಶ್ಯೂರಿಟಿ ಕೊಟ್ಟ 'ಆಪದ್ಭಾಂಧವ' ಧನ್ವೀರ್ ಗೌಡ!

By Shriram BhatFirst Published Oct 30, 2024, 7:05 PM IST
Highlights

ನಟ ಧನ್ವೀರ್ ಗೌಡ ಅವರು ದರ್ಶನ್ ಅವರಿಗೆ ಆಪ್ತರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ದರ್ಶನ್ ಅವರು ಬೆಂಗಳೂರಿನಲ್ಲಿ ಜೈಲಿನಲ್ಲಿ ಇದ್ದಾಗ ನಟ ಧನ್ವೀರ್ ಅವರು ಭೇಟಿಯಾಗಿ ಮಾತನಾಡಿಸಿಕೊಂಡು ಬಂದಿದ್ದರು. ಇದೀಗ, ಅನಾರೋಗ್ಯಕ್ಕೆ ಒಳಗಾಗಿರುವ ದರ್ಶನ್‌ ಅವರಿಗೆ..

ಕನ್ನಡದ ಸ್ಟಾರ್ ನಟ ದರ್ಶನ್‌ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಮಧ್ಯಂತರ ಜಾಮೀನನ್ನು ಕೋರ್ಟ್ ಮಂಜೂರು ಮಾಡಿದ್ದು ಗೊತ್ತೇ ಇದೆ. ದರ್ಶನ್ ಶಸ್ತ್ರ ಚಿಕಿತ್ಸೆ ಹಾಗೂ ಆರೋಗ್ಯ ಸುಧಾರಣೆಗಾಗಿ 6 ವಾರಗಳ ಷರತ್ತುಬದ್ಧ ಜಾಮೀನು ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ನಟ ದರ್ಶನ್‌ ಅವರಿಗೆ ಷರತ್ತುಬದ್ಧ ಜಾಮೀನಿಗಾಗಿ ನಟ ಹಾಗೂ ದರ್ಶನ್ ಸ್ನೇಹಿತ ಧನ್ವೀರ್ ಗೌಡ (Dhanveer Gowda) ಅವರು ಶ್ಯೂರಿಟಿ ಕೊಟ್ಟಿದ್ದು, ಸಂಕಷ್ಟದಲ್ಲೂ ಅಪದ್ಭಾಂಧವ ಎನಿಸಿದ್ದಾರೆ. 

ಹೌದು, ನಟ ಧನ್ವೀರ್ ಗೌಡ ಅವರು ದರ್ಶನ್ ಅವರಿಗೆ ಆಪ್ತರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ದರ್ಶನ್ ಅವರು ಬೆಂಗಳೂರಿನಲ್ಲಿ ಜೈಲಿನಲ್ಲಿ ಇದ್ದಾಗ ನಟ ಧನ್ವೀರ್ ಅವರು ಭೇಟಿಯಾಗಿ ಮಾತನಾಡಿಸಿಕೊಂಡು ಬಂದಿದ್ದರು. ಇದೀಗ, ಅನಾರೋಗ್ಯಕ್ಕೆ ಒಳಗಾಗಿರುವ ದರ್ಶನ್‌ ಅವರಿಗೆ ಟ್ರೀಟ್‌ಮೆಂಟ್‌ಗಾಗಿ ಬೇಲ್ ಮಂಜೂರಿನ ಸಲುವಾಗಿ ಶ್ಯೂರಿಟಿ ಕೊಟ್ಟು 'ನಿಜವಾದ ಸ್ನೇಹಿತ' ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಮೂಲಕ 'ಬಜಾರ್' ಹೀರೋ (Bazaar) ಧನ್ವೀರ್ ಗೌಡ ಅವರು ಸಂಕಷ್ಟದಲ್ಲೂ ಜೊತೆಯಾಗಿರ್ತೀನಿ' ಎಂದು ಅಭಯ ನೀಡಿದ್ದಾರೆ.

Latest Videos

ದರ್ಶನ್ ಸರ್ ನಿರಪರಾಧಿ ಆಗ್ಬಿಟ್ರೆ ನಂಗೆ ಹಬ್ಬ; ಏಷ್ಯಾನೆಟ್ ಸುವರ್ಣಗೆ ತರುಣ್ ಸುಧೀರ್ ಹೇಳಿಕೆ!

ನಟ ದರ್ಶನ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕೋರ್ಟ್‌ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕರೂ ಇದು ಷರತ್ತುಬದ್ಧ! ಜಾಮೀನು ಪಡೆದು ಹೊರಗೆ ಹೋಗುವ ಮುನ್ನ 7 ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಬಳ್ಳಾರಿಯ ವಿಮ್ಸ್ ವೈದ್ಯರ ತಪಾಸಣೆಯ ನಂತರ ನಟ ದರ್ಶನ್‌ಗೆ ಬೆನ್ನು ಹುರಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಪ್ಯಾರಾಲಿಸಿಸ್, ಸ್ಟ್ರೋಕ್ ಹಾಗೂ ನಂಬ್ನೆಸ್ (ಮರಗಟ್ಟುವಿಕೆ) ಕಾಯಿಲೆ ಬರಬಹುದು ಎಂದು ವೈದ್ಯರು ಕೊಟ್ಟ ವರದಿಯನ್ನು ಆಧರಿಸಿ ಜಾಮೀನು ನೀಡಲಾಗಿದೆ. 

ನಟ ದರ್ಶನ್ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯೋದಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಯಿತು. ಇನ್ನು ಕೋರ್ಟ್‌ನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರೂ ನಿರಾಕರಣೆ ಮಾಡಲಾಗಿದ್ದು, ನಟ ದರ್ಶನ್ ಸೂಚಿಸಿದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.

ನಟ ದರ್ಶನ್ ಪುತ್ರ ವಿನೀಶ್‌ಗೆ ಭಾರೀ ಗಿಫ್ಟ್; ನಾಳೆ ಅಪ್ಪನ ಜೊತೆ ಹುಟ್ಟುಹಬ್ಬ!

ಹೈಕೋರ್ಟ್‌ನಿಂದ ಬುಧವಾರ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಪ್ರತಿ ವಾರವೂ ಚಿಕಿತ್ಸೆ ಪಡೆದಿರುವ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನು ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲಿಯೇ, ಕೋರ್ಟ್‌ನಿಂದ 7 ಷರತ್ತುಗಳನ್ನು ವಿಧಿಸಲಾಗಿದೆ.

ನಟ ದರ್ಶನ್ ಮಧ್ಯಂತರ ಜಾಮೀನಿಗೆ ಕೊಟ್ಟ ಏಳು ಷರತ್ತುಗಳು: 

1. ಪಾಸ್ ಪೋರ್ಟ್ ಸರಂಡರ್
2. 2 ಲಕ್ಷ ರೂಪಾಯಿ ಬಾಂಡ್
3. ಇಬ್ಬರು ವ್ಯಕ್ತಿಗಳ ಶ್ಯೂರಿಟಿ
4. ಸಾಕ್ಷಿ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಕೆ ಹಾಕಬಾರದು
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸ ಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು
8. ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು

'ಕಾಲಾಯಾ ತಸ್ಮೈ ನಮಃ' ಅಂತ ನಟಿ ರಚಿತಾ ರಾಮ್ ಹೇಳಿದ್ಯಾಕೆ?

ನಟ ದರ್ಶನ್‌ಗೆ ಕೋರ್ಟ್‌ನಿಂದ ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಕಾಮಾಕ್ಯ ಶಕ್ತಿಪೀಠದ ಫೋಟೋವನ್ನು ಹಂಚಿಕೊಂಡು ಧನ್ಯವಾದವನ್ನು ಅರ್ಪಿಸಿದ್ದಾರೆ. ಡಿ ಬಾಸ್ ಅಭಿಮಾನಿಗಳು ಭಾರೀ ಸಂಭ್ರಮ ಅನುಭವಿಸುತ್ತಿದ್ದಾರೆ. 

click me!