
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಣ್ಣನ ಸ್ಥಾನದಲ್ಲಿ ನೋಡಿದ ಅಭಿಷೇಕ್ ಅಂಬರೀಶ್ ಬಿಡುವಿದ್ದಾಗಲೆಲ್ಲಾ ಭೇಟಿ ಮಾಡಿ, ಸಮಯ ಕಳೆಯುತ್ತಾರೆ. ಇಬ್ಬರೂ ಸಿನಿಮಾದಿಂದ ಕೊಂಚ ಬ್ರೇಕ್ ತೆಗದುಕೊಂಡು ಫ್ರೆಶ್ ಆಗಲು ಕ್ರಿಕೆಟ್ ಆಡಿದ್ದಾರೆ.
ರಿಯಲ್ ಸಾರಥಿ ಜೊತೆ ದರ್ಶನ್; ಶಾಲಾ ಬಸ್ ಡ್ರೈವರ್‌ಗೆ 80ನೇ ಹುಟ್ಟುಹಬ್ಬ!
ಕ್ರಿಕೆಟ್ ಆಟ ಆಡುವಾಗ ದರ್ಶನ್ ಪರಸ್ಪರ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡಿದ್ದಾರೆ. ಮೋಸ ಮಾಡ್ತಾನೇ ಇರ್ತಾರೆ, ಆದರೂ ನಾವು ಗೆಲ್ಲಲೇಬೇಕು It's Okay ಎಂದು ಕೊಂಡು ಅಭಿಷೇಕ್ ಗೆಳೆಯನ ಮೇಲೆ ಕೈ ಹಾಕಿಕೊಂಡು ನಡೆದುಕೊಂಡು ಹೋಗುತ್ತಾರೆ, ತಕ್ಷಣವೇ ದರ್ಶನ್ ಹಿಂದೆಯಿಂದ ಬಂದು ಅಭಿಷೇಕ್‌ಗೆ ತಮಾಷೆಯಿಂದ ಒದೆಯೋಕೆ ಹೋಗುತ್ತಾರೆ. ನಗು ನಗುತ್ತಲೇ ಅಭಿ ಎಸ್ಕೇಪ್ ಆಗುತ್ತಾರೆ.
ಈ ತಮಾಷೆ ಫೈಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಣ್ಣ ತಮ್ಮಂದಿರ ನಡುವೆ ಈ ರೀತಿ ಸಂಭಾಷಣೆ ನಡೆಯುವುದು ತುಂಬಾನೇ ಕಾಮನ್. ಡಿ-ಬಾಸ್ ಹುಲ್ಲಿನ ಮೇಲೆ ಬಿದ್ದು ನಗುತ್ತಿರುವುದನ್ನು ನೋಡಿ, ಪುಟ್ಟ ಪಾಪು ರೀತಿ ಭಾಸವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ ಫ್ಯಾನ್ಸ್.
ಮಂತ್ರಾಲಯ ರಾಯರ ದರ್ಶನ ಪಡೆದು ಗೋಶಾಲೆಗೆ ಭೇಟಿ ಕೊಟ್ಟ ನಟ ದರ್ಶನ್; ಫೋಟೋಗಳಿವು!
ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಅಭಿಷೇಕ್ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಹಾಗೂ ಅಭಿಷೇಕ್ ಕಾಂಬಿನೇಷನ್ ಅನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ದರ್ಶನ್ ರಾಬರ್ಟ್ ವಿಜಯ ಯಾತ್ರೆಗೆ ಸಿದ್ಧತೆಯಲ್ಲಿದ್ದರು, ಆದರೆ ಸರ್ಕಾರ ಅನುಮತಿ ಹಿಂಪಡೆದುಕೊಂಡ ಕಾರಣ ಯಾತ್ರೆಗೆ ಬ್ರೇಕ್ ಬಿದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.