ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿಕೊಂಡಿರುವ ಕಾರಣಕ್ಕೆ ಪವಿತ್ರಾ ಗೌಡ ಸೇರಿದಂತೆ ಒಟ್ಟೂ ಹದಿನೇಳು
ಕುಟುಂಬಗಳು ತೊಂದರೆಗೆ ಸಿಲುಕಿವೆ. ದರ್ಶನ್ ಮಗ ವಿನೀತ್ ಯಾವ ತಪ್ಪೂ ಮಾಡದೇ ತಂದೆಯಿಂದ ದೂರವಾಗಿದ್ದಾನೆ. ಅತ್ತ ಪವಿತ್ರಾ ಗೌಡ ಮಗಳು ಖುಷಿ..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿರುವುದು ಗೊತ್ತೇ ಇದೆ. ಇದೀಗ ದರ್ಶನ್ ಪತ್ನಿ ಮಗನೊಂದಿಗೆ ಕೊಡಗಿನ ಖಾಸಗಿ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನಸ್ಸಿನ ನೆಮ್ಮದಿಗಾಗಿ ಮಗನೊಂದಿಗೆ ಕೊಡಗಿನಲ್ಲಿರೋ ವಿಜಯಲಕ್ಷ್ಮಿ, ಅವರು ದರ್ಶನ್ ಕೇಸಿನಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳ ಮೇಲೆ ಸಹಜವಾಗಿಯೇ ಕಣ್ಣೀಟ್ಟಿದ್ದಾರೆ.
ದರ್ಶನ್ ನ ನೋಡಲು ಮೊನ್ನೆಯಷ್ಡೆ ಪರಪ್ಪನ ಅಗ್ರಹಾರಕ್ಕೆ ಬಂದು ಹೋಗಿದ್ದ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಇದೀಗ ಕೊಡಗಿಗೆ ಶಿಪ್ಟ್ ಆಗಿದ್ದಾರೆ. ದರ್ಶನ್ ಸಧ್ಯಕ್ಕೆ ಪರಪ್ಪನ ಅಗ್ರಹಾರದಿಂದ ಹೊರ ಬರೋದು ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರು ಬಿಟ್ಟು ಮಡಿಕೇರಿ ಸೇರಿದ್ರಾ ವಿಜಯಲಕ್ಷ್ಮಿ ಎಂಬ ಗುಮಾನಿ ಕಾಡತೊಡಗಿದೆ. ಇತ್ತೀಚೆಗೆ ಪತಿಯನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ವಿಜಯಲಕ್ಷ್ಮಿಗೆ ದರ್ಶನ್ ನಾನು ಬರುವುದು ಇನ್ನೂ ಆರೇಳು ತಿಂಗಳಾಗಬಹುದು, ಮಗ ಜೋಪಾನ ಎಂದಿದ್ದಾರೆ ಎನ್ನಲಾಗಿದೆ.
ಏನೋ ಉಪೇಂದ್ರ, ಬುದ್ದಿವಂತ ನೀನು, ಏನ್ ಮಾತಿದು; ಸಖತ್ ಕ್ಲಾಸ್ ತಗೊಂಡ್ರಾ ಅಗ್ನಿ ಶ್ರೀಧರ್!
ಒಟ್ಟಿನಲ್ಲಿ, ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿಕೊಂಡಿರುವ ಕಾರಣಕ್ಕೆ ಪವಿತ್ರಾ ಗೌಡ ಸೇರಿದಂತೆ ಒಟ್ಟೂ ಹದಿನೇಳು
ಕುಟುಂಬಗಳು ತೊಂದರೆಗೆ ಸಿಲುಕಿವೆ. ದರ್ಶನ್ ಮಗ ವಿನೀತ್ ಯಾವ ತಪ್ಪೂ ಮಾಡದೇ ತಂದೆಯಿಂದ ದೂರವಾಗಿದ್ದಾನೆ. ಅತ್ತ ಪವಿತ್ರಾ ಗೌಡ ಮಗಳು ಖುಷಿ ಕೂಡ ಯಾವುದೇ ತಪ್ಪು ಮಾಡದಿದ್ದರೂ ಅಮ್ಮನಿಲ್ಲದೇ ನೀವು ಅನುಭವಿಸುತ್ತಿದ್ದಾಳೆ. ವಿಜಯಲಕ್ಷ್ಮೀ ಕೂಡ ಪತಿಯಿಂದ ದೂರವಾಗಿ ಕಷ್ಟಕ್ಕೆ ಸಿಲುಕಿದ್ದಾರೆ. ಪವಿತ್ರಾ ಗೌಡ ಅವರಿಗೆ ದರ್ಶನ್ ಪಕ್ಕದಲ್ಲೇ ಇದ್ದರೂ ಮಾತನಾಡಲು ಸಾಧ್ಯವಿಲ್ಲವಾಗಿದೆ.
ಹೈಜಾಕ್ ಆಯ್ತಾ ರಾಕಿಂಗ್ ಸ್ಟಾರ್ ಫಾರ್ಮುಲಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!
ಇನ್ನು, ದರ್ಶನ್ ಗ್ಯಾಂಗ್ ಎಂದು ಕರೆಸಿಕೊಳ್ಳುತ್ತಿರುವ 15 ಜನರು, ಅವರ ಫ್ಯಾಮಿಲಿ ಕೂಡ ಈ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ತುಂಬಾ ನರಳಾಟ ಅನುಭವಿಸುವಂತಾಗಿದೆ. ಆದರೆ ಮಾಡುವುದೇನು? ಮಾಡಿದ್ದುಣ್ಣೋ ಮಾರಾಯ ಎನ್ನಬಹುದಾ ಗೊತ್ತಿಲ್ಲ! ಯಾಕಂದ್ರೆ, ಕೇಸ್ ಇನ್ನೂ ಪ್ರಗತಿಯಲ್ಲಿದೆ, ಅಪರಾಧಿ ಯಾರು, ನಿರಪರಾಧಿ ಯಾರು ಎಂದು ಕೋರ್ಟ್ ತೀರ್ಮಾನ ಬರಬೇಕಿದೆ.
ಕ್ಲಾಸ್ ತಗೊಂಡ್ರಾ ಸೋನು ನಿಗಮ್‌ಗೆ, ಆಶಾ ಭೋಂಸ್ಲೆಗೆ ಪಾದ ಪೂಜೆ ಮಾಡಿದ್ದು ಸರಿನಾ...?